ಕಿಂಗ್ ಇರಲಿ ಮೊದಲು ಆತನೊಬ್ಬನನ್ನು ಆರ್ಸಿಬಿ ಇಂದ ಹೊರಗೆ ಕಳಿಸಿ ಎಂದ ಆಕಾಶ್ ಚೋಪ್ರಾ; ತೀರಾ ಕಳಪೆ ಪ್ರದರ್ಶನ ನೀಡಿದ್ದು ಯಾರಂತೆ ಗೊತ್ತಾ??

41

ನಮಸ್ಕಾರ ಸ್ನೇಹಿತರೇ ಫ್ಯಾನ್ ಫೇವರಿಟ್ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ಹೌದು ಗೆಳೆಯರೇ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖಂಡಿತವಾಗಿ ಕಪ್ ಗೆಲ್ಲುತ್ತದೆ ಎನ್ನುವುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಈ ಬಾರಿ ಬಲಿಷ್ಠವಾದ ತಂಡಗಳಲ್ಲಿ ಒಂದಾಗಿದ್ದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಅಭಿಮಾನಿಗಳಿಗೂ ಕೂಡ ಸಾಕಷ್ಟು ಬೇಸರವನ್ನು ತರಿಸಿದೆ.

14 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖಂಡಿತವಾಗಿ ಐಪಿಎಲ್ ಕಪ್ ಗೆಲ್ಲುತ್ತದೆ ಎಂಬುದಾಗಿ ಎಂದುಕೊಂಡಿದ್ದ ಅಭಿಮಾನಿಗಳು 15ನೇ ವರ್ಷವೂ ಕೂಡ ತಂಡ ಕಪ್ ಗೆಲ್ಲದೆ ಖಾಲಿ ಕೈಯಲ್ಲಿ ವಾಪಸ್ ಆಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಅಸಮಧಾನವನ್ನು ಮೂಡಿಸಿದೆ. ಇನ್ನು ತಂಡದ ಸೋಲಿಗೆ ಒಬ್ಬ ಆಟಗಾರನ ಕಳಪೆ ಪ್ರದರ್ಶನ ಎನ್ನುವುದಾಗಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ ರವರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಹೌದು ಗೆಳೆಯರೇ ಆ ಆಟಗಾರ ಇನ್ಯಾರು ಅಲ್ಲ ಮೊಹಮ್ಮದ್ ಸಿರಾಜ್.

ಹೌದು ಗೆಳೆಯರೇ ಈ ಬಾರಿ ಹರಾಜಿಗೂ ಮುನ್ನ ಆರ್ಸಿಬಿ ತಂಡ ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ ರವರ ಜೊತೆಗೆ ಸಿರಾಜ್ ರವರನ್ನು ಕೂಡ ಬರೋಬ್ಬರಿ ಏಳು ಕೋಟಿ ರೂಪಾಯಿಗೆ ರಿಟೈನ್ ಮಾಡಿಕೊಂಡಿತ್ತು. ಆದರೆ ಈ ಬಾರಿ ಆರ್ಸಿಬಿ ಪರವಾಗಿ 15 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಗಳನ್ನು ಮಾತ್ರ ಕಿತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ತಂಡದ ಸೋಲಿಗೆ ಕೂಡ ಪ್ರಮುಖ ಕಾರಣವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆಕಾಶ್ ಚೋಪ್ರಾ ರವರು ಮುಂದಿನ ಹರಾಜಿಗೂ ಮುನ್ನ ಸಿರಾಜ್ ರವರನ್ನು ತಂಡದಿಂದ ಕೈ ಬಿಡುವುದು ಉತ್ತಮ. ಯಾಕೆಂದರೆ ಏಳು ಕೋಟಿ ರೂಪಾಯಿ ಅವರಿಗೆ ಸಾಕಷ್ಟು ಹೆಚ್ಚಾಗುತ್ತದೆ ಹರಾಜಿನಲ್ಲಿ ಕೂಡ ಅವರನ್ನು ಮತ್ತೊಮ್ಮೆ ಆರ್ಸಿಬಿ ತಂಡ ಖರೀದಿಸಬಹುದಾಗಿದೆ ಅತ್ಯಂತ ಕಡಿಮೆ ಬೆಲೆಯಲ್ಲಿ ಬೇಕಾದ್ರೆ ಅವರಿಗೆ ಸಿಗಬಹುದು ಅವರು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.