ಮಾಜಿ ಪತ್ನಿ ವಿರುದ್ಧ ಕೋರ್ಟ್ ನಲ್ಲಿ ಕೋಟಿ ಕೋಟಿ ಗೆದ್ದ ಮೇಲೆ ಹಾಲಿವುಡ್ ನಟ ಜಾನಿ ಡೆಪ್ ಖುಷಿಯಲ್ಲಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ?ಯಪ್ಪಾ ಇಷ್ಟೊಂದ?
ವಿಶ್ವದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ನಟ ಜಾನಿ ಡೆಪ್ ಅವರು ತಮ್ಮ ಮಾಜಿ ಪತ್ನಿ ವಿರುದ್ಧ ಕೋರ್ಟ್ ನಲ್ಲಿ, ಮಾನನಷ್ಟ ಮೊಕದ್ದಮೆಯ ಕೇಸ್ ಗೆದ್ದಿದ್ದು, ಇದನ್ನು ದೊಡ್ಡ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಮೊದಲಿಗೆ ಪತ್ನಿಯ ವಿರುದ್ಧ ಕೇಸ್ ಗೆದ್ದು ಖುಷಿಯಾಗಿದ್ದ ಇವರು, ಇದೀಗ ಕೇಸ್ ಗೆದ್ದ ಖುಷಿಯಲ್ಲಿ ಸ್ನೇಹಿತರಿಗೆ ನೀಡಿದ ಪಾರ್ಟಿಗೆ, ಇವರು ಖರ್ಚು ಮಾಡಿರುವ ಹಣ ಎಷ್ಟು ಲಕ್ಷ ಎನ್ನುವ ವಿಚಾರ ಹೊರಬಂದು, ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಪಾರ್ಟಿಗೆ ಜಾನಿ ಡೆಪ್ ಅವರು ಖರ್ಚು ಮಾಡಿರುವುದು ಎಷ್ಟು ಹಣ? ಪಾರ್ಟಿ ನಡೆದಿದ್ದು ಎಲ್ಲಿ ಗೊತ್ತಾ? ತಿಳಿಸುತ್ತೇವೆ ನೋಡಿ..
ಜಾನಿ ಡೆಪ್ ಅವರು ಪತ್ನಿ ಅಂಬರ್ ಹರ್ಡ್ ಅವರಿಂದ ವಿಚ್ಛೇದನ ಪಡೆದರು. ಆದರೆ ಜಾನಿ ಡೆಪ್ ಅವರ ಪತ್ನಿ ಮಾಜಿ ಗಂಡನ ವಿರುದ್ಧ ಮಾನನಷ್ಟ ಮೊಕದ್ದಮೆಯ ಕೇಸ್ ಹಾಕಿದ್ದರು. ಮದುವೆಗಿಂತ ಮೊದಲು ಹಾಗೂ ಮದುವೆಯ ನಂತರ ತಮ್ಮ ಮೇಲೆ ಜಾನಿ ಡೆಪ್ ಅವರು ನಿಂದನೆ ಮಾಡಿದ್ದಾರೆ ಎಂದು ಆರೋಪ ಮಾಡಿ, ಅಂಬರ್ ಹರ್ಡ್ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಆದರೆ ಜಾನಿ ಡೆಪ್ ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷಿ ಮತ್ತು ಆಧಾರ ಇಲ್ಲದ ಕಾರಣ, ಈ ಕೇಸ್ ನಲ್ಲಿ ಅಂಬರ್ ಹರ್ಡ್ ಅವರು, ಈ ಕೇಸ್ ನಲ್ಲಿ ಸೋಲನ್ನು ಕಂಡಿದ್ದಾರೆ. ಈ ಮೂಲಕ ಜಾನಿ ಡೆಪ್ ಅವರಿಗೆ ಪತ್ನಿಯ ಕೇಸ್ ವಿರುದ್ಧ ಗೆಲುವು ಸಿಕ್ಕಿದ್ದು, ಇದೀಗ ನ್ಯಾಯಾಲಯವು ಅಂಬರ್ ಹರ್ಡ್ ಅವರು 10.15 ಮಿಲಿಯನ್ ಡಾಲರ್ ಅನ್ನು ಪರಿಹಾರವಾಗಿ ಜಾನಿ ಡೆಪ್ ಅವರಿಗೆ ನೀಡಬೇಕು ಎಂದು ಆದೇಶ ನೀಡಿದೆ.

ಕೇಸ್ ಗೆದ್ದಿರುವ ಸಂತೋಷದಲ್ಲಿ ಜಾನಿ ಡೆಪ್ ಅವರು ತಮ್ಮ ಸ್ನೇಹಿತರಿಗೆ ವಿಶೇಷವಾದ ಭೋಜನ ಕೂಟ ಏರ್ಪಾಡು ಮಾಡಿ, ಅವರಿಗೆಲ್ಲ ಪಾರ್ಟಿ ನೀಡಿದ್ದಾರೆ. ಈ ಪಾರ್ಟಿಗೆ ಬರೊಬ್ಬರಿ 48 ಲಕ್ಷ ರೂಪಾಯಿ ಖರ್ಚು ಆಗಿದೆ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿರುವ ಅತಿದೊಡ್ಡ ಭಾರತೀಯ ರೆಸ್ಟೋರೆಂಟ್ ನಲ್ಲಿ, ಸ್ನೇಹಿತರಿಗೆ ಭೋಜನ ಕೂಟ ಏರ್ಪಡಿಸಿದ್ದರು ಜಾನಿ ಡೆಪ್. ಇದಕ್ಕಾಗಿ 48 ಲಕ್ಷ ರೂಪಾಯಿ ಖರ್ಚು ಮಾಡಿರುವ ವಿಚಾರ ಈಗ ದೊಡ್ಡದಾಗಿ ಸುದ್ದಿಯಾಗುತ್ತಿದೆ. ಜಾನಿ ಡೆಪ್ ವಾರ ಗೆಲುವು ಸಹ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಮಹಿಳೆಯ ವಿರುದ್ಧ ಆರ್ಗ್ಯುಮೆಂಟ್ ನಲ್ಲಿ ಗೆದ್ದ ಮೊದಲ ಪುರುಷ ಎಂದು ಜಾನಿ ಡೆಪ್ ಅವರ ಬಗ್ಗೆ ಹಲವು ಮೀಮ್ಸ್ ಗಳು ಸಹ ಹರಿದಾಡುತ್ತಿವೆ.