ಎಲ್ಲವೂ ಚೆನ್ನಾಗಿದ್ದಾಗ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಜಿಯೋ: ತೆಗೆದುಕೊಂಡ ಮತ್ತೊಂದು ನಿರ್ದಾರವೇನು ಗೊತ್ತೇ?

24

ಭಾರತದಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿರುವ ಟೆಲಿಕಾಂ ಸಂಸ್ಥೆ ಜಿಯೋ. ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮವಾದ ಆಫರ್ ಗಳನ್ನು ನೀಡುತ್ತಿದ್ದ ಜಿಯೋ ಸಂಸ್ಥೆ ಇದೀಗ ತಮ್ಮ ಒಂದು ಪ್ಲಾನ್ ನ ಬೆಲೆಯನ್ನು ಏರಿಕೆ ಮಾಡಿದ್ದು, ಅದನ್ನು ನೋಡಿದ ಗ್ರಾಹಕರಿಗೆ ನಿಜಕ್ಕೂ ಶಾಕ್ ಆಗಿದೆ. ಜಿಯೋ ಸಂಸ್ಥೆ ಇದ್ದಕ್ಕಿದ್ದ ಹಾಗೆ ಪ್ಲಾನ್ ನ ಬೆಲೆಯನ್ನು ಏರಿಕೆ ಮಾಡಿದೆ. 749 ರೂಪಾಯಿಯ ಪ್ಲಾನ್ ನಲ್ಲಿ ಮಾತ್ರ ಬೆಲೆ ಏರಿಕೆ ಆಗಿದ್ದು, ಬೇರೆ ಎಲ್ಲಾ ಪ್ಲಾನ್ ಗಳ ಬೆಲೆ ಅದೇ ರೀತಿ ಇದೆ.

749 ರೂಪಾಯಿಯ ಪ್ಲಾನ್ ನಲ್ಲಿ, ಬರೋಬ್ಬರಿ 150 ರೂಪಾಯಿಗಳು ಹೆಚ್ಚಳವಾಗಿದೆ. 4ಜಿ ಸಿಮ್ ಗಳಿಗೆ ಈ ಸಂಸ್ಥೆಯು ₹1999, ₹1499, ಹಾಗೂ ₹749 ರೂಪಾಯಿಗಳ ಪ್ಲಾನ್ ಆಗಿತ್ತು. ಗ್ರಾಹಕರು ಇವುಗಳಲ್ಲಿ ಯಾವುದಾದರು ಒಂದು ಪ್ಲಾನ್ ಆಯ್ಕೆ ಮಾಡಬಹುದಿತ್ತು, ಇದೀಗ ಜಿಯೋ ಸಂಸ್ಥೆಯು, ₹749 ರೂಪಾಯಿ ಇದ್ದ ಪ್ಲಾನ್ ಅನ್ನು, ₹899 ರೂಪಾಯಿ ಮಾಡಿದೆ. ಇದು ಜಿಯೋ ಫೋನ್ ನ ರೀಚಾರ್ಜ್ ಆಗಿದ್ದು, ಈ ಪ್ಲಾನ್ ನ ವ್ಯಾಲಿಡಿಟಿ 1 ವರ್ಷದ ವರೆಗೂ ಇರುತ್ತದೆ. ಪೂರ್ತಿ ವ್ಯಾಲಿಡಿಟಿ ಇರುವ ಸಮಯದ ವರೆಗೂ 24 ಜಿಬಿ ಡೇಟಾ ಸಿಗುತ್ತದೆ, ಜೊತೆಗೆ ಜಿಯೋ ಅಪ್ಲಿಕೇಶನ್ ಗಳ ಸಬ್ಸ್ಕ್ರಿಪ್ಶನ್ ಸಹ ಸಿಗುತ್ತದೆ.

ಹಾಗೂ ₹1499 ರೂಪಾಯಿಯ ಪ್ಲಾನ್ ನ ಅವಧಿ 1 ವರ್ಷ ಇರುತ್ತದೆ ,ಹಾಗೂ ಪ್ರತಿತಿಂಗಳು 2 ಜಿಬಿ ಡೇಟಾ, ಒಟ್ಟಾಗಿ 24ಜಿಬಿ ಡೇಟಾ ಸಿಗುತ್ತದೆ. ಹಾಗೂ ₹1999 ರೂಪಾಯಿಯ ಪ್ಲಾನ್ ನಲ್ಲಿ ಗ್ರಾಹಕರು, ಜಿಯೋಫೋನ್ ಡಿವೈಸ್ ಮತ್ತು 24 ತಿಂಗಳುಗಳ ಕಾಲ ಉಚಿತ ಸೇವೆ ಸಿಗುತ್ತದೆ, 2 ವರ್ಷಗಳ ವರೆಗೂ, ಗ್ರಾಹಕರು ಅನಿಯಮಿತ ಉಚಿತ ಕರೆಗಳನ್ನು ಪಡೆಯಬಹುದು. ಹಾಗೂ ಅನಿಯಮಿತ ಡೇಟಾ ಸಹ ಸಿಗುತ್ತದೆ. ಜಿಯೋದಲ್ಲಿ 75 ರೂಪಾಯಿಯ ಪ್ಲಾನ್ ಇದ್ದು, ಇದರಲ್ಲಿ, ಅವಧಿ ಮುಗಿಯುವ ವರೆಗೂ 300 ಉಚಿತ ಎಸ್.ಎಂ.ಎಸ್ ಗಳು, ಹಾಗೂ 3ಜಿಬಿ ಡೇಟಾ ಸಿಗುತ್ತದೆ. ಹಾಗೂ 500 ನಿಮಿಷಗಳ ಉಚಿತ ಕರೆಗಳ ಸೌಲಭ್ಯ ಇರುತ್ತದೆ. ಹಾಗೂ ಜಿಯೋ 125 ರೂಪಾಯಿಯ ರೀಚಾರ್ಜ್ ಪ್ಲಾನ್ ನಲ್ಲಿ, ಪೂರ್ತಿ ವ್ಯಾಲಿಡೀತಿಗೆ 14 ಜಿಬಿ ಡೇಟಾ ಸಿಗುತ್ತದೆ, 300 ಎಸ್.ಎಂ.ಎಸ್ ಗಳು ಉಚಿತವಾಗಿ ಸಿಗುತ್ತದೆ, ಹಾಗೂ 500 ನಿಮಿಷಗಳ ಉಚಿತ ಕರೆಗಳು ಸಿಗಲಿದ್ದು, 28 ದಿನಗಳ ವರೆಗೆ ಮಿತಿಯನ್ನು ಹೊಂದಿದೆ.