ಮದುವೆ ಎಲ್ಲಾ ಚೆನ್ನಾಗಿ ಆಯಿತು, ಆದರೆ ಮೊದಲನೇ ರಾತ್ರಿ ಬಳಿಕ ಗಂಡ ಬೇಡ ಎಂದು ಪೋಷಕರ ಜೊತೆ ಹೋರಾಟ ವಧು. ಅಂತದ್ದು ಏನಾಯಿತು ಎಂದ ಜನ.

102

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ನಿಜಕ್ಕೂ ಕೂಡ ನಮ್ಮ ಜೀವನದಲ್ಲಿ ನಾವು ತೆಗೆದುಕೊಳ್ಳುವ ಅತ್ಯಂತ ಪ್ರಮುಖವಾದ ನಿರ್ಧಾರ ಆಗಿರುತ್ತದೆ. ಆದರೆ ನಮ್ಮ ಜೀವನದಲ್ಲಿ ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಖಂಡಿತವಾಗಿ ಜೀವನಪೂರ್ತಿ ನಾವು ವ್ಯಥೆ ಪಡಬೇಕಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜೋಡಿಗಳು ದೀರ್ಘಕಾಲದವರೆಗೆ ದಾಂಪತ್ಯ ಜೀವನದಲ್ಲಿ ಉಳಿಯುತ್ತಿಲ್ಲ. ಇವರಿಬ್ಬರ ನಡುವಿನ ವೈಮನಸ್ಸಿನಿಂದ ಆಗಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆಯುವ ಮೂಲಕ ದೂರವಾಗುತ್ತಿದ್ದಾರೆ.

ಕೆಲವರು ಒಂದೆರಡು ವರ್ಷಗಳಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡರೆ ಇನ್ನು ಕೆಲವರು ಏಳೆಂಟು ವರ್ಷಗಳಲ್ಲಿ ಡಿವೋರ್ಸ್ ಪಡೆಯುವವರು ಕೂಡ ಇದ್ದಾರೆ. ಆದರೆ ಇಂದಿನ ವಿಷಯದಲ್ಲಿ ನಾವು ಹೇಳಹೊರಟಿರುವ ಜೋಡಿ ಮೊದಲ ರಾತ್ರಿಯೇ ಪರಸ್ಪರ ಬೇರೆಯಾಗಿದ್ದಾರೆ. ಹೌದು ಗೆಳೆಯರೇ ಮೊದಲ ರಾತ್ರಿಯ ದಿನವೇ ಹುಡುಗಿ ಮನೆಯವರಿಗೆ ಕರೆ ಮಾಡಿ ಈ ಹುಡುಗ ನನಗೆ ಬೇಡವೇ ಬೇಡ ಎಂಬುದಾಗಿ ಹೇಳಿದ್ದಾಳೆ. ಈಗ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಕಾನ್ಪುರದಲ್ಲಿ.

ಸರ್ಕಾರಿ ಉದ್ಯೋಗದಲ್ಲಿರುವವರು ಮಗನ ಮದುವೆ ಇದೇ ಮೇ 20ರಂದು ಕಾನ್ಪುರದಲ್ಲಿ ಅದ್ದೂರಿಯಾಗಿ ನಡೆದಿತ್ತು. ಪ್ರತಿಯೊಬ್ಬರು ಕೂಡ ಮದುವೆಯಲ್ಲಿ ಸಂತೋಷದಿಂದ ಭಾಗಿಯಾಗಿದ್ದರು. ಗಂಡಿನ ಮನೆಯವರು ಕೂಡ ಸೊಸೆ ಮನೆಗೆ ಬರುತ್ತಾಳೆ ಎಂಬುದಾಗಿ ಸಂತೋಷದಿಂದ ಕಾದಿದ್ದರು. ಮೇ 21ರಂದು ಗಂಡನ ಮನೆಯ ಹೆಣ್ಣುಮಗಳು ಬಂದಿದ್ದಳು. ಮೇ 22ಕ್ಕೆ ಮದುವೆ ನಂತರದ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದಕ್ಕಾಗಿ ಎಲ್ಲಾ ಬಂಧು-ಬಾಂಧವರು ಬಂದಿದ್ದರು.

ಇನ್ನು ಕಾರ್ಯಕ್ರಮವನ್ನು ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಮೊದಲ ರಾತ್ರಿಯನ್ನು ಕೂಡ ಅದೇ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಆದರೆ ಅವತ್ತು ಏನಾಯಿತು ಗೊತ್ತಿಲ್ಲ ರಾತ್ರಿ ಎಲ್ಲವೂ ಚೆನ್ನಾಗಿತ್ತು ಆದರೆ ಬೆಳಿಗ್ಗೆ ಮದುವೆಯ ಚಿತ್ರಣವೇ ಬದಲಾಗಿತ್ತು. ಕಾರ್ಯಕ್ರಮಕ್ಕಾಗಿ ಬಂದಿದ್ದ ಪ್ರತಿಯೊಬ್ಬರು ಕೂಡ ಈ ಘಟನೆಯಿಂದ ಸ್ತಂಭೀಭೂತ ರಾಗಿದ್ದರು. ಅಷ್ಟಕ್ಕೂ ಅಲ್ಲಿ ಏನು ನಡೆದಿತ್ತು ಏನಾಯಿತು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ರಾತ್ರಿ ನವವಧು ಹಾಗೂ ವರರ ನಡುವೆ ಏನಾಯಿತು ಎಂಬುದು ತಿಳಿದುಬಂದಿಲ್ಲ ಆದರೆ ಬೆಳಗ್ಗೆ ಆದ ತಕ್ಷಣವೇ ಮದುಮಗಳು ತನ್ನ ಮನೆಯವರಿಗೆ ಕರೆ ಮಾಡಿ ಈತನ ಜೊತೆಗೆ ನನಗೆ ಬಾಳಲು ಇಷ್ಟವಿಲ್ಲ ನನ್ನನ್ನು ಬಂದು ಕರೆದುಕೊಂಡು ಹೋಗಿ ಎಂಬುದಾಗಿ ಫೋನ್ ಮಾಡಿ ತಿಳಿಸಿದ್ದಾಳೆ. ಬೆಳಗ್ಗೆ ಆದ ತಕ್ಷಣವೇ ಹುಡುಗಿಯ ಮನೆಯವರು ಬಂದು ಆಕೆಯನ್ನು ಕರೆದುಕೊಂಡು ತಮ್ಮ ಮನೆಗೆ ಹೋಗಿದ್ದಾರೆ.

ಇನ್ನು ತಮ್ಮ ಮಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಆ ಹುಡುಗಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ಭೇಟಿ ನೀಡಿ ಹೋಗಿದ್ದಾರೆ. ನೀವು ಯೋಚಿಸಬಹುದು ಗಂಡಿನ ಕಡೆಯವರ ಮೇಲೆ ದೂರನ್ನು ನೀಡಿರಬಹುದು ಎನ್ನುವುದಾಗಿ. ಅದು ಹೆಣ್ಣಿನ ಕಡೆಯವರು ಹೋಗುವಾಗ ಪೊಲೀಸ್ ಠಾಣೆಗೆ ಹೋಗಿದ್ದು ನಿಜ ಆದರೆ ಯಾರ ಮೇಲೂ ಕೂಡ ದೂರನ್ನು ನೀಡಿಲ್ಲ. ಬದಲಾಗಿ ಮದುವೆಯಾದ ಮಾರನೇ ದಿನವೇ ಮಗಳನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂಬುದಾಗಿ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡಿ ಹೋಗಿದ್ದಾರೆ ಅಷ್ಟೇ.

ಇನ್ನು ಮದುಮಗಳು ಮನೆಗೆ ಬಂದು ನಮ್ಮ ಮನೆಯನ್ನು ಬೆಳಗುತ್ತಾಳೆ ಎಂದು ಅಂದುಕೊಂಡಿದ್ದ ವರಿಗೆ ಮದುವೆಯಾದ ಮಾರನೇ ದಿನ ಬೆಳಿಗ್ಗೆ ತನ್ನ ತವರು ಮನೆಗೆ ಹೋಗಿದ್ದಾಳೆ ಎಂಬುದಾಗಿ ಎಲ್ಲರಿಗೂ ಕೂಡ ನಿಜಕ್ಕೂ ಶಾ’ಕಿಂಗ್ ಪರಿಸ್ಥಿತಿಯಲ್ಲಿದ್ದಾರೆ. ಏನು ಇಲ್ಲಿ ಏನು ನಡೆದಿತ್ತು ಅಥವಾ ಏನು ನಡೆಯಿತು ಎನ್ನುವುದರ ಕುರಿತಂತೆ ಪ್ರತಿಯೊಬ್ಬರು ಕೂಡ ತಮ್ಮ ಬಾಯಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಈ ಕುರಿತಂತೆ ನಿಜವಾಗಲು ಏನು ನಡೆಯಿತು ಎಂದು ಇಂದಿಗೂ ತಿಳಿದಿಲ್ಲ. ಈ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.