ಸೌತ್ ಆಫ್ರಿಕಾ ವಿರುದ್ದದ ಮೊದಲ ಪಂದ್ಯಕ್ಕೆ ಹನ್ನೊಂದ ಬಳಗವನ್ನು ಆಯ್ಕೆ ಮಾಡಿದ ರವಿ ಶಾಸ್ತ್ರೀ. ಆಯ್ಕೆ ಮಾಡಿದ್ದು ಯಾರ್ಯಾರನ್ನು ಗೊತ್ತೇ?

16

ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿರುವ, ಕ್ರಿಕೆಟ್ ಲೋಕದ ಲೆಜೆಂಡ್ ಎಂದು ಹೆಸರಾಗಿರುವ ರವಿ ಶಾಸ್ತ್ರಿ ಅವರು, ಆಗಾಗ ತಾವು ನೀಡುವ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಇದೀಗ ರವಿಶಾಸ್ತ್ರಿ ಅವರು, ಸೌತ್ ಆಫ್ರಿಕಾ ತಂಡದ ನಡುವೆ ಜೂನ್ 9ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಸರಣಿ ಪಂದ್ಯದ ಆರಂಭದ ಪಂದ್ಯಕ್ಕೆ, ತಮ್ಮ ಅಭಿರುಚಿಯ ಪ್ಲೇಯಿಂಗ್ 11 ಟೀಮ್ ಅನ್ನು ಹೆಸರಿಸಿದ್ದಾರೆ. ಇವರು ಸಹ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ, ತಮ್ಮ ಪ್ಲೇಯಿಂಗ್ 11 ಆಟಗಾರರನ್ನು ಹೆಸರಿಸಿದ್ದಾರೆ.

ರವಿಶಾಸ್ತ್ರಿ ಅವರು ತಮ್ಮಿಷ್ಟದ ತಂಡವನ್ನು ರಚಿಸಿದ್ದು, ಈ ವರ್ಷದ ಸ್ಟಾರ್ ಪ್ಲೇಯರ್ ಎನ್ನಿಸಿಕೊಂಡಿರುವ ದಿನೇಶ್ ಕಾರ್ತಿಕ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿಲ್ಲ. ಬದಲಾಗಿ, ಈ ವರ್ಷ ಐಪಿಎಲ್ ಟ್ರೋಫಿ ಗೆದ್ದ ಹಾರ್ದಿಕ್ ಪಾಂಡ್ಯ ಅವರನ್ನು ಫಿನಿಷರ್ ಆಗಿ ಸೇರಿಸಿಕೊಂಡಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ಸ್ ಗಳಿಸಿದ ಬ್ಯಾಟ್ಸ್ಮನ್ ಗಳಲ್ಲಿ 4ನೇ ಸ್ಥಾನದಲ್ಲಿದ್ದರು ಹಾರ್ದಿಕ್ ಪಾಂಡ್ಯ. ಇನ್ನು ಪಂದ್ಯದ ಓಪನರ್ ಗಳಾಗಿ, ರವಿಶಾಸ್ತ್ರಿ ಅವರು, ಕೆ.ಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದು, ಅವರೊಡನೆ ಋತುರಾಜ್ ಗಾಯಕ್ವಾಡ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಜೊತೆಗೆ, ಇಶಾನ್ ಕಿಶನ್ ಅವರನ್ನು 3ನೇ ಸ್ಥಾನದಲ್ಲಿ ಇಟ್ಟಿದ್ದಾರೆ. ಕಿಶನ್ ನಂತರದ ಸ್ಥಾನದಲ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆಮಾಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಗೇಮ್ ಪ್ಲಾನ್ ಶೋನಲ್ಲಿ ಮಾತನಾಡಿದ ರವಿ ಶಾಸ್ತ್ರಿಅವರು, “ಅವರೆಲ್ಲರೂ ನೋಡಲು ಬಯಸುವ ಆಟಗಾರರನ್ನು ಮೊದಲು ಹಾಕುತ್ತಾರೆ, ರಾಹುಲ್, ನಂತರ ಋತುರಾಜ್ ಗಾಯಕ್ವಾಡ್, ನಂತರ ಮೂರನೆಯ ಸ್ಥಾನಕ್ಕೆ ಇಶಾನ್ ಕಿಶನ್ ಅವರನ್ನು ತೆಗೆದುಕೊಳ್ಳಬಹುದು, ಅಥವಾ ಅವರಿಗೆ ಬ್ರೇಕ್ ನೀಡಿದರು ನೀಡಬಹುದು. ಒಂದು ವೇಳೆ ಇಶಾನ್ ಅವರನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಿದರೆ, ನಾಲ್ಕರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್, 5ನೇ ಸ್ಥಾನದಲ್ಲಿ ರಿಷಬ್ ಪಂತ್, ಹಾಗೂ 6ನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇರುತ್ತಾರೆ.” ಎಂದಿದ್ದಾರೆ ರವಿಶಾಸ್ತ್ರಿ. ಇನ್ನು ಬೌಲರ್ ಗಳ ಆಯ್ಕೆಯಲ್ಲಿ, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಹಾಗೂ ಉಮ್ರಾನ್ ಮಲಿಕ್ ಹಾಗೂ ಅರ್ಷದೀಪ್ ಇಬ್ಬರಲ್ಲಿ ಒಬ್ಬರನ್ನು ಸೆಲೆಕ್ಟ್ ಮಾಡುವುದಾಗಿ ಹೇಳಿದ್ದಾರೆ.