ಸಿಂಪಲ್ ನಟನೆಯ ಮೂಲಕವೇ ಎಲ್ಲರ ಮನಗೆದ್ದಿರುವ ಕನ್ನಡತಿ ಬಿಂದು ಪಾತ್ರದಲ್ಲಿ ನಟಿಸುತ್ತಿರುವ ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆಯೇನು ಗೊತ್ತೇ??

460

ಕನ್ನಡತಿ ಧಾರಾವಾಹಿ ಕಿರುತೆರೆ ವೀಕ್ಷಕರು ಬಹಳ ಇಷ್ಟಪಡುವ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯಲ್ಲಿ ಬರುವ ಹರ್ಷ ಭುವಿ ಪ್ರೀತಿ, ಅವರಿಬ್ಬರ ಸುಂದರ ದೃಶ್ಯಗಳು, ಮಗನ ಮೇಲೆ ಮತ್ತು ಭುವಿಯ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುವ ರತ್ನಮಾಲಾ, ಆಸ್ತಿ ಪಡೆಯಲು ಹೊಂಚು ಹಾಕುತ್ತಿರುವ ಸಾನಿಯಾಳ ಕುತಂತ್ರ, ಜೊತೆಗೆ ಹರ್ಷನ ಪ್ರೀತಿ ಸಿಗದ ವರು, ಹೀಗೆ ಎಲ್ಲಾ ಪಾತ್ರಗಳು ವೀಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಈ ಧಾರವಾಹಿಯಲ್ಲಿ ಜನರು ತುಂಬಾ ಇಷ್ಟ ಪಟ್ಟ ಪಾತ್ರಗಳಲ್ಲಿ ಒಂದು ಭುವಿ ತಂಗಿ ಬಿಂದು ಪಾತ್ರ. ಭುವಿ ತಂದೆಗೆ ಇಬ್ಬರು ಹೆಂಡತಿಯರು, ಬಿಂದು ಮತ್ತೊಬ್ಬ ಹೆಂಡತಿಯ ಮಗಳಾದರು, ಅಕ್ಕನ ಮೇಲೆ ಅವಳಿಗೆ ಬಹಳ ಪ್ರೀತಿ..

ಸದಾ ಅಕ್ಕನ ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ, ಅಕ್ಕನ ಪ್ರೀತಿಗೆ ಸಪೋರ್ಟ್ ಮಾಡುತ್ತಾ ಇರುವ ಈ ಬಿಂದು ಪಾತ್ರ ವೀಕ್ಷಕರಿಗೆ ಅಚ್ಚು ಮೆಚ್ಚು. ಇನ್ನು ಬಿಂದು ಪಾತ್ರದ ಮೂಲಕ ಮನೆಮಾತಾಗಿರುವ ಈ ನಟಿಯ ಹೆಸರು ಮೋಹಿರ ಆಚಾರ್ಯ. ಇವರು ಮಲೆನಾಡಿನ ಹೆಣ್ಣುಮಗಳು. ಮೋಹಿರ ಹುಟ್ಟಿ ಬೆಳೆದದ್ದು ಶಿವಮೊಗ್ಗದಲ್ಲಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು ಮೋಹಿರ. ಇವರಿಗೆ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದರು. ಆದರೆ ಮೋಹಿರ ಅವರು ಎಂಟ್ರಿ ಕೊಟ್ಟಿದ್ದು ನಟನೆಯ ಕ್ಷೇತ್ರಕ್ಕೆ. ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ, ಮೋಹಿರ ಅವರಿಗೆ ನಟನೆಯ ಅವಕಾಶ ಸಿಕ್ಕಿತು. ಮೊದಲಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮಲೋಕ ಧಾರವಾಹಿಯಲ್ಲಿ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುವ ಅವಕಾಶ ಮೋಹಿರ ಅವರಿಗೆ ಸಿಕ್ಕಿತು.

ಬಳಿಕ ಕನ್ನಡತಿ ಧಾರಾವಾಹಿಯ ಬಿಂದು ಪಾತ್ರ. ಬಿಂದು ಪಾತ್ರ ಜನರಿಗೆ ಎಷ್ಟು ಇಷ್ಟವಾಗಿದೆ ಅಂದ್ರೆ, ಮೋಹಿರ ಅವರನ್ನು ಬಿಂದು ಎಂದೇ ಕರೆಯಲು ಶುರು ಮಾಡಿದ್ದಾರೆ.ತಂಗಿ ಪಾಟೀಸಲ್ಜ್ ನಟಿಸುತ್ತಿರುವ ಎಲ್ಲರ ಮೆಚ್ಚಿನ ತಂಗಿ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕನ್ನಡತಿ ಧಾರವಾಹಿ ಜೀವನಕ್ಕೆ ಒಂದು ಮೈಲಿಗಲ್ಲು ಎನ್ನುತ್ತಾರೆ ಮೋಹಿರ. ಈ ಧಾರಾವಾಹಿಯಿಂದ ಜನರಿಗೆ ತುಂಬಾ ಹತ್ತಿರವಾಗಿದ್ದೇನೆ, ಜನರು ನನ್ನನ್ನು ಬಿಂದು ಅಂತಲೇ ಕರೆಯುವುದನ್ನು ನೋಡಿದಾಗ ಹೆಮ್ಮೆ ಆಗುತ್ತದೆ ಎನ್ನುತ್ತಾರೆ ಮೋಹಿರ. ಕನ್ನಡತಿ ಧಾರಾವಾಹಿಯ ಫೇಮ್ ಜೊತೆಗೆ ಮೋಹಿರ ಅವರಿಗೆ ತೆಲುಗು ಸಿನಿಮಾ ಒಂದರಲ್ಲಿ ನಾಯಕಿಯಾಗುವ ಅವಕಾಶ ಸಹ ಸಿಕ್ಕಿದ್ದು, ಆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ ಮೋಹಿರ. ನಮ್ಮ ಕರ್ನಾಟಕದ ಮತ್ತೊಬ್ಬ ಹುಡುಗಿ ಬೇರೆ ಭಾಷೆಯಲ್ಲಿ ಮಿಂಚುತ್ತಿರುವುದು ನಿಜಕ್ಕೂ ನಮಗೆ ಹೆಮ್ಮೆ.