ರಕ್ಷಿತ್ ಶೆಟ್ಟಿ ಋಣದಲ್ಲಿ ಇರುವ ರಶ್ಮಿಕಾ: ಆದರೆ ಹುಟ್ಟು ಹಬ್ಬದ ದಿನವೇ ರಕ್ಷಿತ್ ರವರಿಗೆ ಒಂದು ವಿಶ್ ಕೂಡ ಮಾಡಲಿಲ್ಲ.

14

ಜೂನ್ 6ರಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬ. ಈ ವರ್ಷ ರಕ್ಷಿತ್ ಅವರಿಗೆ ಬಹಳ ಸ್ಪೆಷಲ್ ಆದ ಹುಟ್ಟುಹಬ್ಬ ಎಂದರೆ ತಪ್ಪಲ್ಲ, 777ಚಾರ್ಲಿ ಸಿನಿಮಾ ಬಿಡುಗಡೆ ಆಗುವ ಮೊದಲೇ, ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ, ಹಲವೆಡೆ ಪ್ರೀಮಿಯರ್ ಶೋ ನಡೆದು ಜನರು ಭಾವುಕರಾಗಿ, ಸಿನಿಮಾ ನೋಡಿ ಸಂತೋಷಪಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಚಂದನವನದ ಸಾಕಷ್ಟು ಕಲಾವಿದರು ವಿಶ್ ಮಾಡಿದರು, ಚಾರ್ಲಿ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಸಹ ಆಡುತ್ತಿದ್ದಾರೆ. ಆದರೆ ರಕ್ಷಿತ್ ಅವರ ಹುಟ್ಟುಹಬ್ಬಕ್ಕೆ ರಶ್ಮಿಕಾ ಮಂದಣ್ಣ ಒಂದು ವಿಶ್ ಸಹ ಮಾಡಿಲ್ಲ.

ರಶ್ಮಿಕಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಾರಣ ಆದವರೆ ರಕ್ಷಿತ್ ಶೆಟ್ಟಿ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಈ ಸಿನಿಮಾದ ಸಕ್ಸಸ್ ರಶ್ಮಿಕಾ ಅವರಿಗೆ ಚಿತ್ರರಂಗದಲ್ಲಿ ಖಾಯಂ ಸ್ಥಾನ ನೀಡಿತು ಜೊತೆಗೆ ಬಿಗ್ ಸ್ಟಾರ್ ಗಳ ಜೊತೆಗೆ ನಟಿಸುವ ಅವಕಾಶ ಸಿಕ್ಕಿತು. ಇದೆಲ್ಲದಕ್ಕೂ ಕಾರಣವಾದ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡದೆ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡದ ಹಲವು ನಟರ ಹುಟ್ಟುಹಬ್ಬಕ್ಕೆ ಅಥವಾ ನಟರು ಇನ್ನಿಲ್ಲವಾದಾಗ ಆದರೂ ರಶ್ಮಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಸಹ ಮಾಡುವುದಿಲ್ಲ, ಈ ವರ್ಷ ರಕ್ಷಿತ್ ಅವರ ಹುಟ್ಟುಹಬ್ಬಕ್ಕೂ ಸಹ ವಿಶ್ ಮಾಡಿಲ್ಲ. ಇದರಿಂದಾಗಿ ಅಭಿಮಾನಿಗಳು, ನೀವು ರಕ್ಷಿತ್ ಅವರ ಋಣದಲ್ಲಿದ್ದೀರಿ ಎಂದು ಹೇಳುತ್ತಿದ್ದಾರೆ..

ರಕ್ಷಿತ್ ಅವರಿಗೆ ವಿಶ್ ಮಾಡದೆ ಇರುವ ಕಾರಣಕ್ಕೆ ರಶ್ಮಿಕಾ ಅವರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ರಶ್ಮಿಕಾ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ರಕ್ಷಿತ್ ಅವರು, ಆಕೆ ಅಷ್ಟು ಎತ್ತರಕ್ಕೆ ಬೆಳೆದಿರುವುದು ಸಂತೋಷವಿದೆ ಎಂದು ಹೇಳಿದರು. ಏಪ್ರಿಲ್ 5ರಂದು ರಶ್ಮಿಕಾ ಅವರ ಹುಟ್ಟುಹಬ್ಬಕ್ಕೆ, ಪರಂವಃ ಸಂಸ್ಥೆಯ ವತಿಯಿಂದ ವಿಶ್ ಮಾಡಲಾಗಿತ್ತು. ಆದರೆ ರಕ್ಷಿತ್ ಅವರ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡಲಿಲ್ಲ, ಅಲ್ಲದೇ ರಶ್ಮಿಕಾ ಅವರು ಸಹ ರಕ್ಷಿತ್ ಅವರ ಬಗ್ಗೆ ಎಲ್ಲಿಯು ಬೇರೆ ಮಾತನಾಡಲಿಲ್ಲ. ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ. ಈ ಜೋಡಿ ಪ್ರೀತಿಸುತ್ತಿರುವ ವಿಚಾರ ಹೊರಬಂದ ಬಳಿಕ, ಅಭಿಮಾನಿಗಳು ಬಹಳ ಸಂತೋಷಪಟ್ಟಿದ್ದರು. ನಿಶ್ಚಿತಾರ್ಥವು ನಡೆದ ಬಳಿಕ ವೈಯಕ್ತಿಕ ಕಾರಣಗಳಿಂದ ಈ ಜೋಡಿ, ದೂರವಾದರು.