ಯಾರಿಗೂ ತಿಳಿಯದ ತಾವು ಮಾಡಿದ ಕೆಲಸ ಬಿಚ್ಚಿಟ್ಟ ಸೋನಾಲಿ. ತಾನೇ ಟಿವಿ ಮುಂದೆ ಕೂತು ನೋಡಲಾಗದ ಸಿನೆಮ ಮಾಡಿದ್ದೇನೆ ಎಂದದ್ದು ಯಾಕೆ ಗೊತ್ತೇ?

18

ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರು ಸೋನಾಲಿ ಬೇಂದ್ರೆ. 90ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು ಸೋನಾಲಿ ಬೇಂದ್ರೆ. ಸಾಕಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ, ಹೆಸರು ಮಾಡಿದ್ದರೂ ಸಹ, ಸೋನಾಲಿ ಅವರು ಒಂದು ಸಮಯದಲ್ಲಿ ಅಷ್ಟೇನು ಚೆನ್ನಾಗಿಲ್ಲದ ಪಾತ್ರಗಳಲ್ಲಿ ಸಹ ನಟಿಸಿದರು. ಅದಕ್ಕೆ ಕಾರಣ ಏನು ಎಂದು ತಿಳಿಸಿ, ತಮ್ಮ ನೋವಿನ ಕಥೆಯನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ ನಟಿ ಸೋನಾಲಿ ಬೇಂದ್ರೆ..

ಸೋನಾಲಿ ಬೇಂದ್ರೆ ಅವರು 90ರ ದಶಕದ ಬಹುಬೇಡಿಕೆಯ ನಟಿ ಆಗಿದ್ದರು. ಬಾಲಿವುಡ್ ನ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಕೆಲ ಸಮಯ ನಟನೆಯಿಂದ ದೂರ ಉಳಿದಿದ್ದ ಸೋನಾಲಿ ಬೇಂದ್ರೆ ಅವರು, ಇತ್ತೀಚೆಗೆ ರಿಯಾಲಿಟಿ ಶೋ ಮತ್ತು ಇನ್ನು ಕೆಲವು ಕಾರ್ಯಕ್ರಮಗಳ ಮೂಲಕ, ತೀರ್ಪುಗಾರರಾಗಿ, ಅತಿಥಿಯಾಗಿ ಬರುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಇದೀಗ ದಿ ಬ್ರೋಕನ್ ನ್ಯೂಸ್ ಎನ್ನುವ ವೆಬ್ ಸೀರಿಸ್ ನಲ್ಲಿ ನಟಿಸಿದ್ದಾರೆ. ಜೂನ್ 5 ರಿಂದ ಈ ಶೋ ಜೀ5 ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ವೆಬ್ ಸೀರೀಸ್ ಪ್ರಚಾರದ ಸಮಯದ ಸಂದರ್ಶನದಲ್ಲಿ ಸೋನಾಲಿ ಬೇಂದ್ರೆ ಅವರ ಕೆರಿಯರ್ ಬಗ್ಗೆ ಪ್ರಶ್ನೆ ಕೇಳಲಾಯಿತು. ನೀವು ಯಾಕೆ ಕೆಲವು ಸಾಧಾರಣವಾದ ಪಾತ್ರಗಳಲ್ಲಿ ಸಹ ಕಾಣಿಸಿಕೊಂಡಿದ್ದೀರಿ ಎನ್ನುವ ಪ್ರಶ್ನೆಯನ್ನು ಸಹ ಕೇಳಲಾಯಿತು. ಅದಕ್ಕೆ ಸೋನಾಲಿ ಬೇಂದ್ರೆ ಅವರು ಉತ್ತರ ಕೊಟ್ಟಿದ್ದು ಹೀಗೆ..

ಆ ಸಮಯದಲ್ಲಿ ನನ್ನ ಸಿನಿಮಾ ಕೆರಿಯರ್ ಕುಸಿದಿತ್ತು, ಕ್ಯಾನ್ಸರ್ ಕೂಡ ಬಂದಿದ್ದ ಕಾರಣ ನನಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಬಾಡಿಗೆ ಕಟ್ಟಬೇಕಿತ್ತು, ಪಾವತಿ ಮಾಡಲು ನನ್ನ ಬಳಿ ಸಾಕಷ್ಟು ಬಿಲ್ ಗಳಿದ್ದವು. ಆ ಸಮಯದಲ್ಲಿ ನನಗೆ ಹಣ ಗಳಿಸುವುದು ಬಹಳ ಮುಖ್ಯವಾಗಿತ್ತು. ಹಾಗಾಗಿ ಬರುತ್ತಿದ್ದ ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೆ. ನಾನೇ ಕೂತು ನೋಡದೇ ಇರುವ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಯಾಕಂದ್ರೆ ಆ ಸಮಯದಲ್ಲಿ ಹಣದ ಅವಶ್ಯಕತೆ ಹಾಗಿತ್ತು. ಹಣವೇ ಮುಖ್ಯ ಎಂದು ಫಿಕ್ಸ್ ಆಗಿದ್ದ ಕಾರಣ, ಬರುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೆ ಎಂದಿದ್ದಾರೆ ಸೋನಾಲಿ ಬೇಂದ್ರೆ. ಹಾಗೆಯೇ ಆ ಸಮಯದಲ್ಲಿ ತಮ್ಮ ಯೋಚನಾಶಕ್ತಿ ಹೇಗಿತ್ತು ಎನ್ನುವುದನ್ನು ಸಹ ನೆನಪು ಮಾಡಿಕೊಂಡ ಅವರು, ನಾನೇಕೆ ಅಂತಹ ಪಾತ್ರಗಳನ್ನು ಒಪ್ಪಿಕೊಂಡೆ ಎಂದುಕೊಳ್ಳುತ್ತಿದ್ದಾರೆ. ಹಾಗೂ ತನಗೆ ಯಾವ ಗಾಡ್ ಫಾದರ್ ಇರಲಿಲ್ಲ, ಗಾಡ್ ಫಾದರ್ ಅವಶ್ಯಕತೆ ಸಹ ತನಗೆ ಇಲ್ಲ ಎನ್ನುತ್ತಾರೆ ಸೋನಾಲಿ ಬೇಂದ್ರೆ ಅವರು.