ವಿಜಯ್ ದೇವರಕೊಂಡ ರವರ ಮುಂದಿನ ಸಿನಿಮಾದಲ್ಲಿ ಬಂಪರ್ ಅವಕಾಶ ಗಿಟ್ಟಿಸಿಕೊಂಡ ಕನ್ನಡತಿ. ರಶ್ಮಿಕಾ ಅಲ್ಲ ಮತ್ಯಾರು ಗೊತ್ತೇ??

36

ಯಂಗ್ ಸೆನ್ಸೇಷನ್ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾಗಳ ಮೂಲಕ ಸದ್ದು ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಲೈಗರ್ ಶೂಟಿಂಗ್ ಮುಗಿಸಿದ್ದು, ಆಗಸ್ಟ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಪ್ರಸ್ತುತ ವಿಜಯ್ ಅವರು ಸಮಂತಾ ಜೊತೆ ಖುಷಿ ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ವೇಗವಾಗಿ ಸಾಗುತ್ತಿದೆ. ಖುಷಿ ನಂತರ ಪೂರಿ ಜಗನ್ನಾಧ್ ವಿಜಯ್ ಕಾಂಬಿನೇಷನ್ ನಲ್ಲಿ ಜನಗಣಮನ ಎಂಬ ಸಿನಿಮಾ ಮೂಡಿಬರಲಿದೆ. ಮೊದಲಿಗೆ, ಪೂರಿ ಜಗನ್ನಾಧ್ ಅವರು ಮಹೇಶ್ ಬಾಬು ಅವರೊಂದಿಗೆ ಜನಗಣಮನ ಸಿನಿಮಾ ಮಾಡಲು ಬಯಸಿದ್ದರು. ಎರಡ್ಮೂರು ಬಾರಿ ಪ್ರಯತ್ನಿಸಿದರೂ ಫಲಿಸಲಿಲ್ಲ. ಪೂರಿ ಅವರ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆದ ಕಾರಣ ಮಹೇಶ್ ಬಾಬು ಅವರು ಪೂರಿ ಅವರೊಟ್ಟಿಗೆ ಸಿನಿಮಾ ಮಾಡುವ ಧೈರ್ಯ ಮಾಡಲಿಲ್ಲ.

ಈ ನಡುವೆ ಇಸ್ಮಾರ್ಟ್ ಶಂಕರ್ ಸೂಪರ್ ಡೂಪರ್ ಸಿನಿಮಾ ಪ್ರಾರಂಭಿಸುವುದರ ಜೊತೆಗೆ, ಪೂರಿ ಜಗನ್ನಾಧ್ ಪ್ರಸ್ತುತ ವಿಜಯ್ ದೇವರಕೊಂಡ ಅವರೊಂದಿಗೆ 100 ಕೋಟಿ ರೂಪಾಯಿಗಳ ಬಜೆಟ್‌ ನೊಂದಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಲೈಗರ್‌ ಸಿನಿಮಾ ಮಾಡುತ್ತಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಚಟುವಟಿಕೆ ನಡೆಯುತ್ತಿದೆ. ಜನಗಣಮನ ಸಿನಿಮಾದ ಪ್ರೀಪ್ರೊಡಕ್ಷನ್ ಕೂಡ ನಡೆಯುತ್ತಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ಕೂಡ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಪೂಜಾ ನಾಯಕಿ ಅಲ್ಲ, ಐಟಂ ಸಾಂಗ್ ಗೆ ಸೀಮಿತವಾಗಿರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಆದರೆ, ಇದ್ಯಾವುದೂ ನಿಜವಲ್ಲ ಎಂದು ಪೂಜಾ ಹೆಗ್ಡೆ ಅವರಪಿಆರ್‌ ತಂಡ ಸ್ಪಷ್ಟಪಡಿಸಿದೆ. ಜನಗಣಮನ ಚಿತ್ರದ ನಾಯಕಿ ಪೂಜಾ ಹೆಗಡೆ. ಅದಕ್ಕೆ ಬೇರೆ ಮಾತಿಲ್ಲ. ಪೂಜಾ ಹೆಗ್ಡೆ ಐಟಂ ಸಾಂಗ್ ಮಾಡುತ್ತಿಲ್ಲ, ಪೂರ್ಣಪ್ರಮಾಣದ ಪಾತ್ರದಲ್ಲಿ ನಟಿಸಲಿದ್ದಾರೆ.. ಜೂನ್ ಎರಡನೇ ವಾರದಲ್ಲಿ ಮುಂಬೈನಲ್ಲಿ ಜನಗಣಮನ ಚಿತ್ರೀಕರಣ ಪ್ರಾರಂಭವಾಗಲಿದೆ. ಪೂಜಾ ಹೆಗ್ಡೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಪೂಜಾ ಹೆಗ್ಡೆ ಇಬ್ಬರ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ ಎಂದು ಪೂಜಾ ಹೆಗ್ಡೆ ಅವರ ಟೀಮ್ ತಿಳಿಸಿದ್ದಾರೆ ಇತ್ತೀಚೆಗಷ್ಟೇ ಎಫ್3 ಸಿನಿಮಾದಲ್ಲಿ ಪೂಜಾ ವಿಶೇಷ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೀಸ್ಟ್ ಮತ್ತು ಆಚಾರ್ಯ ಚಿತ್ರಗಳು ನಿರಾಸೆ ಮೂಡಿಸಿದರೂ ಎಫ್3 ಯಶಸ್ಸಿನಿಂದ ಪೂಜಾ ಈಗ ಸಮಾಧಾನ ಕಳೆದುಕೊಳ್ಳುತ್ತಿದ್ದಾರೆ.