ಹೀನಾಯ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡಿ ತಂಡ ಕಟ್ಟಿದರೆ ಹೇಗಿರುತ್ತದೆ ಗೊತ್ತೇ? ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಆಟಗಾರು ಯಾರ್ಯಾರು ಗೊತ್ತೇ?
ಈ ವರ್ಷದ ಐಪಿಎಲ್ 15ನೇ ಆವೃತ್ತಿ ಎಷ್ಟು ಮನರಂಜನೆ ನೀಡಿತೋ, ಅಷ್ಟೇ ಆಶ್ಚರ್ಯವನ್ನು ಸಹ ಉಂಟು ಮಾಡಿತು. ಐಪಿಎಲ್ ಚಾಂಪಿಯನ್ಸ್ ಆಗಿದ್ದ ತಂಡಗಳೇ ಕಳಪೆ ಪ್ರದರ್ಶನ ನೀಡಿ, ಲೀಗ್ ಇಂದ ಬೇಗ ಹೊರಬಿದ್ದವು. ನಿರೀಕ್ಷೆ ಇಟ್ಟುಕೊಂಡಿದ್ದ ಆಟಗಾರರೆ ಕಳಪೆ ಪ್ರದರ್ಶನ ನೀಡಿದರು. ಈ ವರ್ಷ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ತಂಡಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಹೊಸ ತಂಡ ರಚಿಸಿದರೆ ಹೇಗಿರುತ್ತದೆ? ಇಂದು ನಿಮಗೆ ತೋರಿಸುತ್ತೇವೆ ನೋಡಿ..
ರೋಹಿತ್ ಶರ್ಮಾ..ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ, ಈ ಸಾಲಿನಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ಕಾರಣ, ಅರ್ಧಶತಕ ಹೊಡೆಯಲು ಸಹ ಆಗಲಿಲ್ಲ..ಕೇನ್ ವಿಲಿಯಮ್ಸ್..ಎಸ್.ಆರ್.ಹೆಚ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸ್ ಅವರು ಕಳಪೆ ಫಾರ್ಮ್ ನಲ್ಲಿದ್ದು, ಈ ಸಾರಿ ಅವರು ಗಳಿಸಿದ್ದು, 93.50 ಸ್ಟ್ರೈಕ್ ರೇಟ್ ನಲ್ಲಿ ಅವರು ಗಳಿಸಿದ್ದು 216 ರನ್ ಗಳು ಮಾತ್ರ..ಕಳಪೆ ಫಾರ್ಮ್ ನಲ್ಲಿದ್ದ ಆರ್.ಸಿ.ಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಈ ಸಾರಿ, ಎರಡು ಅರ್ಧ ಶತಕಗಳ ಜೊತೆ ಗಳಿಸಿದ್ದು, 341 ರನ್ ಗಳು ಮಾತ್ರ..ಕೆಕೆಆರ್ ತಂಡದ ಸ್ಟಾರ್ ಪ್ಲೇಯರ್ ವೆಂಕಟೇಶ್ ಅಯ್ಯರ್, ಈ ವರ್ಷ 12 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 182 ರನ್ ಗಳು..ಇಶಾನ್ ಕಿಶನ್ ಅವರ ಪ್ರದರ್ಶನ ಅಷ್ಟೇನು ಕಳಪೆ ಅನ್ನಿಸದೆ ಹೋದರು, 418 ರನ್ ಗಳಿಸಿದ್ದರೂ ಸಹ ಮುಂಬೈ ತಂಡ ಗೆಲ್ಲಲಿಲ್ಲ.

ಕಳೆದ ಸೀಸನ್ ನಲ್ಲಿ ಆರ್.ಸಿ.ಬಿ ಸ್ಟಾರ್ ಪ್ಲೇಯರ್ ಗ್ಲೆನ್ ಮ್ಯಾಕ್ಸ್ವೆಲ್ 500ಕ್ಕಿಂತ ಅಧಿಕ ಗಳಿಸಿದ್ದರು, ಈ ಸಾರಿ ಇವರು 301 ರನ್ ಗಳನ್ನು ಮಾತ್ರವೇ ಗಳಿಸಿದರು. ಮುಂಬೈ ತಂಡದ ಆಲ್ ರೌಂಡರ್ ಕೈರನ್ ಪೋಲಾರ್ಡ್ ಅವರು ಸಹ ಕಳಪೆ ಫಾರ್ಮ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗಳಿಸಿದ್ದು, 144 ರನ್ ಗಳು ಮಾತ್ರ..ಸಿರಾಜ್ ಮೊಹಮ್ಮದ್, ಆರ್.ಸಿ.ಬಿ ಬೌಲಿಂಗ್ ಟೀಮ್ ನ ದುಬಾರಿ ಆಟಗಾರ, ಈ ಬಾರಿ 31 ಸಿಕ್ಸರ್ ಹೊಡೆಸಿಕೊಂಡಿರುವ ಒಬ್ಬರೇ ಆಟಗಾರ ಸಿರಾಜ್..ವರುಣ್ ಚಕ್ರವರ್ತಿ..ಕೆಕೆಆರ್ ತಂಡದ ಯಶಸ್ವಿ ಸ್ಪಿನ್ನರ್ ಈ ಸೀಸನ್ ನಲ್ಲಿ 12 ಪಂದ್ಯಗಳಲ್ಲಿ ಕೇವಲ 6 ವಿಕೆಟ್ಸ್ ಪಡೆದರು..ವಾಷಿಂಗ್ಟನ್ ಸುಂದರ್.. ಗಾಯಗಳಾಗಿದ್ದ ಕಾರಣ ಟೂರ್ನಿಗ ಬಹುಪಾಲು ಹೊರಗೆ ಉಳಿದಿದ್ದ ಇವರು 6 ವಿಕೆಟ್ ಗಳನ್ನು ಮಾತ್ರವೇ ಪಡೆದರು..ದುಷ್ಮಾಂತ ಚಾಮಿರ..ಲಕ್ನೌ ತಂಡದ ವೇಗಿ ಚಾಮಿರ, ಈ ಸಾರಿ ಪಡೆದದ್ದು ಕೇವಲ 9 ವಿಕೆಟ್ ಗಳನ್ನು ಮಾತ್ರವೇ ಆಗಿದೆ..