ಪ್ರೀತಿಯಲ್ಲಿ ಮೋಸ ಸಾಮಾನ್ಯ, ಆದರೆ ಈ ರಾಶಿಯವರು ನಿಮ್ಮ ಅಪ್ಪನ ಆಣೆ ನಿಮಗೆ ಮೋಸ ಮಾಡುವುದಿಲ್ಲ. ಯಾವ್ಯಾವ ರಾಶಿಯ ಹುಡುಗಿಯರು ಮೋಸ ಮಾಡುವುದಿಲ್ಲ ಗೊತ್ತೇ??

44

ನಮಸ್ಕಾರ ಸ್ನೇಹಿತರೇ ಈ ಯುಗದಲ್ಲಿ ಅತ್ಯಂತ ಪ್ರಾಮಾಣಿಕ ಪ್ರೀತಿಯನ್ನು ಪಡೆಯುವುದೇ ವಿರಳಾತಿವಿರಳ ವಾಗಿ ಹೋಗಿಬಿಟ್ಟಿದೆ. ಹೌದು ಗೆಳೆಯರೇ ಪ್ರತಿಯೊಬ್ಬರು ಕೂಡ ಪ್ರಾಮಾಣಿಕ ಪ್ರೀತಿಗಾಗಿ ಕಾಯುತ್ತಿರುತ್ತಾರೆ. ಆದರೆ ಇಂದು ನಾವು ಹೇಳಹೊರಟಿರುವ ವಿಚಾರದ ಪ್ರಕಾರ ಈ ಕೆಲವೊಂದು ರಾಶಿಯ ಹುಡುಗಿಯರು ತಮ್ಮ ಪ್ರೇಮ ಸಂಬಂಧವನ್ನು ಜೋಪಾನವಾಗಿ ಕಾಯುತ್ತಾರೆ ಹಾಗೂ ಸಂಬಂಧದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಹಾಗಿದ್ದರೆ ಇಂತಹ ಮನೋಭಾವವನ್ನು ಹೊಂದಿರುವ ಹುಡುಗಿಯರು ಯಾವ ರಾಶಿಯಲ್ಲಿ ಜನಿಸಿರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ವೃಷಭ ರಾಶಿಯ ಹುಡುಗಿಯರು ತಮ್ಮ ಸಂಗಾತಿಯ ಕುರಿತಂತೆ ಸಾಕಷ್ಟು ಕಾಳಜಿಯನ್ನು ವಹಿಸುತ್ತಾರೆ. ತಮ್ಮಿಬ್ಬರ ನಡುವಿನ ಪ್ರೀತಿಯನ್ನು ಸದಾ ಸ್ಪೆಷಲ್ ಆಗಿ ಕಾಣುತ್ತಾರೆ. ಅದರಲ್ಲೂ ತಮ್ಮ ಸಂಗಾತಿಗೆ ಸಂಪೂರ್ಣ ಸಮಯವನ್ನು ನೀಡಿ ಅವರಿಗೆ ಯಾವುದು ಒಳ್ಳೆಯದು ಯಾವುದು ಕೆಡುಕು ಎನ್ನುವ ಅಭಿರುಚಿಯನ್ನು ಕೂಡ ಅವರು ತಿಳಿದುಕೊಂಡಿರುತ್ತಾರೆ. ತಮ್ಮ ಸಂಗಾತಿ ಕೋಪಗೊಳ್ಳುವಂತೆ ಇರಲು ಎಲ್ಲಾ ಪ್ರಶ್ನೆಗಳನ್ನು ಕೂಡ ಮಾಡುವವರು ತಮ್ಮ ಪ್ರೇಮ ಸಂಬಂಧದಲ್ಲಿ ಪ್ರಾಮಾಣಿಕರಾಗಿರುತ್ತಾರೆ.

ಕರ್ಕ ರಾಶಿ; ಪ್ರೇಮ ಸಂಬಂಧದಲ್ಲಿ ಪ್ರಾಮಾಣಿಕರಾಗಿರುವ ಇವರು ತಮ್ಮ ಸಂಗಾತಿಗಾಗಿ ಪ್ರಾಣವನ್ನೇ ಮುಡಿಪಾಗಿಡಲು ಸಿದ್ಧರಾಗಿರುತ್ತಾರೆ. ಅದರಲ್ಲೂ ಕರ್ಕ ರಾಶಿಯವರು ಮನೋಭಾವದಲ್ಲಿ ವಿನಮ್ರ ರಾಗಿರುತ್ತಾರೆ. ಯಾರಿಗಾದರೂ ಒಮ್ಮೆ ಇವರು ಮನಸ್ಸು ನೀಡಿದರೆ ಜೀವನಪೂರ್ತಿ ಅವರಿಗಾಗಿ ಏನು ಮಾಡಲು ಬೇಕಾದರೂ ಕೂಡ ಸಿದ್ಧರಾಗಿರುವ ನಿಷ್ಕಲ್ಮಶ ಮನಸ್ಸಿನವರು. ಚಿಕ್ಕ ಚಿಕ್ಕ ವಿಷಯದಲ್ಲೂ ಕೂಡ ಸಂತೋಷವನ್ನು ಹುಡುಕುವವರು ಹೆಚ್ಚಾಗಿ ಯಾವುದೇ ಡಿಮ್ಯಾಂಡ್ ಮಾಡುವುದಿಲ್ಲ.

ಕನ್ಯಾ ರಾಶಿ; ಕನ್ಯಾ ರಾಶಿಯ ಹುಡುಗಿಯರು ಸಾಕಷ್ಟು ಜವಾಬ್ದಾರರಾಗಿದ್ದಾರೆ ತಮ್ಮ ಜವಾಬ್ದಾರಿಯ ಕುರಿತಂತೆ ಸಂಪೂರ್ಣ ಜ್ಞಾನವನ್ನು ಹೊಂದಿರುತ್ತಾರೆ. ತಮ್ಮ ಪ್ರೇಮ ಸಂಬಂಧ ಕುರಿತಂತೆ ಸಾಕಷ್ಟು ಸೀರಿಯಸ್ ಆಗಿರುವ ಇವರು ತಮ್ಮ ಸಂಗಾತಿಯ ಸಂಪೂರ್ಣ ಧ್ಯಾನವನ್ನು ವಹಿಸಿರುತ್ತಾರೆ. ಇಷ್ಟೊಂದು ತಮ್ಮ ಲವ್ ಲೈಫ್ ನಲ್ಲಿ ಒಳ್ಳೆಯವರಾಗಿರುವವರು ತಮ್ಮ ಸಂಗಾತಿಯಿಂದ ಮೋಸ ಹೋದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಅವರಲ್ಲಿ ಇರುವುದಿಲ್ಲ.

ತುಲಾ ರಾಶಿ; ತುಲಾ ರಾಶಿಯ ಹುಡುಗಿಯರು ಸಾಕಷ್ಟು ರೋಮ್ಯಾಂಟಿಕ್ ಹಾಗೂ ಎಮೋಷನಲ್ ಆಗಿರುತ್ತಾರೆ. ಇವರ ಈ ಗುಣಗಳೇ ಇವರ ಸಂಗಾತಿಗೆ ಇವರ ಕುರಿತಂತೆ ಆಕರ್ಷಿತರಾಗಲು ಕಾರಣವಾಗಿರುತ್ತದೆ. ತಮ್ಮ ಸಂಗಾತಿಯ ಕುರಿತಂತಹ ಚಿಕ್ಕ ಚಿಕ್ಕ ವಿಷಯಗಳನ್ನು ಕೂಡ ಇವರು ನೆನಪಿಟ್ಟುಕೊಳ್ಳುತ್ತಾರೆ.

ವೃಶ್ಚಿಕ ರಾಶಿ; ವೃಶ್ಚಿಕ ರಾಶಿಯ ಹುಡುಗಿಯರು ಸಾಕಷ್ಟು ಬುದ್ಧಿವಂತರಾಗಿರುತ್ತಾರೆ ಇನ್ನು ಪ್ರೀತಿಯ ವಿಚಾರದಲ್ಲಿ ಕೂಡ ಅವರು ತಮ್ಮ ಸಂಗಾತಿಗೆ ನಿಷ್ಕಲ್ಮಷ ಹೃದಯದಿಂದ ಪ್ರೀತಿಯನ್ನು ನೀಡುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ವೃಶ್ಚಿಕ ರಾಶಿಯ ಹುಡುಗಿಯರು ತಮ್ಮ ಸಂಗಾತಿಯ ಭಾವನೆಗೆ ಹೆಚ್ಚಾಗಿ ಬೆಲೆ ನೀಡುತ್ತಾರೆ ಇದೇ ಕಾರಣಕ್ಕಾಗಿಯೇ ಈ ರಾಶಿಯ ಹುಡುಗಿಯರು ಎಂದರೆ ಹುಡುಗರು ಸಾಕಷ್ಟು ಇಷ್ಟಪಡುತ್ತಾರೆ. ಇನ್ನು ಇವರು ತಮ್ಮ ಸಂಗಾತಿಯ ಕಷ್ಟ ಹಾಗೂ ಸುಖ ಎರಡರಲ್ಲಿಯೂ ಕೂಡ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಯಾವುದೇ ಪರಿಸ್ಥಿತಿಯನ್ನಾದರೂ ಕೂಡ ಎದುರಿಸಿ ನಿಲ್ಲಬಲ್ಲಂತಹ ಹಾಗೂ ಅದಕ್ಕೆ ಸರಿಯಾದ ಪರಿಹಾರವನ್ನು ಹುಡುಕಬಲ್ಲ ಅಂತಹ ಬುದ್ಧಿಮತ್ತೆ ಇವರಿಗಿರುತ್ತದೆ. ಇದಕ್ಕಾಗಿಯೇ ಇವರು ಬೆಸ್ಟ್ ಗರ್ಲ್ ಫ್ರೆಂಡ್ ಆಗಿರುತ್ತಾರೆ.

ಮಕರ ರಾಶಿ; ಮಕರ ರಾಶಿಯವರು ಕೂಡ ಸಾಕಷ್ಟು ಪ್ರಾಮಾಣಿಕರಾಗಿರುತ್ತಾರೆ ಹಾಗೂ ತಾವು ಪ್ರೀತಿಸುವಂತಹ ಸಂಗಾತಿಯನ್ನು ಕಣ್ಣುಮುಚ್ಚಿ ನಂಬಿಬಿಡುತ್ತಾರೆ‌. ಯಾವುದೇ ಕೆಲಸವನ್ನಾದರೂ ಕೂಡ ತಾವು ಮಾಡಬೇಕು ಎಂದು ನಿರ್ಧರಿಸಿದ ಮೇಲೆ ಅದನ್ನು ಸಂಪೂರ್ಣಗೊಳಿಸಿಯೇ ಬಿಡುತ್ತಾರೆ. ತಮ್ಮ ಸಂಗಾತಿಯ ಪ್ರತಿಯೊಂದು ವಿಚಾರಗಳ ಕುರಿತಂತೆ ಕೂಡ ವಿಶೇಷವಾದ ಆಸಕ್ತಿಯನ್ನು ವಹಿಸುವವರು ಮದುವೆಯಾದ ಮೇಲೂ ಕೂಡ ಮನೆಯವರನ್ನು ಚೆನ್ನಾಗಿ ಸಮಾನ ಭಾವನೆಯಿಂದ ನೋಡಿಕೊಳ್ಳುತ್ತಾರೆ.

ಈ ಎಲ್ಲಾ ರಾಶಿಯ ಹುಡುಗಿಯರು ಖಂಡಿತವಾಗಿ ಪ್ರೇಮ ಸಂಬಂಧದಲ್ಲಿ ಪ್ರಾಮಾಣಿಕರಾಗಿ ಹಾಗೂ ಪ್ರೀತಿಯ ಕುರಿತಂತೆ ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತಾರೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದ ರಾಶಿಯ ಪ್ರಕಾರ ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸುವುದನ್ನು ಮರೆಯಬೇಡಿ.