ಬಿಗ್ ನ್ಯೂಸ್: ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಮತ್ತೊಂದು ಬದಲಾವಣೆ: ಸೃಜನ್ ಲೋಕೇಶ್ ಹೊರಹೋಗಿದ್ದು ಯಾಕೆ ಗೊತ್ತೇ??
ಪುಟಾಣಿಗಳು ಮತ್ತು ಅವರ ತಾಯಂದಿರಿಂದ ಸಿಕ್ಕ ಸೂಪರ್ ಮನರಂಜನೆ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಸ ರಿಯಾಲಿಟಿ ಶೋ ಗಿಚ್ಚಿ ಗಿಲಿ ಗಿಲಿ. ಈ ಶೋ ಈಗಾಗಲೇ ಜನರ ಮನಸ್ಸನ್ನು ಗೆದ್ದಿದೆ. ನನ್ನಮ್ಮ ಸೂಪರ್ ಸ್ಟಾರ್ ಶೋ ವಿನ್ನರ್ ವಂಶಿಕಾ, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಶ್ರೀಕಾಂತ್, ಗಾಯಕಿ ಸುನೀತಾ, ನ್ಯೂಸ್ ಆಂಕರ್ ದಿವ್ಯ ವಸಂತ ಹೀಗೆ ಸಾಕಷ್ಟು ಸೇಲೆಬ್ರಿಟಿಗಳು ಈ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಸಾಕಷ್ಟು ಬದಲಾವಣೆಗಳು ಬಂದಿದ್ದು, ಇದೀಗ ಸೃಜನ್ ಲೋಕೇಶ್ ಅವರು ಶೋ ಇಂದ ಹೊರಬಂದಿದ್ದಾರೆ..
ಕಳೆದ ವಾರಾವಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಮುಕ್ತಾಯವಾಗಿದೆ. ಜೂನ್ 11ರಿಂದ ರಾಜ ರಾಣಿ ಸೀಸನ್2 ಶುರುವಾಗುತ್ತಿದೆ. ರಾಜ ರಾಣಿ2 ನಲ್ಲಿ ಸೃಜನ್ ಲೋಕೇಶ್ ಅವರು ಹಾಗೂ ನಟಿ ತಾರಾ ಅವರು ಜಡ್ಜ್ ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ರೆ, ಗಿಚ್ಚಿ ಗಿಲಿ ಗಿಲಿ ಮತ್ತು ರಾಜ ರಾಣಿ2 ಎರಡು ಶೋಗಳಲ್ಲೂ ಸೃಜನ್ ಲೋಕೇಶ್ ಕಾಣಿಸಿಕೊಳ್ಳುತ್ತಾರಾ ಎನ್ನುವ ಅನುಮಾನ ಸಹ ಮೂಡಿತ್ತು, ಇದಕ್ಕೀಗ ಉತ್ತರ ಸಿಕ್ಕಿದ್ದು, ಸೃಜನ್ ಲೋಕೇಶ್ ಅವರು ಗಿಚ್ಚಿ ಗಿಲಿ ಗಿಲಿ ಶೋ ಇಂದ ಹೊರಬಂದಿದ್ದಾರೆ ಎನ್ನುವ ಮಾಹಿತಿ ಈಗ ಸಿಕ್ಕಿದೆ. ಆದರೆ ಅಧಿಕೃತವಾಗಿ ಈ ವಿಚಾರವನ್ನು ಇನ್ನು ಬಹಿರಂಗ ಪಡಿಸಿಲ್ಲ..

ರಾಜ ರಾಣಿ ಶೋಗೆ ಸೃಜನ್ ಲೋಕೇಶ್ ಅವರು ಜಡ್ಜ್ ಆಗಿ ಬರಲಿರುವ ಕಾರಣ ಗಿಚ್ಚಿ ಗಿಲಿ ಗಿಲಿ ಶೋ ಇಂದ ಹೊರಬಂದಿದ್ದಾರೆ. ಇನ್ನು ಈ ಶೋಗೆ ಸೃಜನ್ ಅವರ ಬದಲಿಗೆ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯನಟ ಸಾಧು ಮಹಾರಾಜ್ ಬರಲಿದ್ದಾರೆ, ಮುಂದಿನ ಎಪಿಸೋಡ್ ಗಳಲ್ಲಿ ಸಾಧು ಕೋಕಿಲ ಅವರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಇನ್ನುಮುಂದೆ ಗಿಚ್ಚಿ ಗಿಲಿ ಗಿಲಿ ಶೋ ಎಂಜಾಯ್ ಮಾಡಲಿದ್ದಾರೆ ಸಾಧು ಕೋಕಿಲ ಅವರು. ಇನ್ನು ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆ ಆಗಿದೆ, ನಿರೂಪಕರಾಗಿದ್ದ ಮಂಜು ಪಾವಗಡ ಮತ್ತು ರೀನಾ ಡಿಸೋಜ ಇಬ್ಬರು ಸಹ ಶೋ ಇಂದ ಹೊರಬಂದು, ಇದೀಗ ನಿರಂಜನ್ ದೇಶಪಾಂಡೆ ಅವರು ಶೋ ನಿರೂಪಣೆ ಮಾಡುತ್ತಿದ್ದಾರೆ.