ಸಾವಿರ ಕೋಟಿ ಕಲೆಕ್ಷನ್ ಮಾಡಲು ಪುಷ್ಪ 2 ತಯಾರಾಗುತ್ತಿರುವಾಗ ಶಾಕ್ ನೀಡಿದ ಪ್ರಶಾಂತ್ ನೀಲ್. ಪುಷ್ಪ 2 ತಂಡದ ಕನಸಿಗೆ ನೇರವಾಗಿ ಅಡ್ಡಗಾಲು ಹಾಕಿದ ಪ್ರಶಾಂತ್; ಏನು ಗೊತ್ತೇ?

36

ಪುಷ್ಪ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಕೆಜಿಎಫ್ ಮತ್ತು ಪುಷ್ಪ ಸಿನಿಮಾ ಒಂದು ರೀತಿ ಕಾಂಪಿಟೇಶನ್ ಎನ್ನುವ ಹಾಗೆ ಆಗಿದೆ. ಇದಕ್ಕೆ ಮುಖ್ಯ ಕಾರಣ, ಅಂದು ಪುಷ್ಪ ಪ್ರೀ ರಿಲೀಸ್ ಇವೆಂಟ್ ನಲ್ಲಿ ಹೊರಬಂದ ಅದೊಂದು ಹೇಳಿಕೆ. ಆದರೆ ಈಗಾಗಲೇ ಪುಷ್ಪ ಸಿನಿಮಾದ ಎಲ್ಲಾ ರೆಕಾರ್ಡ್ ಗಳನ್ನು ಕೆಜಿಎಫ್2 ಧೂಳಿಪಟ ಮಾಡಿದ್ದಾಗಿದೆ. ಎಲ್ಲರೂ ಈಗ ಪುಷ್ಪ2 ಹೇಗಿರಲಿದೆ ಎಂದು ಕಾದು ಕುಳಿತಿದ್ದಾರೆ. ಈ ನಡುವೆ ಪುಷ್ಪ ನಿರ್ದೇಶಕ ಸುಕುಮಾರ್ ಮತ್ತು ಕೆಜಿಎಫ್ ನಿರ್ದೇಶಕ ಸುಕುಮಾರ್ ನಡುವೆ ಕ್ಲಾಶ್ ಆಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ..

ಕೆಜಿಎಫ್2 ಸಿನಿಮಾ ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಚಿತ್ರರಂಗದಲ್ಲೂ ಭರ್ಜರಿಯಾಗಿ ಹಿಟ್ ಆಗಿ, ಅದ್ಭುತವಾಗಿ ಹಣಗಳಿಕೆ ಮಾಡಿದೆ. ಪುಷ್ಪ ಸಿನಿಮಾ ಬಾಲಿವುಡ್ ನಲ್ಲಿ 100ಕೋಟಿ ಹಣಗಳಿಕೆ ಮಾಡಿತು, ಆದರೆ ಕೆಜಿಎಫ್2 400 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ. ಹಾಗಾಗಿ ಪುಷ್ಪ2 ಹೇಗಿರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ, ಪುಷ್ಪ2 ಸಿನಿಮಾ ಕೆಜಿಎಫ್ ರೇಕಾರ್ಡ್ಸ್ ಗಳನ್ನು ಬ್ರೇಕ್ ಮಾಡುತ್ತಾ ಎನ್ನುವ ಕುತೂಹಲ ಅಭಿಮಾನಿಗಳಿಗೆ. ಪುಷ್ಪ1 2021ರ ಡಿಸೆಂಬರ್ ನಲ್ಲಿ ತೆರೆಕಂಡಿತ್ತು, ಪುಷ್ಪ2 ಈ ವರ್ಷ ತೆರೆಕಾಣಬೇಕಿತ್ತು, ಆದರೆ ನಿರ್ದೇಶಕ ಸುಕುಮಾರ್ ಅವರು ಸಿನಿಮಾ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡುತ್ತಿರುವ ಕಾರಣ ಚಿತ್ರೀಕರಣ ತಡವಾಗಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಜುಲೈ ನಲ್ಲಿ ಪುಷ್ಪ2 ಚಿತ್ರೀಕರಣ ಶುರುವಾಗಲಿದ್ದು, 2023ರ ಏಪ್ರಿಲ್ ನಲ್ಲಿ ತೆರೆ ಕಾಣುತ್ತದೆ ಎನ್ನಲಾಗಿದೆ.

ಇನ್ನು ಪ್ರಶಾಂತ್ ನೀಲ್ ಅವರು, ಕೆಜಿಎಫ್2 ಬಳಿಕ ಸಲಾರ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸಲಾರ್ ಸಿನಿಮಾ 2021ರಲ್ಲಿ ತೆರೆಕಾಣಬೇಕಿತ್ತು. ಆದರೆ ಕೋವಿಡ್ ಹಾಗೂ ಕೆಜಿಎಫ್2 ಪ್ರೊಮೋಷನ್, ರಿಲೀಸ್ ಇರುವ ಕಾರಣ ಸಲಾರ್ ಸಿನಿಮಾ ಕೆಲಸಗಳು ಸಹ ಮುಂದಕ್ಕೆ ಹೋಗಿದ್ದು, ಸಲಾರ್ ಸಿನಿಮಾವನ್ನು ಸಹ 2023 ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ತರಲು ನಿರ್ಧರಿಸಿದೆ ಚಿತ್ರತಂಡ. ಇದೀಗ ಸಲಾರ್ ಮತ್ತು ಪುಷ್ಪ2 ಗೆ ಕ್ಲಾಶ್ ಆಗಬಹುದು ಎನ್ನುತ್ತಿವೆ ಮೂಲಗಳು. ಎರಡು ಬಿಗ್ ಬಜೆಟ್ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ, ಒಂದಕ್ಕೆ ಹೊಡೆತ ಬೀಳುವುದು ಖಂಡಿತ. ಹಾಗಾಗಿ ಈ ಕ್ಲಾಶ್ ನಿಜಕ್ಕೂ ನಡೆದರೆ, ಏನಾಗುತ್ತದೆ ಎಂದು ಕಾದು ನೋಡಬೇಕು ಎನ್ನುತ್ತಿದೆ ಚಿತ್ರರಂಗ. ಆರ್.ಆರ್.ಆರ್ ಬಿಡುಗಡೆಯಾಗಿ 20 ದಿನಕ್ಕೆ ಕೆಜಿಎಫ್2 ಬಿಡುಗಡೆಯಾಯಿತು, ಆದರೆ ಕೆಜಿಎಫ್2 ಬಿಡುಗಡೆಯಾದ ಬಳಿಕ ಆರ್.ಆರ್.ಆರ್ ಮಂಕಾಯಿತು. ಹಾಗಾಗಿ ಪುಷ್ಪ ಮತ್ತು ಸಲಾರ್ ನಡುವೆ ಕೂಡ ಹೀಗೆ ಆಗುತ್ತಾ ಎಂದು ಕಾದು ನೋಡಬೇಕಿದೆ.