ವೆಸ್ಟ್ ಇಂಡೀಸ್ ಎನ್ನುವುದು ಒಂದೇ ದೇಶವೇ ಅಲ್ಲಾ, ಅಸಲಿಗೆ ವೆಸ್ಟ್ ಇಂಡೀಸ್ ಕುರಿತು ನಿಮಗೆ ತಿಳಿಯದ ರಹಸ್ಯಮಯ ವಿಚಾರಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಕುರಿತಂತೆ ತಿಳಿದಿದೆ. ಹೀಗೆಂದ ಮಾತ್ರಕ್ಕೆ ವೆಸ್ಟ್ ಇಂಡೀಸ್ ಎನ್ನುವ ದೇಶ ಇದೆ ಎನ್ನುವುದಾಗಿ ನೀವು ಅಂದುಕೊಂಡಿರಬಹುದು. ಆದರೆ ನಿಜವಾಗಿ ಹೇಳಬೇಕೆಂದರೆ ಸ್ನೇಹಿತರೆ ವೆಸ್ಟ್ಇಂಡೀಸ್ ಎನ್ನುವ ದೇಶವೇ ಇಲ್ಲ. ಹೌದು ಗೆಳೆಯರ ಬೇಕಾದರೆ ನೀವು ಗೂಗಲ್ ಮ್ಯಾಪ್ ನಲ್ಲಿ ನೋಡಿದರೂ ಕೂಡ ವೆಸ್ಟ್ ಇಂಡೀಸ್ ಎನ್ನುವ ದೇಶ ನಿಮಗೆ ಸಿಗುವುದಿಲ್ಲ. ವೆಸ್ಟ್ ಇಂಡೀಸ್ ಎನ್ನುವುದು ಹಲವಾರು ದೇಶಗಳ ಸಮೂಹ ವಾಗಿರುವ ಕೆರಿಬಿಯನ್ ದೇಶಗಳ ಸಮೂಹ ಎಂಬುದಾಗಿ ಗುರುತಿಸಿಕೊಂಡಿದೆ. ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಿಂದ ಹಲವಾರು ದೈತ್ಯ ಆಟಗಾರರು ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ.
ಹೌದು ಗೆಳೆಯರೆ ನಿಮಗೊಂದು ವಿಶೇಷ ವಿಚಾರ ನೆನಪಿರಲಿ ವೆಸ್ಟ್ ಇಂಡೀಸ್ ಎನ್ನುವುದು 15 ದೇಶಗಳನ್ನು ಒಳಗೊಂಡಂತಹ ಕ್ರಿಕೆಟ್ ತಂಡವಾಗಿದೆ. ಈ ಕ್ರಿಕೆಟ್ ತಂಡದಲ್ಲಿ 15 ಕೆರಿಬಿಯನ್ ದೇಶಗಳಲ್ಲಿ ಇರುವಂತಹ ಕ್ರಿಕೆಟಿಗರನ್ನು ಆಯ್ಕೆ ಮಾಡಿ ಒಂದು ತಂಡವಾಗಿ ನಿರ್ಮಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವು ಜಮೈಕಾ ಗಯಾನ ಟ್ರಿನಿಡಾಡ್ ಅಂಡ್ ಟೊಬಾಗೋ ಹೀಗೆ ಹಲವಾರು ದೇಶಗಳ ಹೆಸರನ್ನು ನೀವು ಕೇಳಿರಬಹುದಾಗಿದೆ. ಇನ್ನು ನೀವು ಕ್ರಿಕೆಟ್ನಲ್ಲಿ ಒಂದು ವಿಚಾರ ಗಮನಿಸಿರಬಹುದು. ಅದೇನೆಂದರೆ ಬೇರೆ ಎಲ್ಲ ದೇಶಗಳು ಕೂಡ ರಾಷ್ಟ್ರಗೀತೆಯನ್ನು ಹೊಂದಿರುತ್ತವೆ ಕ್ರಿಕೆಟ್ ಸಂದರ್ಭದಲ್ಲಿ ಕೂಡ ಇದನ್ನು ಹಾಡಲಾಗುತ್ತದೆ. ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಯಾವುದೇ ರಾಷ್ಟ್ರಗೀತೆ ಇರುವುದಿಲ್ಲ. ಇವರು ಮೈದಾನಕ್ಕೆ ಇಳಿದಾಗ ಕ್ರಿಕೆಟ್ ಆಂಥಮ್ ಅನ್ನು ಹಾಡಲಾಗುತ್ತದೆ.
ಕೆರಿಬಿಯನ್ ಪ್ರಾಂತ್ಯದಲ್ಲಿ ಸಾವಿರಾರು ದ್ವೀಪಗಳು ಇದ್ದರೂ ಕೂಡ ಅದರಲ್ಲಿ ಕೆಲವೇ ಕೆಲವು ಮಾತ್ರ ವಾಸಮಾಡಲು ಯೋಗ್ಯವಾಗಿದೆ. ಇನ್ನು ಕೆರೆಬಿಯನ್ ಸಮೂಹದಲ್ಲಿ 26 ದೇಶಗಳು ಕಂಡುಬರುತ್ತದೆ. ಇಂದಿಗೂ ಕೂಡ ಕೆಲವು ದೇಶಗಳಲ್ಲಿ ಬ್ರಿಟಿಷರು ಹಾಗೂ ಫ್ರೆಂಚರು ಆಡಳಿತವನ್ನು ನಡೆಸುತ್ತಿದ್ದಾರೆ. ಈ ಕೆರಿಬಿಯನ್ ದ್ವೀಪಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದ್ದು ಮೊದಲನೆಯದ್ದು ಬಹಮಾಸ್ ಎರಡನೆಯದು ಗ್ರೇಟರ್ ಅಂಟಿಲೀಸ್ ಹಾಗೂ ಮೂರನೆಯದು ಲೇಸರ್ ಆಂಟಿಲೀಸ್. ಇನ್ನು ವೆಸ್ಟ್ ಇಂಡೀಸ್ ಎಂದು ಹೆಸರುವಾಸಿಯಾಗಲು ಕಾರಣವೂ ಕೂಡ ಕ್ರಿಕೆಟ್ ಆಗಿದೆ. ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಸೋಲಿಲ್ಲದ ಸರದಾರ ನಂತೆ ಮಿಂಚುತ್ತಿತ್ತು. ಎರಡು ಏಕದಿನ ವಿಶ್ವಕಪ್ ಎರಡು ಟಿ-20ವಿಶ್ವಕಪ್ ಒಂದು ಬಾರಿ ಚಾಂಪಿಯನ್ ಸ್ಟೋರಿ ಕೂಡ ಗೆದ್ದಿದ್ದು ಈ ಕ್ರಿಕೆಟ್ ತಂಡದಲ್ಲಿ ಹಲವಾರು ಆಟಗಾರರು ಈಗಾಗಲೇ ಕ್ರಿಕೆಟ್ ಜಗತ್ತಿನಲ್ಲಿ ವಿಶ್ವವಿಖ್ಯಾತರಾಗಿದ್ದಾರೆ.
ಕೊಲಂಬಸ್ ಭಾರತವನ್ನು ಹುಡುಕಲು ಹೊರಟಾಗ ಮೊದಲಿಗೆ ಸಿಕ್ಕಿದ್ದು ಇದೇ ಪ್ರದೇಶ. ಇದನ್ನೇ ಭಾರತ ಎಂದು ತಿಳಿದು ಈ ಪ್ರದೇಶವನ್ನು ಆತ ಇಂಡೀಸ್ ಎನ್ನುವುದಾಗಿ ನಾಮಕರಣ ಮಾಡುತ್ತಾನೆ ನಂತರ ತನ್ನ ತಪ್ಪನ್ನು ತಿಳಿದು ಆತ ಇದನ್ನು ವೆಸ್ಟ್ ಇಂಡೀಸ್ ಎಂಬುದಾಗಿ ಮರುನಾಮಕರಣ ಮಾಡುತ್ತಾನೆ. ಇನ್ನು ಪ್ರದೇಶಗಳಲ್ಲಿ ಬ್ರಿಟಿಷರು ಹಾಗೂ ಡಚ್ಚರ ಪ್ರಾಬಲ್ಯ ಹೆಚ್ಚಾಗಿತ್ತು. ಭಾರತದಲ್ಲಿ ಕೂಡ ಇವರು ಆಡಳಿತ ನಡೆಸಿರುವುದರಿಂದಾಗಿ ಭಾರತದಿಂದ ಕೂಲಿ ಆಳುಗಳನ್ನು ಕರೆದುಕೊಂಡು ಹೋಗಿ ಅಲ್ಲಿ ಕೆಲಸ ಮಾಡಿಸಿಕೊಂಡಿರುತ್ತಾರೆ. ಹೀಗಾಗಿಯೇ ಅಲ್ಲಿ ಭಾರತೀಯರ ಸಂಖ್ಯೆಯನ್ನು ಕೂಡ ನಾವು ಹೆಚ್ಚಾಗಿ ಕಾಣಬಹುದಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಕೂಡ ಭಾರತೀಯ ಹೆಸರುಗಳು ಹೆಚ್ಚಾಗಿ ಕಣ್ಣು ಬಂದಿರುವುದನ್ನು ನೀವು ನೋಡಿರಬಹುದು ಸುನಿಲ್ ನರೇನ್ ಶಿವನಾರಾಯಣ್ ಚಂದ್ರಪಾಲ್ ದಿನೇಶ್ ರಾಮ್ದೀನ್ ಹೀಗೆ ಹಲವಾರು ಜನರಿದ್ದಾರೆ.
ಒಂದು ವೇಳೆ ನೀವು ಕೆರಿಬಿಯನ್ ದ್ವೀಪಗಳಿಗೆ ಪ್ರವಾಸ ಹೊರಟರೆ ತಲೆಕೆಡಿಸಿಕೊಳ್ಳಬೇಕಾದ ವಿಚಾರ ಇಲ್ಲ ಯಾಕೆಂದರೆ ಅಲ್ಲಿ ಭಾರತೀಯರು ಹೆಚ್ಚಾಗಿ ಇರುವುದರಿಂದಾಗಿ ಅಲ್ಲಿ ಆಹಾರಪದ್ಧತಿಯ ಕೂಡ ಭಾರತವನ್ನು ಹೆಚ್ಚಾಗಿರುತ್ತದೆ. ಇನ್ನು ಈ ದ್ವೀಪಗಳಲ್ಲಿ ಅತ್ಯಂತ ದೊಡ್ಡ ದೇಶ ಎಂದರೆ ಕ್ಯೂಬಾ. ಇದು ನಮ್ಮ ಭಾರತ ದೇಶದ ಕೇರಳವನ್ನು ಹೋಲುತ್ತದೆ. ಇನ್ನು ಕೆರಿಬಿಯನ್ ದೇಶದಲ್ಲಿ ಹಲವಾರು ಭಾಷೆಗಳ ಸಂವಹನ ನಡೆಯುತ್ತದೆ. ಇನ್ನು ಇಲ್ಲಿನ ಕೆಲವು ದೇಶಗಳಲ್ಲಿ ಭಾರತದ ಭಾಷೆಗಳ ಆಗಿರುವ ಹಿಂದಿ ಹಾಗೂ ಭೋಜಪುರಿ ಭಾಷೆಗಳನ್ನು ಕೂಡ ಮಾತನಾಡಲಾಗುತ್ತದೆ ಎನ್ನುವುದು ವಿಶೇಷ. ಇಲ್ಲಿರುವ ಡೊಮಿನಿಕನ್ ರಿಪಬ್ಲಿಕ್ ಎನ್ನುವ ದೇಶದ ಜನಸಂಖ್ಯೆ ಒಂದು ಕೋಟಿ ಇದೆ. ಆದರೆ ಇಲ್ಲಿ ವರ್ಷಕ್ಕೆ ಪ್ರವಾಸಿಗರೇ 60 ಲಕ್ಷಕ್ಕೂ ಅಧಿಕ ಜನ ಬರುತ್ತಾರೆ ಅಷ್ಟೊಂದು ಸುಂದರವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕೆರಿಬಿಯನ್ ದ್ವೀಪಗಳ ದೇಶಗಳು ಸ್ವಚ್ಛಂದ ಸಮುದ್ರದ ಕಿನಾರೆಗಳು ಹಾಗೂ ಗಿರಿ-ಶಿಖರ ಗಳಿಗಾಗಿ ಸಹಜ ಪ್ರಕೃತಿಯ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿವೆ.
ಇನ್ನು ಇಲ್ಲಿರುವ ಜಮೈಕಾ ದೇಶ ಹಲವಾರು ವಿಚಾರಗಳಿಗಾಗಿ ಪ್ರಸಿದ್ಧವಾಗಿದೆ. ಕ್ರಿಕೆಟ್ ಜಗತ್ತಿನ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಇಲ್ಲಿನವರೇ ಭೂಮಿಯ ಅತ್ಯಂತ ವೇಗದ ವ್ಯಕ್ತಿಯಾಗಿರುವ ಉಸೇನ್ ಬೋಲ್ಟ್ ರವರು ಕೂಡ ಇಲ್ಲಿನವರೇ ಇಷ್ಟು ಮಾತ್ರ ಅಲ್ಲ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಚರ್ಚ್ ಗಳಿರುವ ದೇಶ ಕೂಡ ಇದೇ ಆಗಿದೆ. ಜಾನಿ ಡೆಪ್ ನಟನೆಯ ಪೈರೇಟ್ಸ್ ಆಫ್ ಕೆರೆಬಿಯನ್ ಚಿತ್ರ ಸರಣಿಗಳ ಎಲ್ಲಾ ಚಿತ್ರೀಕರಣವೂ ಕೂಡ ನಡೆದಿರುವುದು ಇದೇ ದೇಶದಲ್ಲಿ. ಇನ್ನು ಇಲ್ಲಿ ಯಾವ್ಯಾವ ದೇಶಗಳಿಗೆ ಸುತ್ತಾಡಲು ಹೋಗಬಹುದು ಎಂಬುದನ್ನು ಕೇಳಿದರೆ ಮೊದಲಿಗೆ ಕ್ಯೂಬಾ ದೇಶ.
ಎರಡನೇದಾಗಿ ಜಮೈಕಾ ದೇಶ ಇಲ್ಲಿ ಸಾಕಷ್ಟು ರಮಣೀಯ ಸ್ಥಳಗಳಿವೆ ಹಾಗೂ ಭಾರತೀಯರಿಗೆ ಇಲ್ಲಿಗೆ ಬರಲು ವೀಸ ಅವಶ್ಯಕತೆ ಕೂಡ ಇಲ್ಲ. ಮೂರನೇದಾಗಿ ಬಾರ್ಬಡೋಸ್. ಇದು ಕೂಡ ಪ್ರಮುಖವಾಗಿ ದ್ವೀಪ ದೇಶವಾಗಿದ್ದು ನಿಮ್ಮ ಕಣ್ಮನ ತಣಿಸುವ ಅಂತಹ ಪ್ರವಾಸಿ ತಾಣಗಳಿವೆ. ಸೇಂಟ್ ಲೂಸಿಯಾ. ಈ ಪುಟ್ಟ ದ್ವೀಪದೇಶದಲ್ಲಿ ಕೂಡ ಸಾಕಷ್ಟು ಪರ್ವತಶ್ರೇಣಿಗಳು ಹಸಿರು ಹೊದ್ದುಕೊಂಡು ನಿಮ್ಮ ಕಣ್ಮನ ತಣಿಸಲು ಸಿದ್ಧವಾಗಿವೆ. ಇಲ್ಲಿನ ಜಲಪಾತಗಳು ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತವೆ. ಇವೆ ನೀವು ವೆಸ್ಟ್ ಇಂಡೀಸ್ ಕುರಿತಂತೆ ತಿಳಿದುಕೊಳ್ಳಬೇಕಾದ ಅಂತಹ ಇಂಟರೆಸ್ಟಿಂಗ್ ವಿಚಾರಗಳು. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹೆಚ್ಚಿಕೊಳ್ಳಿ.