ಕುಟುಂಬದ ಜೊತೆ ಇದ್ದಾಗ ಅಪ್ಪಿತಪ್ಪಿಯೂ ಈ 5 ವೆಬ್ ಸರಣಿಗಳನ್ನು ವೀಕ್ಷಿಸ ಬೇಡಿ, ಯಾಕೆ ಗೊತ್ತೇ?? ಒಂದೊಂದು ಹೇಗಿವೆ ಗೊತ್ತೆ?

47

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಬಾಲಿವುಡ್ ಮಂದಿ ಅಂದರೆ ಪ್ರೇಕ್ಷಕರು ಹಿಂದಿ ಭಾಷೆಯ ವೆಬ್ ಸರಣಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಆದರೆ ಇಂದಿನ ವಿಚಾರದಲ್ಲಿ ನಾವು ಹೇಳಲು ಹೊರಟಿರುವುದು ಕೆಲವೊಂದು ವೆಬ್ ಸರಣಿಗಳನ್ನು ಕುಟುಂಬಸ್ಥರ ಮುಂದೆ ನೋಡಲು ಖಂಡಿತವಾಗಿ ಸಾಧ್ಯವಿಲ್ಲ ಎನ್ನುವುದು. ಹೌದು ಗೆಳೆಯರೇ ಅದರಲ್ಲಿರುವ ಭಾಷೆಯ ಉಪಯೋಗದ ಕಾರಣದಿಂದಾಗಿ ಹಾಗೂ ಕೆಲವೊಂದು ದೃಶ್ಯಗಳು ಅಗತ್ಯಕ್ಕಿಂತ ಹೆಚ್ಚಾಗಿ ಬೋಲ್ಡ್ ಅಂದರೆ ರೋಮ್ಯಾಂಟಿಕ್ ಅಗತ್ಯಕ್ಕಿಂತ ಮೀರಿರುವ ದೃಶ್ಯಗಳ ಕಾರಣದಿಂದಾಗಿ ನೀವು ಕುಟುಂಬಸ್ಥರ ಮುಂದೆ ಕೆಲವೊಂದು ವೆಬ್ ಸರಣಿಗಳನ್ನು ನೋಡಲು ಸಾಧ್ಯವೇ ಇಲ್ಲ. ಹಾಗಿದ್ದರೆ ಅಂತಹ ವೆಬ್ ಸರಣಿಗಳು ಯಾವುವು ಎಂದು ತಿಳಿಯೋಣ ಬನ್ನಿ.

ಪೇಯಿಂಗ್ ಗೆಸ್ಟ್; ಈ ವೆಬ್ ಸರಣಿ ಬಿಡುಗಡೆ ಆಗಿರುವುದು 2017 ರಲ್ಲಿ ಎಂ ಎಸ್ ಪ್ಲೇಯರ್ ಡಿಜಿಟಲ್ ಪ್ಲಾಟ್ ಫಾರಂನಲ್ಲಿ. ಬೆಂಗಾಳಿ ನಟಿ ಆಗಿರುವ ಸ್ವಸ್ತಿಕ ಮುಖರ್ಜಿ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು ಈ ವೆಬ್ ಸರಣಿ ಸಾಕಷ್ಟು ಬೈಗುಳದ ಮಾತುಗಳನ್ನು ಹಾಗೂ ರೋಮ್ಯಾಂಟಿಕ್ ದೃಶ್ಯಗಳನ್ನು ಹೊಂದಿರುವ ಕಾರಣದಿಂದಾಗಿ ಫ್ಯಾಮಿಲಿ ಜೊತೆಗೆ ಕೂತು ನೋಡಲು ಸಾಧ್ಯವಿಲ್ಲ.

ಮಿರ್ಜಾಪುರ್; ಈಗಾಗಲೇ ಅಮೆಜಾನ್ ಪ್ರೈಮ್ ನಲ್ಲಿ ಮಿರ್ಜಾಪುರ್ ವೆಬ್ ಸರಣಿಯ ಎರಡು ಸೀಸನ್ ಗಳು ಬಿಡುಗಡೆಯಾಗಿವೆ. ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ದಿವ್ಯೆಂದು ಶರ್ಮ ಹಾಗೂ ಅಲಿ ಪಝಲ್ ಸೇರಿದಂತೆ ಹಲವಾರು ಬಾಲಿವುಡ್ ನಟರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಕಡಿಮೆ ಇದ್ದರೂ ಕೂಡ ಕೆಟ್ಟ ಮಾತುಗಳು ಹೆಚ್ಚಾಗಿ ಕಂಡು ಬಂದಿದೆ. ಆದರೂ ಕೂಡ ಹಿಂದಿ ಭಾಷೆ ಅತ್ಯಂತ ಹೆಚ್ಚು ವೀಕ್ಷಣೆ ಯಾಗಿರುವ ವೆಬ್ ಸರಣಿಗಳಲ್ಲಿ ಮಿರ್ಜಾಪುರ್ ವೆಬ್ ಸರಣಿ ಅಗ್ರ ಪಂಕ್ತಿಯಲ್ಲಿ ಕಾಣಸಿಗುತ್ತದೆ.

ಸೇಕ್ರೆಡ್ ಗೇಮ್ಸ್; ಬಾಲಿವುಡ್ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಕಲಾವಿದ ಆಗಿರುವ ನವಾಜುದ್ದೀನ್ ಸಿದ್ದಿಕಿ ರವರು ನಟಿಸಿರುವ ಸೇಕ್ರೆಡ್ ಗೇಮ್ಸ್ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಸೇರಿದಂತೆ ಡೈಲಾಗ್ ನಲ್ಲಿ ಕೆಟ್ಟ ಮಾತುಗಳು ಪ್ರಯೋಗವು ಕೂಡ ಹೆಚ್ಚಾಗಿ ಕಂಡು ಬಂದಿದೆ. ಇನ್ನು ಸೈಫ್ ಆಲಿ ಖಾನ್ ಹಾಗೂ ಕುಬ್ರ ಸೇಠ್ ಕೂಡ ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಇದು ಈಗಾಗಲೇ ಎರಡು ಸೀಸನ್ ಗಳಲ್ಲಿ ಬಿಡುಗಡೆಯಾಗಿದೆ.

ಆಶ್ರಮ್; ಬಾಲಿವುಡ್ ಚಿತ್ರರಂಗದ ಫೇಮಸ್ ನಟ ಆಗಿರುವ ಬಾಬಿ ಡಿಯೋಲ್ ರವರು ಈ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದು ಇದು ಎಂ ಎಸ್ ಪ್ಲೇಯರ್ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಇದರ ಮೂರನೇ ಅವತರಣಿಕೆ ಕೂಡ ಬಿಡುಗಡೆಯಾಗುವ ಸನ್ನಾಹದಲ್ಲಿದೆ. ಆಶ್ರಮ ಎಂಬ ಹೆಸರನ್ನು ಕೇಳಿದ ತಕ್ಷಣ ಅದನ್ನು ಅತ್ಯಂತ ಸಂಸ್ಕಾರಯುತ ವೆಬ್ ಸೀರಿಸ್ ಎಂಬುದಾಗಿ ಭಾವಿಸುವ ಅಗತ್ಯವಿಲ್ಲ. ರೋಮ್ಯಾಂಟಿಕ್ ದೃಶ್ಯಗಳು ಹೆಚ್ಚಾಗಿ ತುಂಬಿಕೊಂಡಿದೆ.

ಮಸ್ತ್ ರಾಮ್; ಈ ವೆಬ್ ಸರಣಿಯಲ್ಲಿ ಎಲ್ಲೆಯನ್ನು ಮೀರಿದ ಬೋಲ್ಡ್ ದೃಶ್ಯಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಈ ವೆಬ್ ಸರಣಿಯಲ್ಲಿ ಭೋಜಪುರಿ ಮೂಲದ ನಟಿಯಾಗಿರುವ ರಾಣಿ ಚಟರ್ಜಿ ಅಗತ್ಯಕ್ಕಿಂತ ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ 5 ವೆಬ್ ಸರಣಿಗಳನ್ನು ನೀವು ಕುಟುಂಬದೊಂದಿಗೆ ಕಾಣುವ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ. ನೀವು ಈಗಾಗಲೇ ಈ ವೆಬ್ ಸರಣಿಗಳನ್ನು ನೋಡಿದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.