ಜೊತೆ ಜೊತೆಯಲ್ಲಿ ಸೇಕ್ರೆಟ್ ರಿವೀಲ್ ಮಾಡಿದ ಮೇಘ ಶೆಟ್ಟಿ, ಗೆಲುವು ಪಡೆಯಲು ಏನೆಲ್ಲಾ ಮಾಡಿದೆ ಗೊತ್ತೇ ಜೊತೆ ಜೊತೇಲಿ ತಂಡ. ಅನು ಸಿರಿಮನೆ ಹೇಳಿದ್ದೇನು ಗೊತ್ತೇ?
ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ್ ಮತ್ತು ನಟಿ ಮೇಘಾ ಶೆಟ್ಟಿ ಇಬ್ಬರಿಗೂ ಹೊಸ ಜೀವನವನ್ನೇ ಕಟ್ಟಿಕೊಟ್ಟಿದೆ. ಅನು ಸಿರಿಮನೆ ಪಾತ್ರದ ಮೂಲಕ ಕರ್ನಾಟಕದ ಜನತೆಗೆ ಬಹಳ ಹತ್ತಿರವಾದರು ಮೇಘಾ ಶೆಟ್ಟಿ. ಜೊತೆ ಜೊತೆಯಲಿ ಧಾರವಾಹಿ ಅಭಿನಯದಿಂದ ಮೇಘಾ ಅವರಿಗೆ ಬೆಳ್ಳಿತೆರೆಯಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿತು. ಸಿನಿಮಾ ಧಾರವಾಹಿ ಎರಡನ್ನು ಸಹ ಬ್ಯಾಲೆನ್ಸ್ ಮಾಡುತ್ತಿದ್ದಾರೆ ಮೇಘಾ. ಪ್ರಸ್ತುತ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನು ಪಾತ್ರಕ್ಕೆ ಒಳ್ಳೆಯ ತಿರುವು ಸಿಕ್ಕಿದೆ. ಊಹಿಸಲಾಗದ ರೀತಿ ಬದಲಾಗಿದ್ದಾಳೆ ಇದೀಗ ಅನು ಪಾತ್ರದ ಬಗ್ಗೆ ಮೇಘಾ ಶೆಟ್ಟಿ ಅವರು ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ…
“ಜೊತೆ ಜೊತೆಯಲಿ ಧಾರಾವಾಹಿಯನ್ನು ಜನರು ಬಹಳ ಇಷ್ಟಪಟ್ಟು ಒಪ್ಪಿಕೊಂಡಿದ್ದಾರೆ. ಕಥೆ ಅದ್ಭುತವಾಗಿರುವುದೇ ಧಾರವಾಹಿಯ ಸಕ್ಸಸ್ ಗೆ ಕಾರಣವಾಗಿದೆ. ನಮ್ಮ ತಂಡದ ಪರಿಶ್ರಮ ಹಾಗೂ ವಾಹಿನಿಯ ಬೆಂಬಲ ನಮಗೆ ಸಹಾಯ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನರು ಧಾರಾವಾಹಿ ಮೆಚ್ಚಿಕೊಂಡಿರುವ ಕಾರಣದಿಂದ ನಾವು ಇಂದು ಇಲ್ಲಿಗೆ ಬಂದಿದ್ದೇವೆ..”ಎನ್ನುತ್ತಾರೆ ಮೇಘಾ. ಜೊತೆ ಜೊತೆಯಲಿ ಒಂದು ಧಾರವಾಹಿಯಿಂದ ಮೇಘಾ ಶೆಟ್ಟಿ ಅವರ ಇಡೀ ಜೀವನವೇ ಬದಲಾಗಿ ಹೋಯಿತು, ಈ ಡ್ರಾಸ್ಟಿಕ್ ಚೇಂಜ್ ಬಗ್ಗೆ ಮೇಘಾ ಹೇಳುವುದು ಹೀಗೆ, “ಅಭಿನಯವೇ ಗೊತ್ತಿಲ್ಲದೆ ಬಂದ ಹುಡುಗಿ ನಾನು.. ಇಲ್ಲಿಗೆ ಬಂದ ನಂತರ ನಾನು ಸಾಕಷ್ಟು ಕಲಿತಿದ್ದೇನೆ. ಇನ್ನು ಕಲಿಯುವುದು ತುಂಬಾ ಇದೆ. ಜೀವನದ ಉದ್ದಕ್ಕೂ ಕಲಿಯುವುದು ಸಾಕಷ್ಟಿದೆ. ಜೊತೆ ಜೊತೆಯಲಿ ಧಾರವಾಹಿ ನನಗೆ ಬಹಳ ಜನಪ್ರಿಯತೆ ತಂದು ಕೊಟ್ಟಿದೆ..” ಎಂದು ಹೇಳುತ್ತಾರೆ ಮೇಘಾ ಶೆಟ್ಟಿ..

ಪ್ರಸ್ತುತ ಅನು ಸಿರಿಮನೆ ಪಾತ್ರದಲ್ಲಿ ಆಗಿರುವ ಪ್ರಮುಖ ಬದಲಾವಣೆ ನೋಡಿ ವೀಕ್ಷಕರಿಗೂ ಬಹಳ ಶಾಕ್ ಆಗಿದ್ದು, ಅದನ್ನು ಸ್ವೀಕರಿಸಲು ವೀಕ್ಷಕರಿಗೆ ಸ್ವೀಕರಿಸಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಮೇಘಾ ಶೆಟ್ಟಿ ಅವರು ಮಾತನಾಡಿ, “ಆರ್ಯ ಅನು ಲವ್ ಬರ್ಡ್ಸ್ ಥರ ಇರಬೇಕು ಎಂದು ಜನರು ಬಯಸುತ್ತಾರೆ. ಈಗ ಅನು ಪಾತ್ರಕ್ಕೆ ಸಿಕ್ಕಿರುವ ಟ್ವಿಸ್ಟ್ ಅನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯ ಆಗುತ್ತಿಲ್ಲ. ಎಲ್ಲಾ ಸತ್ಯ ಗೊತ್ತಾದ ಬಳಿಕ ನೀವೇ ಸರಿ ಹೊಗುತ್ತೀರಿ, ಎನ್ನುತ್ತಾರಂತೆ ಫ್ಯಾನ್ಸ್..ಒಟ್ಟಿನಲ್ಲಿ ಮೇಘಾ ಶೆಟ್ಟಿ ಅವರು ಈಗ ಫುಲ್ ಬ್ಯುಸಿ.. ಒಂದೆಡೆ ಕಿರುತೆರೆ ಮತ್ತೊಂದೆಡೆ ಬೆಳ್ಳಿ ತೆರೆ. ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿರುವ ತ್ರಿಬಲ್ ರೈಡಿಂಗ್ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ ಎನ್ನಲಾಗುತ್ತಿದೆ.