ನಯನತಾರ ಹಾಗೂ ವಿಜ್ಞೇಶ್ ಮದುವೆಗೆ ಬರುವವರಿಗೆ ಎಷ್ಟೊಂದು ಷರತ್ತು. ಮದುವೆಗೆ ಹೋಗಬೇಕು ಎಂದರೆ ಇವೆಲ್ಲ ಫಾಲೋ ಮಾಡಲೇಬೇಕು. ಏನೆಲ್ಲಾ ಗೊತ್ತೇ?

25

ಕಾಲಿವುಡ್ ನ ಸೆನ್ಸೇಷನಲ್ ಜೋಡಿ ಎನ್ನಿಸಿಕೊಂಡಿರುವ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. 7 ವರ್ಷಗಳಿಂದ ಈ ಜೋಡಿ ಒಬ್ಬನರನ್ನೊಬ್ಬರು ಪ್ರೀತಿಸುತ್ತಿದ್ದರು, ಇದೀಗ ಈ ಜೋಡಿ ಮದುವೆ ಆಗುತ್ತಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇದ್ದವು, ಇದೀಗ ಈ ಜೋಡಿ ಮದುವೆ ಆಗುತ್ತಿರುವುದು ಇವರಿಬ್ಬರ ಅಭಿಮಾನಿಗಳಿಗೆ ಸಂತೋಷವಾಗಿದೆ. ಇನ್ನು ಈ ಜೋಡಿಯ ಮದುವೆಗೆ ಬರಲಿರುವ ಗೆಸ್ಟ್ ಗಳಿಗೂ ಸಹ ಷರತ್ತುಗಳನ್ನು ವಿಧಿಸಲಾಗಿದೆ. ಆ ಷರತ್ತುಗಳು ಏನೇನು? ತಿಳಿಸುತ್ತೇವೆ ನೋಡಿ.

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಅಂದ್ರೆ, ಎಲ್ಲವನ್ನು ಗುಟ್ಟಾಗಿ ಇಡಲಾಗುತ್ತದೆ. ಮಾಧ್ಯಮದವರಿಗೆ ಎಂಟ್ರಿ ಇರುವುದಿಲ್ಲ, ಜೊತೆಗೆ ಬರುವ ಅತಿಥಿಗಳಿಗೆ ವಿಶೇಷವಾಗಿ ಡ್ರೆಸ್ ಕೋಡ್ ಹೀಗೆ ಅನೇಕ ವಿಚಾರ ಇರುತ್ತದೆ. ವಿಘ್ನೇಶ್ ಶಿವನ್ ಮತ್ತು ನಯನತಾರ ಅವರ ಮದುವೆಗೂ ಮಾಧ್ಯಮದವರಿಗೆ ಎಂಟ್ರಿ ನೀಡಿಲ್ಲ. ಇಂದು ಅಂದರೆ ಜೂನ್ 9ರಂದ್, ರಾತ್ರಿ 8 ಗಂಟೆಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಅವರ ಮದುವೆ ನಡೆಯಲಿದೆ. ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ, ಆದರೆ ಹೆಚ್ಚಿನ ಜನರಿಗೆ ಇವರಿಬ್ಬರು ಆಮಂತ್ರಣ ನೀಡಿಲ್ಲ. ತಮಿಳುನಾಡಿನ ಮಹಾಬಲಿಪುರಂ ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆಗೆ ಬರುವ ಅತಿಥಿಗಳು ಅಲ್ಲಿನ ಯಾವುದೇ ಫೋಟೋಗಳನ್ನು ತೆಗೆಯಬಾರದು ಎನ್ನುವ ಶರತ್ತನ್ನು ಸಹ ವಿಧಿಸಲಾಗಿದೆ. ಜೊತೆಗೆ ಇವರಿಬ್ಬರ ಮದುವೆಗೆ ಬರುವ ಅತಿಥಿಗಳಿಗೆ ಇರುವ ಡ್ರೆಸ್ ಕೋಡ್ ಪೇಸ್ಟಲ್ ಡ್ರೆಸ್. ಮದುವೆಗೆ ಬರುವ ಅತಿಥಿಗಳು ಪೇಸ್ಟಲ್ ಡ್ರೆಸ್ ಧರಿಸಿ ಬರಬೇಕು, ಇದನ್ನು ವಧುವರರ ಉಡುಪಿಗೆ ತಕ್ಕ ಹಾಗೆ ಡಿಸೈನ್ ಮಾಡಲಾಗಿದೆಯಂತೆ. ಇನ್ನು ಇವರಿಬ್ಬರ ಮದುವೆ ಆಮಂತ್ರಣ ಪತ್ರಿಕೆ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ. ಸಿಂಪಲ್ ಆಗಿರುವ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿದೆ. ಇನ್ನು ಈ ಜೋಡಿಯ ಮದುವೆ ಹೇಗಿರುತ್ತದೆ ಎಂದು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.