ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಪಣತೊಟ್ಟಿರುವ BSY. ಬಿಜೆಪಿ ಗೆದ್ದರೆ ಸಿಎಂ ಪಟ್ಟಕ್ಕೆ ಏರುವ ಯುವ ನಾಯಕ ಯಾರು ಗೊತ್ತೇ??

8

ಮುಂದಿನ ವರ್ಷ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ. ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕಸರತ್ತು ಮಾಡುತ್ತಿವೆ. ಈ ನಡುವೆ ಬಿಜೆಪಿ ಪಕ್ಷವು ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅದರ ನಡುವೆಯೇ ಮುಂದಿನ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರು ಸಿಎಂ ಆಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಬಿಜೆಪಿ ಶಾಸಕರು ವಿಜಯೇಂದ್ರ ಅವರೇ ಸಿಎಂ ಆಗಬಹುದು ಎನ್ನುವಂಥಾ ಮಾತುಗಳನ್ನು ಹೇಳುತ್ತಿದ್ದಾರೆ.

ಬಿಜೆಪಿಯ ಕೆಲವು ಶಾಸಕರು ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ವಿಜಯೇಂದ್ರ ಅವರು ಮುಂದಿನ ಸಿಎಂ ಆದರೆ ತಪ್ಪೇನು ಎನ್ನುವ ಮಾತುಗಳನ್ನಾಡುತ್ತಿದ್ದಾರೆ, ಎರಡು ದಿನಗಳ ಹಿಂದೆ ಸಚಿವ ನಾರಾಯಣ ಗೌಡ ಅವರು ವಿಜಯೇಂದ್ರ ಅವರ ಬಗ್ಗೆ ಮಾತನಾಡಿ, ಬಿ.ಎಸ್.ವೈ ಅವರ ಮಗ ಸಿಎಂ ಆದರೆ ತಪ್ಪೇನು? ನಾವೆಲ್ಲರೂ ಬಿಜೆಪಿಗೆ ಸೇರಿದ್ದು, ಯಡಿಯೂರಪ್ಪ ಅವರನ್ನು ನೋಡಿದಮೇಲೆ, ವಿಜಯೇಂದ್ರ ಅವರಲ್ಲಿ ನಾಯಕತ್ವದ ಗುಣ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಸಚಿವ ಮುರುಗೇಶ್ ಅವರು ಸಹ ವಿಜಯಪುರದಲ್ಲಿ ಮಾತನಾಡಿ, ಪ್ರಧಾನಿಯ ಮಗ ಕೂಡ ಸಿಎಂ ಆಗಿದ್ದಾರೆ, ಅಂಥದ್ರಲ್ಲಿ ಸಿಎಂ ಮಗ ಸಿಎಂ ಆದರೆ ತಪ್ಪೇನು ಎನ್ನುವ ಮಾತು ಹೇಳಿದ್ದಾರೆ. ಈ ಮಾತುಗಳ ಮೂಲಕ ಬಿಜೆಪಿ ನಾಯಕರು, ಹೈಕಮಾಂಡ್ ಗೆ ಸೆಡ್ಡು ಹೊಡೆಯುವ ಪ್ಲಾನ್ ಮಾಡುತ್ತಿರುವ ಜಾಗೆ ತೋರುತ್ತಿದೆ.

ಬಿ.ವೈ.ವಿಜಯೇಂದ್ರ ಅವರಿಗೆ ಪರಿಷತ್ ನಲ್ಲಿ ಸ್ಥಾನ ನೀಡದೆ ಅವರನ್ನು ಹೊರಗಿಡಲಾಗಿತ್ತು, ಆದರೆ ಇದಕ್ಕೆ ಯಡಿಯೂರಪ್ಪ ಅವರು ತಲೆ ಕೆಡಿಸಿಕೊಳ್ಳದೆ, ಮುಂದಿನ 10 ವರ್ಷಗಳು ತಮ್ಮ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ. ಮುಂದಿನ ಎಲೆಕ್ಷನ್ ನಲ್ಲಿ ಬಿ.ಎಸ್.ವೈ ಅವರು ಪ್ರಚಾರ ಕೈಗೊಳ್ಳಲಿದ್ದಾರೆ. ಹಾಗೂ ಮಗನಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟು, ಮಗನನ್ನು ಗೆಲ್ಲಿಸಿ, ಶಾಸಕನನ್ನಾಗಿ ಮಾಡಿ, ನಂತರ ಪಕ್ಷವನ್ನು ಗೆಲ್ಲಿಸಿದ್ದಾಗ, ತಮ್ಮ ಮಗನಿಗೆ ಸಿಎಂ ಸ್ಥಾನ ಕೇಳುವ ಪ್ಲಾನ್ ಮಾಡಿಕೊಂಡಿದ್ದಾರೆ ಬಿ.ಎಸ್.ವೈ ಅವರು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಈ ಪ್ಲಾನ್ ಇಂದಲೇ ಬಿಜೆಪಿ ಶಾಸಕರ ವಿಜಯೇಂದ್ರ ಅವರ ಹೆಸರನ್ನು ಎಲ್ಲೆಡೆ ಹೇಳುತ್ತಿದ್ದಾರೆ.