ಒಂದು ಕಾಲದ ಟಾಪ್ ಧಾರವಾಹಿ ಮಿಥುನ ರಾಶಿಯ ಸುರಕ್ಷಾ ಪಾತ್ರಧಾರಿ ನಿಜಕ್ಕೂ ಯಾರು ಗೊತ್ತಾ?? ಇವರ ಹಿನ್ನೆಲೆಯೇನು ಗೊತ್ತೇ??

16

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲಿನಿಂದಲೂ ಹಾಗೂ ಇತ್ತೀಚಿನ ದಿನಗಳಲ್ಲಿ ಕೂಡ ಮೊದಲು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಮಿಂಚುವ ನಟ-ನಟಿಯರು ಹಲವಾರು ಜನ ಕಾಣಸಿಗುತ್ತಾರೆ. ಅವರಲ್ಲಿ ನಟಿ ಸಂಪದ ಹುಲಿವಾನ ಕೂಡ ಒಬ್ಬರು. ಮೊದಲಿಗೆ ಕಿರುತೆರೆಯಲ್ಲಿ ನಡೆಸಿ ಈಗ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ನಟನೆ ಹಾಗೂ ಸೌಂದರ್ಯಕ್ಕೆ ಮಾರು ಹೋಗಿರುವ ಚಿತ್ರರಂಗ ಇವರಿಗೆ ಒಂದೊಂದೇ ಸಿನಿಮಾಗಳ ಆಫರ್ ಅನು ನೀಡುತ್ತಿದೆ. ಇವರ ಕುರಿತಂತೆ ಇನ್ನಷ್ಟು ಹೆಚ್ಚಾಗಿ ಹಾಗೂ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇನ್ನು ನೀವೆಲ್ಲರೂ ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಾಗಿ ಇದ್ದರೆ ಮಿಥುನ ರಾಶಿ ಧಾರಾವಾಹಿಯ ಕುರಿತಂತೆ ತಿಳಿದಿರುತ್ತೀರಿ. ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರಾವಾಹಿಗಳಲ್ಲಿ ಮಿಥುನ ರಾಶಿ ಕೂಡ ಒಂದಾಗಿದೆ. ಹೌದು ಗೆಳೆಯರೆ ಮಿಥುನ ರಾಶಿ ಧಾರಾವಾಹಿ ಒಬ್ಬ ಶ್ರೀಮಂತ ಹಾಗೂ ಮಧ್ಯಮ ವರ್ಗದ ಹೆಣ್ಣು ಮಗಳ ನಡುವಿನ ಪ್ರೀತಿಯ ಕಥೆಯಾಗಿದ್ದು ಇದು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಹಾಗೂ ಆಕರ್ಷಿಸುವಲ್ಲಿ ಸಫಲವಾಗಿದೆ. ಮಿಥುನ ರಾಶಿ ಧಾರವಾಹಿ ಕಥೆಗಾಗಿ ಅದಕ್ಕಾಗಿಯೇ ಒಂದು ದೊಡ್ಡ ಅಭಿಮಾನಿ ಬಳಗ ಇದೆ ಎಂದರೆ ತಪ್ಪಾಗಲಾರದು.

ಇನ್ನು ನಟಿ ಸಂಪದ ರವರ ಪಾತ್ರವನ್ನು ವಿವರಿಸುವುದಾದರೆ ಮಿಥುನ ರಾಶಿ ಧಾರವಾಹಿಯಲ್ಲಿ ಮಿಥುನ್ ಹಾಗೂ ರಾಶಿ ನಡುವೆ ತೊಂದರೆಗಳನ್ನು ತಂದಿಕ್ಕುವ ವಿಲನ್ ಆಗಿರುವ ಸುರಕ್ಷಾ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಬರೋಬ್ಬರಿ ಹತ್ತು ತಿಂಗಳು ಗಳಿಗೂ ಅಧಿಕ ಕಾಲ ಸಂಪದ ರವರು ಮಿಥುನ ರಾಶಿ ಧಾರಾವಾಹಿಯಲ್ಲಿ ಸುರಕ್ಷ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಸಾಕಷ್ಟು ಹತ್ತಿರವಾಗಿದ್ದಾರೆ ಎಂದು ಹೇಳಬಹುದಾಗಿದೆ. ಮಿಥುನ ರಾಶಿ ಧಾರಾವಾಹಿಯ ನಂತರ ಸಂಪದ ದಿಡೀರನೆ ಸಿನಿಮಾರಂಗಕ್ಕೆ ಕಾಲಿಡುತ್ತಾರೆ. ಬೆಳ್ಳಿತೆರೆಯಲ್ಲಿ ಹಲವಾರು ಸಿನಿಮಾಗಳಲ್ಲಿ ಸಂಪದ ಅವರು ಕಾಣಿಸಿಕೊಳ್ಳುತ್ತಾರೆ.

ಇತ್ತೀಚಿಗೆ ಸಂಪದ ರವರ ಸಿನಿಮಾದ ಕುರಿತಂತೆ ಮಾತನಾಡುವುದಾದರೆ ನಿಖಿಲ್ ಕುಮಾರ್ ನಟನೆಯ ರೈಡರ್ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಸಂಪದಾ ರವರು ಕಾಣಿಸಿಕೊಳ್ಳುತ್ತಾರೆ. ರೈಡರ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಂಪದ ರವರು ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಕೂಡ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗುತ್ತಾರೆ ಎಂದು ಹೇಳಬಹುದಾಗಿದೆ. ಈ ಚಿತ್ರದಲ್ಲಿ ನಟಿಸಿದ ನಂತರ ಈಗ ಹಲವಾರು ಸಿನಿಮಾಗಳು ಸಂಪದಾ ರವರನ್ನು ಹುಡುಕಿಕೊಂಡು ಬರುತ್ತಿವೆ. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಿಂದಲೂ ಕೂಡ ಸಂಪದ ಅವರಿಗೆ ಹಲವಾರು ಆಫರ್ ಗಳು ಈಗಾಗಲೇ ಅವರ ಮನೆಯ ಕದವನ್ನು ತಟ್ಟಿವೆ.

ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸುವ ಕಾರ್ಯದಲ್ಲಿ ನಿರತರಾಗಿರುವ ನಟಿ ಸಂಪದ ರವರು ಸದ್ಯಕ್ಕೆ ನಿತಿನ ನಟನೆಯ ಶ್ರೀ ಶ್ರೀ ಶ್ರೀ ರಾಜವಾರು ಹಾಗೂ ರಾಜ್ ತರುಣ್ ಅಭಿನಯದ ಮಾಸ್ ಮಹಾರಾಜು ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ಕನ್ನಡದಲ್ಲಿ ತಮ್ಮ ಸಿನಿಮಾ ಹಾಗೂ ಕಿರುತೆರೆ ಜೀವನವನ್ನು ಪ್ರಾರಂಭಿಸಿ ಸಂಪದ ಈಗ ತೆಲುಗು ಭಾಷೆಯಲ್ಲಿ ಕೂಡ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯರಾಗಿರುವವರು ಹಲವಾರು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಒಟ್ಟಾರೆಯಾಗಿ ಕನ್ನಡದ ಕಿರುತೆರೆಯ ಮೂಲಕ ಜರ್ನಿ ಯನ್ನು ಪ್ರಾರಂಭಿಸಿ ಈಗಾಗಲೇ ಮುಂದಿನ ದಿನಗಳಲ್ಲಿ ದೊಡ್ಡ ನಾಯಕರಾಗಿ ಕಾಣಿಸಿಕೊಳ್ಳುವ ಭರವಸೆಯನ್ನು ಮೂಡಿಸಿರುವ ಸಂಪದ ರವರಿಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ ಎಂಬುದಾಗಿ ನಾವು ಹಾರೈಸೋಣ. ನಟಿ ಸಂಪದ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ಹಂಚಿಕೊಳ್ಳಿ.