ನೀವು ಇತ್ತೀಚಿಗೆ ಬಿಡುಗಡೆಯಾಗಿರುವ ಕೆಜಿಎಫ್ 2 ಚಿತ್ರವನ್ನು ಉಚಿತವಾಗಿ ನೋಡಬೇಕು ಎಂದರೆ ಏನು ಮಾಡಬೇಕು ಗೊತ್ತೇ??

12

ಕನ್ನಡದ ಕೆಜಿಎಫ್ ಚಾಪ್ಟರ್2 ಸಿನಿಮಾ ವಿಶ್ವಮಟ್ಟದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ವಿಶ್ವಾದ್ಯಂತ 1228 ಕೋಟಿಗಿಂತ ಅಧಿಕ ಹಣ ಗಳಿಸಿ ಮುನ್ನುಗ್ಗುತ್ತಿದೆ ಕೆಜಿಎಫ್2 ಸಿನಿಮಾ. ರಾಕಿ ಭಾಯ್ ಹವಾ ಮತ್ತು ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ವೀಕ್ಷಕರು ಫಿದಾ ಆಗಿದ್ದರು. ಇದೀಗ ಕೆಜಿಎಫ್2 ಸಿನಿಮಾವನ್ನು ನೋಡಿಲ್ಲದೆ ಇರುವವರು ಮತ್ತು ಪದೇ ಪದೇ ನೋಡಲು ಬಯಸುವವರಿಗೆ ಈಗ ಸದವಕಾಶ ಸಿಕ್ಕಿದೆ.. ಅದು ಹೇಗೆ ಗೊತ್ತಾ?

ಕೆಜಿಎಫ್2 ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗುತ್ತಿದೆ. ಜೂನ್ 3ರಿಂದ ಅಮೆಜಾನ್ ಪ್ರೈಮ್ ನಲ್ಲಿ ಕೆಜಿಎಫ್2 ಸಿನಿಮಾ ಉಚಿತವಾಗಿ ಸ್ಟ್ರೀಮ್ ಆಗಲಿದೆ. ಇದೀಗ ಅಮೆಜಾನ್ ಪ್ರೈಮ್ ಚಂದಾದಾರಿಕೆ ಇದ್ದರೆ ಸಾಕು, ಇನ್ಯಾವುದೇ ಹೆಚ್ಚುವರಿ ಹಣ ಗಳಿಸದೆ ಕೆಜಿಎಫ್2 ಸಿನಿಮಾವನ್ನು ಸುಲಭವಾಗಿ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಣೆ ಮಾಡಬಹುದು. ಈ ಮೊದಲೇ ಅಮೆಜಾನ್ ಪ್ರೈಮ್ ನಲ್ಲಿ ಕೆಜಿಎಫ್2 ಸಿನಿಮಾ ಸ್ ಸ್ಟ್ರೀಮ್ ಆಗಿತ್ತು, ಆದರೆ ಸಿನಿಮಾ ನೋಡಲು, ₹199 ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡಿ ಕೆಜಿಎಫ್2 ವೀಕ್ಷಣೆ ಮಾಡಬೇಕಿತ್ತು. ಆದರೆ ಈಗ ಅಮೆಜಾನ್ ಪ್ರೈಮ್ ಸಂಸ್ಥೆ ಕೆಜಿಎಫ್2 ಸಿನಿಮಾದ ಹೊಸ ಟೀಸರ್ ಬಿಡುಗಡೆ ಮಾಡಿ, ಸಿನಿಮಾ ಸ್ಟ್ರೀಮ್ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದೆ.

ಜೂನ್ 3 ರಿಂದ ಅಮೆಜಾನ್ ಪ್ರೈಮ್ ಸಿನಿಮಾವನ್ನು ಸಿನಿಪ್ರಿಯರು ಅಮೆಜಾನ್ ಪ್ರೈಮ್ ಚಂದಾದಾರಿಕೆ ಇದ್ದರೆ ಸಿನಿಮಾ ವೀಕ್ಷಿಸಬಹುದು. ಫ್ರೀಯಾಗಿ ಸಿನಿಮಾ ನೋಡಬಹುದು ಎನ್ನುವ ವಿಚಾರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಥಿಯೇಟರ್ ನಲ್ಲಿ ಸಿನಿಮಾ ನೋಡಲು ಸಾಧ್ಯವಾಗದೆ ಇರುವವರು, ಹಾಗೂ ಇನ್ನೊಮ್ಮೆ ಸಿನಿಮಾ ನೋಡಲು ಇಷ್ಟ ಪಡುತ್ತಿರುವವರು ಅಮೆಜಾನ್ ಪ್ರೈಮ್ ನಲ್ಲಿ ಕೆಜಿಎಫ್2 ನೋಡಿಬಹುದು. ಈಗಾಗಲೇ ಥಿಯೇಟರ್ ನಲ್ಲಿ ಎಲ್ಲಾ ದಾಖಲೆಗಳನ್ನು ಕೆಜಿಎಫ್2 ಸಿನಿಮಾ ಧೂಳಿಪಟ ಮಾಡಿದ್ದು, ಇನ್ನುಮುಂದೆ ಓಟಿಟಿಯಲ್ಲಿ ಏನೆಲ್ಲಾ ದಾಖಲೆ ಮಾಡಲಿದೆ ಎಂದು ಕಾದು ನೋಡಬೇಕಿದೆ.. ಕೆಜಿಎಫ್2 ಸಿನಿಮಾದಲ್ಲಿ ನಟ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಈಶ್ವರಿ ರಾವ್, ರಾವ್ ರಮೇಶ್, ಪ್ರಕಾಶ್ ರಾಜ್ ಮಾಳವಿಕಾ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ..