ಬಿಗ್ ಟ್ವಿಸ್ಟ್: ಸತತ ಸೋಲನ್ನು ಕಂಡಿರುವ ಶ್ವೇತಾ ರವರಿಂದ ಮಾಸ್ಟರ್ ಪ್ಲಾನ್, ನೇರವಾಗಿ ನಕ್ಷತ್ರಾಗೆ ಬಿಗ್ ಶಾಕ್ ಏನು ಗೊತ್ತೇ?? ಮುಂದೇನು ಮಾಡುತ್ತಾರೆ ಗೊತ್ತೇ??
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಈಗ ಶ್ವೇತಾಳ ಜೀವನದಲ್ಲಿ ಊಹಿಸಲು ಸಾಧ್ಯವಾಗದಂತಹ ತಿರುವು ಬಂದಿದೆ. ಶ್ವೇತಾ ಹಾಕಿದ್ದ ಪ್ಲಾನ್ ಎಲ್ಲವೂ ಉಲ್ಟಾ ಹೊಡೆದು, ಇದೀಗ ಶ್ರೀಮಂತ ತಂದೆಯ ಮನೆಯಿಂದ ಛೀಮಾರಿ ಮೂಲಕ ಹೊರಹಾಕಿಸಿಕೊಂಡು, ಮನೆಯಿಂದ ಹೊರಬರುವ ಪರಿಸ್ಥಿತಿ ಬಂದಿದ್ದು, ಈಗ ತುಕಾರಮ್ ಮನೆಗೆ ಹೋಗಿದ್ದಾಳೆ ಶ್ವೇತಾ. ಶ್ವೇತಾ ಈ ಪರಿಸ್ಥಿತಿಯನ್ನು ತನಗೆ ತಾನೇ ತಂದುಕೊಂಡಿದ್ದಾಳೆ. ಒಟ್ಟಿನಲ್ಲಿ ಲಕ್ಷಣ ಧಾರವಾಹಿ ನೋಡುವ ವೀಕ್ಷಕರಿಗೆ ಮಾತ್ರ, ಶ್ವೇತಾಳ ಪರಿಸ್ಥಿತಿ ನೋಡಿ ಸಂತೋಷ ಆಗಿರುವುದು ಸತ್ಯ..
ಶ್ವೇತಾ ಏನೆಲ್ಲಾ ಪ್ಲಾನ್ ಮಾಡಿ, ತನ್ನ ಗುಣ, ಡ್ರೆಸ್ ಎಲ್ಲವನ್ನು ಬದಲಾಯಿಸಿ, ತುಕಾರಾಮ್ ಮನೆಯಲ್ಲೇ ಉಳಿದುಕೊಳ್ಳುವ ಹಾಗೆ ನಾಟಕವಾರಿ, ಚಂದ್ರಶೇಖರ್ ಮತ್ತು ಆರತಿ ಅವರ ಸಿಂಪತಿ ಗಿಟ್ಟಿಸಿಕೊಂಡು ಚಂದ್ರಶೇಖರ್ ಅವರ ಐಷಾರಾಮಿ ಮನೆಯಲ್ಲೇ ವಾಸ ಮಾಡುವ ಹಾಗೆ ಪ್ಲಾನ್ ಮಾಡಿದಳು. ಇನ್ನು ಮತ್ತೊಂದು ದೊಡ್ಡ ಪ್ಲಾನ್ ಮಾಡಿ, ಚಂದ್ರಶೇಖರ್ ಅವರ ಆಸ್ತಿಯಲ್ಲಿ ಅರ್ಧ ಭಾಗವನ್ನು ಮೋಸದಿಂದ ತನ್ನ ಹೆಸರಿಗೆ ಬರೆಸಿಕೊಳ್ಳುವ ಪ್ರಯತ್ನ ಮಾಡಿದಳು ಶ್ವೇತಾ, ಇದರ ಬಗ್ಗೆ ಏನು ಗೊತ್ತಿಲ್ಲದೆ, ಆಸ್ತಿ ಮೇಲೆ ಆಸೆ ಇಲ್ಲದೆ, ನಕ್ಷತ್ರ ಸಹ ಅರ್ಧ ಆಸ್ತಿಯನ್ನು ಶ್ವೇತಾಳಿಗೆ ಕೊಡಲು ಸಿದ್ಧವಾಗಿದ್ದಳು. ಆದರೆ ಶ್ವೇತಾ ಜೊತೆಗೆ ಇದ್ದು, ಆಕೆಯ ವಿರುದ್ಧ ಪ್ಲಾನ್ ಮಾಡುತ್ತಿರುವ ಮಿಲಿ, ಅಂದು ಶ್ವೇತಾ ಸುಪಾರಿ ಕೊಟ್ಟು ತನ್ನ ತಂದೆಯನ್ನೇ ಕೊಲ್ಲಲು ಕರೆಸಿದ್ದ ಪ್ರಖ್ಯಾತ್ ನನ್ನು ಕರೆಸಿ, ಎಲ್ಲಾ ಸತ್ಯ ಅವನಿಂದಲೇ ಹೊರಬರುವ ಹಾಗೆ ಮಾಡಿದಳು. ಎಲ್ಲಾ ಸತ್ಯ ಗೊತ್ತಾದ ಬಳಿಕ ಚಂದ್ರಶೇಖರ್ ಪತ್ನಿ ಆರತಿ, ಶ್ವೇತಾಳನ್ನು ಮನೆಯಿಂದ ಹೊರಕ್ಕೆ ದಬ್ಬಿದ್ದಾರೆ.

ಇದನ್ನು ನೋಡಿ ಸ್ವತಃ ಶ್ವೇತಾಗೆ ಶಾಕ್ ಆಗಿದೆ, ಶ್ವೇತಾ ಎಷ್ಟೇ ಹೇಳಿದರು ಆರತಿ ಅವಳ ಮಾತನ್ನು ನಂಬಲಿಲ್ಲ. ತುಕಾರಾಂ ಜೊತೆಗೆ ಅವರ ಮನೆಗೆ ಶ್ವೇತಾಳನ್ನು ಕಳಿಸಿದರು. ಇಷ್ಟು ದಿನ ಚಂದ್ರಶೇಖರ್ ಅವರ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಶ್ವೇತಾ, ಈಗ ತುಕಾರಾಮ್ ಅವರ ಮನೆಯಲ್ಲಿ ಜೀವನ ನಡೆಸಬೇಕಿದೆ, ಐಷಾರಾಮಿ ಕಾರ್ ಗಳಲ್ಲಿ ಓಡಾಡುತ್ತಿದ್ದ ಶ್ವೇತಾ, ಈಗ ತುಕಾರಾಂ ಜೊತೆ ಆಟೋದಲ್ಲಿ 10, 20 ರೂಪಾಯಿಗೂ ಜಗಳ ಆಡಿಕೊಂಡು ಓಡಾಡುವ ಹಾಗೆ ಆಗಿದೆ. ಈ ಸ್ಥಿತಿಯನ್ನು ಶ್ವೇತಾ ಹೇಗೆ ನಿಭಾಯಿಸುತ್ತಾಳೆ? ತುಕಾರಾಂ ಮನೆಗೆ ಹೋದ ಬಳಿಕ ಅವರ ಕುಟುಂಬಕ್ಕೆ ಏನೆಲ್ಲಾ ತೊಂದರೆ ಕೊಡುತ್ತಾಳೆ? ಎನ್ನುವ ಪ್ರಶ್ನೆ ಒಂದು ಕಡೆಯಾದರೆ, ಭೂಪತಿ ತಾಯಿ ಕಣ್ಣಲ್ಲೂ ಒಳ್ಳೆಯವಳಾಗಿರುವ ಶ್ವೇತಾ, ಇನ್ನೇನಾದರೂ ನಾಟಕ ಮಾಡಿ ಭೂಪತಿ ಮನೆಗೆ ಬಂದು ಸೇರಿಕೊಳ್ಳುತ್ತಾಳಾ ಎನ್ನುವ ಪ್ರಶ್ನೆ ಮತ್ತೊಂದು ಕಡೆ. ಶ್ವೇತಾ ಏನು ಮಾಡುತ್ತಾಳೆ ಎನ್ನುವ ಕುತೂಹಲ ಈಗ ಕಿರುತೆರೆ ವೀಕ್ಷಕರಿಗೆ ಹೆಚ್ಚಾಗಿದೆ.