ರಾತ್ರೋ ರಾತ್ರೋ ಮತ್ತೊಂದು ಆಫರ್ ಪಡೆದುಕೊಂಡ ನಟಿ ಮೇಘನಾ ಶೆಟ್ಟಿ: ಪಾನ್ ಇಂಡಿಯಾ ಸಿನೆಮಾಗೆ ನಾಯಕಿ. ಹೀರೋ ಯಾರು ಗೊತ್ತೇ?
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ನಟನೆ ಶುರು ಮಾಡಿ ಇಂದು ಎಲ್ಲರ ಕ್ರಶ್ ಆಗಿರುವವರು ನಟಿ ಮೇಘಾ ಶೆಟ್ಟಿ. ಮೊದಲ ಧಾರಾವಾಹಿಯಲ್ಲೇ ಮುಗ್ಧ ಅಭಿನಯದ ಮೂಲಕ ಕರ್ನಾಟಕದ ಜನರ ಹೃದಯ ಗೆದ್ದರು. ಬೆಂಗಳೂರಿನ ಬೆಡಗಿ ಮೇಘಾ ಶೆಟ್ಟಿ ಅವರು ಇಂದು ಕರ್ನಾಟಕದ ಹುಡುಗರ ಕ್ರಶ್, ಹುಡುಗಿ ಅನು ಸಿರಿಮನೆ ಹಾಗೆ ಮುಗ್ಧವಾಗಿ ಕ್ಯೂಟ್ ಆಗಿ ಇರಬೇಕು ಎನ್ನುತ್ತಾರೆ ಹುಡುಗರು. ಜೊತೆ ಜೊತೆಯಲಿ ಧಾರಾವಾಹಿ ಶುರುವಾಗಿ 600 ಸಂಚಿಕೆಗಳನ್ನು ಪೂರೈಸಿದೆ. ಈ ಎರಡು ವರ್ಷಗಳಲ್ಲಿ ಜನರಿಗೆ ಬಹಳ ಹತ್ತಿರ ಆಗಿರುವ ಮೇಘಾ ಶೆಟ್ಟಿ ಅವರ ಕಡೆಯಿಂದ ಇದೀಗ ಅಭಿಮಾನಿಗಳಿಗೆ ಭರ್ಜರಿಯಾದ ಗುಡ್ ನ್ಯೂಸ್ ಒಂದು ಸಿಕ್ಕಿದೆ..
ಮೇಘಾ ಶೆಟ್ಟಿ ಅವರಿಗೆ ಜೊತೆ ಜೊತೆಯಲಿ ಧಾರವಾಹಿ ಎಷ್ಟು ಜನಪ್ರಿಯತೆ ಮತ್ತು ಅಭಿಮಾನಿ ಬಳಗ ತಂದು ಕೊಟ್ಟಿದೆ ಅಂದ್ರೆ, ಅಭಿಮಾನಿಗಳು ಮೇಘಾ ಶೆಟ್ಟಿ ಅವರನ್ನು ತಮ್ಮ ಮನೆಯ ಮಗಳ ಹಾಗೆ ಇಷ್ಟಪಡುತ್ತಾರೆ. ಜೊತೆ ಜೊತೆಯಲಿ ಧಾರಾವಾಹಿಯ ಅಭಿನಯ ಮೇಘಾ ಶೆಟ್ಟಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ತಂದುಕೊಟ್ಟಿದೆ. ಮೇಘಾ ಶೆಟ್ಟಿ ಅವರು, ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ನಡುವೆ ಮೇಘಾ ಶೆಟ್ಟಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಿದ್ದು, ನಾಯಕ ಕವಿಶ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಆಫ್ಟರ್ ಆಪರೇಷನ್ ಲಂಡನ್ ಕೆಫೆ ಎಂದು ಹೆಸರು ಇಡಲಾಗಿದೆ.

ಈ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತಯಾರಾಗಲಿದೆ. ಪೋಸ್ಟರ್ ನಲ್ಲಿ ಕವಿಶ್ ಶೆಟ್ಟಿ ಅವರು ಗನ್ ಹಿಡಿದು ನಿಂತಿದ್ದು, ಪೋಸ್ಟರ್ ನೋಡಿದರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದು ಗೊತ್ತಾಗುತ್ತಿದೆ. ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರ ಪಾತ್ರದ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ. ಫಸ್ಟ್ ಲುಕ್ ಪೋಸ್ಟರ್ ನೋಡಿ ಥ್ರಿಲ್ ಆಗಿರುವ ಅಭಿಮಾನಿಗಳು, ಮೇಘಾ ಅವರಿಗೆ ವಿಶ್ ಮಾಡುತ್ತಿದ್ದು, ಜೊತೆಗೆ ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರ ಪಾತ್ರ ಏನು ಎನ್ನುವ ಬಗ್ಗೆ ಅಪ್ಡೇಟ್ ಕೊಡಿ ಎನ್ನುತ್ತಿದ್ದಾರೆ. ಇನ್ನು ಈ ಸಿನಿಮಾವನ್ನು ನಾನು ನನ್ನ ಕನಸು, ಇನಿಯ ಸಿನಿಮಾ ನಿರ್ದೇಶನ ಮಾಡಿರುವ ಸಡಗರ ರಾಘವೇಂದ್ರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ಗಳು ಮುಂದಿನ ಎಪಿಸೋಡ್ ನಲ್ಲಿ ಸಿಗಲಿದೆ.