ರಾಜಮೌಳಿ ಸಿನಿಮಾದಲ್ಲಿ ನಟಿಸೋದು ಅದೃಷ್ಟಾನೇ, ಆದರೆ ದುರದೃಷ್ಟ ಕೂಡ ಉಚಿತ. ದಿಗ್ಗಜ ನಟರ ಕಥೆ ಏನಾಗಿದೆ ಗೊತ್ತೇ??

33

ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು ಎಸ್.ಎಸ್.ರಾಜಮೌಳಿ ಅವರು. ಇವರು ನಿರ್ದೇಶನ ಮಾಡುವ ಸಿನಿಮಾಗಳು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತವೆ ಎಂದು ಗೊತ್ತಾಗಿದೆ. ರಾಜಮೌಳಿ ಅವರು ನಿರ್ದೇಶನ ಮಾಡಿದ ಆರ್.ಆರ್.ಆರ್ ಸಿನಿಮಾ 1200 ಕೋಟಿ ಹಣಗಳಿಕೆ ಮಾಡಿ, ಪ್ರಪಂಚದಲ್ಲಿ ದೊಡ್ಡ ಹಿಟ್ ಎನ್ನಿಸಿಕೊಂಡಿದೆ. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ರಾಜಮೌಳಿ ಅವರ ಸಿನಿಮಾದಲ್ಲಿ ಅಭಿನಯಿಸುವ ಕಲಾವಿದರಿಗೆ ದೊಡ್ಡ ಮಟ್ಟದ ಕಲಾವಿದರಿಗೆ ಯಶಸ್ಸು ಸಿಗುವುದರ ಜೊತೆಗೆ ದುರದೃಷ್ಟ ಹಿಂಬಾಲಿಸಿ ಬರುತ್ತದೆ ಎಂದು ಹೇಳಲಾಗುತ್ತಿದೆ..ಇದು ನಿಜವೋ ಆಗಿದೆ..

ನಾವೆಲ್ಲರೂ ನೋಡಿರುವ ಹಾಗೆ, ನಟ ಪ್ರಭಾಸ್ ಅವರು ಬಾಹುಬಲಿ ಸಿನಿಮಾದಲ್ಲಿ ನಟಿಸಿದರು. ರಾಜಮೌಳಿ ಅವರು ನಿರ್ದೇಶನ ಮಾಡಿದ ಈ ಬಾಹುಬಲಿ ಸೀರೀಸ್ ಸಿನಿಮಾ ವಿಶ್ವಮಟ್ಟದಲ್ಲಿ ಯಶಸ್ಸು ಕಂಡಿದೆ. ಆದರೆ ಬಾಹುಬಲಿ ಬಳಿಕ ಪ್ರಭಾಸ್ ಅಭಿನಯದ ಯಾವ ಸಿನಿಮಾಗಳು ಹಿಟ್ ಆಗಲಿಲ್ಲ. ಬಾಹುಬಲಿ ಸಿನಿಮಾ ಇಂದಲೋ ಏನೋ, ಪ್ರಭಾಸ್ ಅವರ ಸಾಹಿ ಮತ್ತು ರಾಧೆ ಶ್ಯಾಮ್ ಸಿನಿಮಾ ಫ್ಲಾಪ್ ಆಗಿದೆ. ಇನ್ನು ರಾಮ್ ಚರಣ್ ಅವರಿಗೂ ಸಹ ಅದೇ ರೀತಿ ಆಗಿದೆ. ಆರ್.ಆರ್.ಆರ್ ಸಿನಿಮಾ ರಾಮ್ ಚರಣ್ ಅವರಿಗೆ ದೊಡ್ಡ ಹೆಸರು ತಂದಿತು, ಅದಾದ ಬಳಿಕ ತೆರೆಕಂಡ ರಾಮ್ ಚರಣ್ ಅವರ ಆಚಾರ್ಯ ಸಿನಿಮಾ ಸೋಲು ಕಂಡಿದೆ. ಆರ್.ಆರ್.ಆರ್ ಸಾವಿರ ಕೋಟಿ ಹಣಗಳಿಕೆ ಮಾಡಿದ್ದು, ಆಚಾರ್ಯ ಸಿನಿಮಾ 100 ಕೋಟಿ ಗಳಿಕೆ ಸಹ ಕಾಣಲಿಲ್ಲ.

ಇನ್ನು ಅಜಯ್ ದೇವಗನ್ ಅವರಿಗೂ ಇದೇ ಪರಿಸ್ಥಿತಿ ಬಂದಿದ್ದು, ಆರ್.ಆರ್.ಆರ್ ಸಿನಿಮಾ ಇವರಿಗೂ ದೊಡ್ಡ ಹಿಟ್ ತಂದುಕೊಟ್ಟಿತು, ಆದರೆ ಅದಾದ ಬಳಿಕ ತೆರೆಕಂಡ ರನ್ ವೇ ಸಿನಿಮಾ ಸೋಲನ್ನು ಕಂಡಿದೆ. ರಾಮ್ ಚರಣ್ ಅವರಿಗೆ ಈ ಮೊದಲು ಸಹ ಇದೇ ರೀತಿ ಆಗಿತ್ತು, ಈ ಹಿಂದೆ ರಾಮ್ ಚರಣ್ ಅವರು ರಾಜಮೌಳಿ ಅವರು ನಿರ್ದೇಶನ ಮಾಡಿದ ಮಗಧೀರ ಸಿನಿಮಾದಲ್ಲಿ ನಟಿಸಿದ್ದರು, ಅದಾದ ಬಳಿಕ ತೆರೆಕಂಡ ಆರೇಂಜ್ ಸಿನಿಮಾ ಸೋಲು ಅನುಭವಿಸಿತ್ತು. ಹಾಗಾಗಿ ಸಿನಿರಂಗದ ಕೇಳಿ ಬರುತ್ತಿರುವ ಮಾತು ನಿಜವೇ ಎನ್ನುವ ಹಾಗೆ ಆಗಿದೆ. ರಾಜಮೌಳಿ ಅವರ ಸಿನಿಮಾ ಎಷ್ಟು ದೊಡ್ಡ ಗೆಲುವು ತಂದುಕೊಡುತ್ತದೋ ಅದೇ ರೀತಿ ಮುಂದಿನ ಸಿನಿಮಾ ಮೇಲು ಹೆಚ್ಚಿನ ನಿರೀಕ್ಷೇ ಬರುವ ಹಾಗೆ ಮಾಡಿ, ಸೋಲು ಕಾಣುವ ಹಾಗೆ ಮಾಡುತ್ತದೆ. ಇನ್ನು ರಾಜಮೌಳಿ ಅವರ ಮುಂದಿನ ಸಿನಿಮಾ ಮಹೇಶ್ ಬಾಬು ಅವರ ಜೊತೆ ಮಾಡುತ್ತಿದ್ದು, ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇನ್ನು ಜ್ಯೂನಿಯರ್ ಎನ್.ಟಿ.ಆರ್ ಅವರಿಗೂ ಹೀಗೆ ಆಗುತ್ತಾ ಎನ್ನುವ ಆತಂಕ ಸಹ ಅಭಿಮಾನಿಗಳಲ್ಲಿ ಮೂಡಿದೆ.