ಮಂಗಳ ಗೌರಿ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್. ಮತ್ತೆ ಮೊದಲಿನ ಸ್ಥಾನಕ್ಕೆ ಏರುತ್ತಾ?? ಏನದು ಗೊತ್ತೇ??

39

ನಮಸ್ಕಾರ ಸ್ನೇಹಿತರೇ ಮೊದಲಿನಿಂದಲೂ ಕೂಡ ಸಿನಿಮಾ ರೇಂಜಿನಲ್ಲಿ ಕಿರುತೆರೆಯ ಧಾರವಾಹಿಗಳು ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಬಂದಿವೆ. ಕೆಲವೊಂದು ಧಾರವಾಹಿಗಳು ಸೂಪರ್ ಹಿಟ್ ಧಾರವಾಹಿಗಳು ಎನ್ನುವ ಪ್ರಶಂಸೆಯನ್ನು ಪ್ರೇಕ್ಷಕರಿಂದ ಪಡೆದುಕೊಂಡಿವೆ. ಅವುಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ ಮಂಗಳಗೌರಿ ಮದುವೆ ಧಾರವಾಹಿ ಕೂಡ ಒಂದು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಕಲರ್ಸ್ ಕನ್ನಡ ವಾಹಿನಿ ಕ್ವಾಲಿಟಿ ಧಾರವಾಹಿಗಳಿಗೆ ಸದಾ ಮುಂದು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಕಳೆದ ಕೆಲವು ವರ್ಷಗಳ ಹಿಂದೆ ನೋಡುವುದಾದರೆ ಕಲರ್ಸ್ ಕನ್ನಡ ವಾಹಿನಿ ಪ್ರತಿಯೊಂದು ವಿಚಾರದಲ್ಲಿ ಕೂಡಾ ಟಿಆರ್ಪಿ ಲೆಕ್ಕದಲ್ಲಿ ಮೊದಲನೇ ಸ್ಥಾನವನ್ನು ಪಡೆಯುತ್ತಿತ್ತು. ಆದರೆ ಸದ್ಯಕ್ಕೆ ಈ ಸ್ಥಾನವನ್ನು ಜೀ ಕನ್ನಡ ವಾಹಿನಿ ತನ್ನ ಧಾರಾವಾಹಿಗಳ ಮೂಲಕ ಆಳುತ್ತಿದೆ ಎಂದರೆ ತಪ್ಪಾಗಲಾರದು. ಈಗ ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿ ತನ್ನ ಸ್ಥಾನವನ್ನು ಮತ್ತೊಮ್ಮೆ ಪಡೆದುಕೊಳ್ಳಲು ಹಲವಾರು ಧಾರಾವಾಹಿಗಳ ಮೂಲಕ ಪ್ರಯತ್ನಿಸುತ್ತಿದೆ. ಕಲರ್ಸ್ ಕನ್ನಡ ವಾಹಿನಿಗೆ ಈ ಸ್ಥಾನವನ್ನು ಮಂಗಳ ಗೌರಿ ಧಾರಾವಾಹಿ ದಕ್ಕಿಸಿ ಕೊಡಬಹುದಾಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಮಂಗಳಗೌರಿ ಧಾರವಾಹಿಯಲ್ಲಿ ಈಗ ಟ್ವಿಸ್ಟ್ ಪ್ರೇಕ್ಷಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಹೌದು ಗೆಳೆಯರೇ ಮಂಗಳ ಗೌರಿ ಮದುವೆ ದಾರವಾಹಿಯಲ್ಲಿ ಈಗ ಸೌಂದರ್ಯ ಪಾತ್ರದ ಎಂಟ್ರಿ ಮತ್ತೊಮ್ಮೆ ಆಗಿದೆ. ಹೌದು ಗೆಳೆಯರೇ ಹಲವಾರು ಸಮಯಗಳ ನಂತರ ತನಿಷಾ ಈಗ ಸೌಂದರ್ಯ ಪಾತ್ರದ ಮೂಲಕ ಮತ್ತೊಮ್ಮೆ ಮಂಗಳಗೌರಿಮದುವೆ ಧಾರಾವಾಹಿಯಲ್ಲಿ ಎಂಟ್ರಿ ನೀಡಿದ್ದಾರೆ. ಮಂಗಳ ಗೌರಿ ಮದುವೆ ಧಾರವಾಹಿಯಲ್ಲಿ ಸೌಂದರ್ಯ ಪಾತ್ರಕ್ಕೆ ಸಾಥ್ ನೀಡುವ ಬಬ್ಲಿ ಪಾತ್ರವು ಕೂಡ ಈ ಮೂಲಕ ಮತ್ತೊಮ್ಮೆ ತೆರೆಯ ಮುಂದೆ ವಾಪಸ್ಸಾಗಿದ್ದಾರೆ. ಸದ್ಯಕ್ಕೆ ಇಬ್ಬರೂ ಸೇರಿಕೊಂಡು ರಾಜೀವ್ ನನ್ನು ಮುಗಿಸಲು ಪ್ಲಾನ್ ಹಾಕುತ್ತಿದ್ದು ಸೌಂದರ್ಯ ಬದುಕಿರುವ ವಿಚಾರ ಈಗ ರಾಜೀವ್ ನಿಗೂ ಕೂಡ ಗೊತ್ತಾಗಿದೆ. ಹೀಗಾಗಿ ಮಂಗಳಗೌರಿಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ನೀಡಿದ್ದಾರೆ. ಸದ್ಯಕ್ಕೆ ಇಬ್ಬರೂ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಸೌಂದರ್ಯ ಪಾತ್ರದ ಎಂಟ್ರಿಯನ್ನು ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕಾಯುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.