ರಶ್ಮಿಕಾ ರವರನ್ನು ಸೋಲಿಸುತ್ತಾರೆ ಎಂದು ಕೊಂಡ ಮತ್ತೊಬ್ಬರು ಕನ್ನಡತಿಗೆ ಸೋಲು ಫಿಕ್ಸ್ ಆಯ್ತಾ?? ಟಾಪ್ ನಟಿಯಾಗಲು ಸಾಧ್ಯವಿಲ್ಲವೇ?? ಯಾಕೆ ಗೊತ್ತೆ??
ಹೊರ ರಾಜ್ಯದಲ್ಲೂ ಮಿಂಚುತ್ತಿರುವ ಕರ್ನಾಟಕದ ನಟಿಯರಲ್ಲಿ ಒಬ್ಬರು ಕೃತಿ ಶೆಟ್ಟಿ. ಉಪ್ಪೇನ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಕೃತಿ ಶೆಟ್ಟಿ. ಮೊದಲ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಕೃತಿ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು, ಅಂತೆಯೇ ನಾಗಚೈತನ್ಯ ಅವರೊಡನೆ ಬಂಗಾರ್ರಾಜು, ನ್ಯಾಚುರಲ್ ಸ್ಟಾರ್ ನಾನಿ ಅವೆರೊಡನೆ ಶ್ಯಾಮ್ ಸಿಂಘಾ ರಾಯ್ ಸಿನಿಮಾದಲ್ಲಿ ನಟಿಸಿದರು, ಇನ್ನು ಜುಲೈನಲ್ಲಿ ರಾಮ್ ಪೋತಿನೇನಿ ಅವರೊಡನೆ ಅಭಿನಯಿಸಿರುವ ದಿ ವಾರಿಯರ್ ಸಿನಿಮಾ ಬಿಡುಗಡೆಯಾಗಲಿದೆ..
ಆದರೆ ರಶ್ಮಿಕಾ ಅವರು ಸಾಗಿರುವ ಹಾಗೆ ಕೃತಿ ಶೆಟ್ಟಿ ಅವರ ಕೆರಿಯರ್ ಇಲ್ಲ ಎನ್ನಲಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರು, ಕಿರಿಕ್ ಪಾರ್ಟಿ ಸಕ್ಸಸ್ ನಂತರ ಟಾಲಿವುಡ್ ನಲ್ಲಿ ಅವಕಾಶ ಪಡೆದರು, ಮಹೇಶ್ ಬಾಬು, ವಿಜಯ್ ದೇವರಕೊಂಡ, ನಾನಿ, ನಾಗಾರ್ಜುನ, ಕಾರ್ತಿ ಹೀಗೆ ಸ್ಟಾರ್ ನಟರೊಡನೆ ತೆರೆ ಹಂಚಿಕೊಂಡು, ಈಗ ಬಾಲಿವುಡ್ ಗು ಎಂಟ್ರಿ ಕೊಡಲಿದ್ದಾರೆ. ಹೀಗೆ ರಶ್ಮಿಕಾ ಸ್ಟಾರ್ ಎನ್ನಿಸಿಕೊಂಡಿದ್ದಾರೆ, ಹಾಗೆಯೇ ಇವರ ಕೆರಿಯರ್ ಗ್ರಾಫ್ ಈಗಲೂ ಮೇಲಕ್ಕೆ ಸಾಗುತ್ತಲೇ ಹೋಗಿದೆ. ಈ ರೀತಿಯ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೃತಿ ಶೆಟ್ಟಿ ಅವರಿಗೆ ಸಿಗುತ್ತಿಲ್ಲ. ಮೊದಲ ಸಿನಿಮಾ ಅಷ್ಟು ದೊಡ್ಡ ಹಿಟ್ ಆದ ಕಾರಣ ಕೃತಿ ಶೆಟ್ಟಿ ಅವರು ಕಡಿಮೆ ಸಮಯದಲ್ಲೇ ದೊಡ್ಡ ಸ್ಟಾರ್ ಆಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಆಗುತ್ತಿದೆ.

ಕೃತಿ ಶೆಟ್ಟಿ ಅವರ ಕೆರಿಯರ್ ಕುಂಟುತ್ತಾ ಸಾಗುತ್ತಿದೆ. ಉಪ್ಪೇನ ಬಳಿಕ, ಇವರಿಗೆ ಯಾವುದೇ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸುವಂಥಹ ಅಥವಾ ದೊಡ್ಡ ಹಿಟ್ ಎನ್ನುವಂತಹ ಸಿನಿಮಾಗಳು ಬಂದಿಲ್ಲ. ಕೃತಿ ಅವರು ರಾಮ್ ಪೊತಿನೇನಿ ಅವರೊಡನೆ ಅಭಿನಯಿಸಿರುವ ದಿ ವಾರಿಯರ್ ಸಿನಿಮಾ ಜುಲೈ ನಲ್ಲಿ ತೆರೆಗೆ ಬರುತ್ತಿದ್ದು, ಅದಾದ ಬಳಿಕ ಸೂರ್ಯ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಕೃತಿ. ಆ ಸಿನಿಮಾ ಹೊರತುಪಡಿಸಿ, ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳನ್ನು ಹೊರತುಪಡಿಸಿ ಕೀರ್ತಿ ಅವರ ಬಳಿ ಇನ್ಯಾವುದೇ ಬಿಗ್ ಸಿನಿಮಾ ಇಲ್ಲ. ಹಾಗಾಗಿ ಕೃತಿ ಶೆಟ್ಟಿ ಅವರು ರಶ್ಮಿಕಾ ಮಂದಣ್ಣ ಅವರ ಹಾಗೆ ಸ್ಟಾರ್ ಪಟ್ಟಕ್ಕೆ ಏರುವುದು ಕಷ್ಟ ಎನ್ನಲಾಗುತ್ತಿದೆ.