ಬಿಗ್ ನ್ಯೂಸ್: ರಶೀದ್ ಖಾನ್ ರವರನ್ನು ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದ ಅಮಿರ್ ಖಾನ್ ಯಾಕೆ ಗೊತ್ತೇ?? ಕಾರಣ ಕೇಳಿ ಕುಶ್ ಆದ ಫ್ಯಾನ್ಸ್
ಐಪಿಎಲ್ ಪ್ರಿಯರು ರಶೀದ್ ಖಾನ್ ಅವರ ಆಟದ ವೈಖರಿಯನ್ನು ಮರೆಯಲು ಸಾಧ್ಯವಿಲ್ಲ. ಆಫ್ಘಾನಿಸ್ತಾನದ ಆಟಗಾರರಾಗಿರುವ ಇವರು, ಎಷ್ಟು ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ರಶೀದ್ ಖಾನ್ ಬೌಲಿಂಗ್ ಮಾಡಲು ಮೈದಾನಕ್ಕೆ ಬಂದರೆ ಬ್ಯಾಟ್ಸ್ಮನ್ ಗಳು ಹೆದರುವುದಂತು ಗ್ಯಾರಂಟಿ. ಇಂತಹ ರಶೀದ್ ಖಾನ್ ಅವರನ್ನು ಇದೀಗ ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ಅವರು ತಮ್ಮ ಮನೆಗೆ ಆಹ್ವಾನಿಸಿದ್ದಾರೆ.. ಅದಕ್ಕೆ ಕಾರಣ ಏನು ಗೊತ್ತಾ?
ರಶೀದ್ ಅವರು ಅದ್ಭುತವಾದ ಕ್ರಿಕೆಟ್ ಲೆಜೆಂಡ್ ಗಳಲ್ಲಿ ಒಬ್ಬರು. ಇವರು 2017ರಿಂದ ಐಪಿಎಲ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಶೀದ್ ಖಾನ್ ಅವರು ಈವರೆಗೂ 92 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 112 ವಿಕೆಟ್ಸ್ ಗಳನ್ನು ತೆಗೆದಿದ್ದಾರೆ. ಇವರೊಬ್ಬ ಅಸಾಮಾನ್ಯ ಬೌಲರ್ ಎಂದರೆ ತಪ್ಪಾಗುವುದಿಲ್ಲ. ಈ ವರ್ಷ ರಶೀದ್ ಖಾನ್ ಅವರು ಗುಜರಾತ್ ಟೈಟನ್ಸ್ ತಂಡದ ಪರವಾಗಿ ಆಡಿದರು, ಅದ್ಭುತವಾದ ಪ್ರದರ್ಶನ ನೀಡಿದರು. ಇದೀಗ ಇವರನ್ನು ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ಅವರು ಮನೆಗೆ ಆಹ್ವಾನಿಸಿದ್ದಾರೆ. ಇದಕ್ಕೆ ಒಂದು ಕಾರಣವನ್ನು ಸಹ ನೀಡಿದ್ದಾರೆ..

ಆಮೀರ್ ಖಾನ್ ಅವರು ಮತ್ತು ರಶೀದ್ ಖಾನ್ ಅವರು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಂದರ್ಶನದಲ್ಲಿ ಜೊತೆಯಾಗಿ ಪಾಲ್ಗೊಂಡಿದ್ದರು. ಆ ಸಂದರ್ಶನದಲ್ಲಿ ಆಮೀರ್ ಖಾನ್ ಅವರು ರಶೀದ್ ಖಾನ್ ಅವರ ಆಟದ ವೈಖರಿಯನ್ನು ಮನದುಂಬಿ ಹೊಗಳಿದ್ದಾರೆ ಜೊತೆಗೆ, ರಶೀದ್ ಖಾನ್ ಅವರು ಅದ್ಭುತವಾಗಿ ಅಡುಗೆ ಮಾಡುತ್ತಾರೆ ಎಂದು ಸಹ ಹೇಳಿದ್ದಾರೆ. ಹಾಗೆಯೇ ರಶೀದ್ ಖಾನ್ ಅವರಿಗೆ ಬರಲು ಆಹ್ವಾನ ನೀಡಿ, ನೀವು ಅದ್ಭುತವಾಗಿ ಅಡುಗೆ ಮಾಡುತ್ತೀರಿ, ಮುಂಬೈಗೆ ಬಂದಾಗ ನೀವು ನಮ್ಮ ಮನೆಗೆ, ನನಗಾಗಿ ಅಡುಗೆ ಮಾಡಬೇಕು ಎಂದು ಆಹ್ವಾನ ನೀಡಿದ್ದಾರೆ ನಟ ಆಮೀರ್ ಖಾನ್.