ರಾಜಸ್ತಾನದ ಆರಂಭಿಕ ಆಟಗಾರ ಬಟ್ಟ್ಲರ್ ಜೊತೆ ಮಸ್ತ್ ಸ್ಟೆಪ್ಸ್ ಹಾಕಿದ ಧನುಶ್ರೀ. ಹೇಗಿದೆ ಗೊತ್ತೇ ವೈರಲ್ ಆದ ವಿಡಿಯೋ??

60

ಐಪಿಎಲ್ ಪಂದ್ಯಗಳ ಫಿನಾಲೆ ಮುಗಿದ ಬಳಿಕ, ಗುಜರಾತ್ ಟೈಟನ್ಸ್ ತಂಡವು ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಆಡಿ, ಕಪ್ ಗೆದ್ದಿದೆ. ಐಪಿಎಲ್ ಮೊದಲ ಸೀಸನ್ ವಿನ್ನರ್ ಆಗಿದ್ದ ರಾಜಸ್ತಾನ್ ರಾಯಲ್ಸ್ ತಂಡ, ಅದಾದ ಬಳಿಕ ಮೊದಲ ಬಾರಿಗೆ ಫಿನಾಲೆ ತಲುಪಿತ್ತು, ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ರಾಜಸ್ತಾನ್ ರಾಯಲ್ಸ್ ತಂಡ ಫೈನಲ್ಸ್ ನಲ್ಲಿ ಸೋತ ಬಳಿಕ, ಡ್ರೆಸ್ಸಿಂಗ್ ರೂಮ್ ಗೆ ತೆರಳಿದ ಮೇಲೆ ಅಲ್ಲಿ, ಚಿಕ್ಕದಾಗಿ ಸೆಲೆಬ್ರೇಟ್ ಮಾಡಿದ್ದರು. ಅದರಲ್ಲಿ ತಂಡದ ವೇಗಿ ಯುಜವೇಂದ್ರ ಚಾಹಲ್ ಅವರ ಪತ್ನಿ ಬ್ಯಾಟ್ಸ್ಮನ್ ಆಗಿರುವ ಜೋಸ್ ಬಟ್ಲರ್ ಅವರಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದು, ಆ ವಿಡಿಯೋ ವೈರಲ್ ಆಗಿದೆ..

ಯುಜವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ಅವರು, ಮುಂಬೈ ನ ಡೆಂಟಲ್ ಕಾಲೇಜಿನಲ್ಲಿ ಓದಿ ಶಿಕ್ಷಣ ಪಡೆದಿದ್ದಾರೆ. ಆದರೆ ಇವರು ಫೇಮಸ್ ಆಗಿರುವುದು ಡ್ಯಾನ್ಸರ್ ಆಗಿ. ಧನಶ್ರೀ ಅವರ ಯೂಟ್ಯೂಬ್ ಚಾನೆಲ್ ಸಹ ಇದ್ದು, ಅದಕ್ಕೆ 25 ಲಕ್ಷಕ್ಕಿಂತ ಹೆಚ್ಚು ಚಂದಾದರರಿದ್ದಾರೆ. ಇನ್ನು ಧನಶ್ರೀ ಅವರು ಅನೇಕ ರೀಲ್ಸ್ ವಿಡಿಯೋಗಳು ಡ್ಯಾನ್ಸ್ ಮಾಡಿರುವ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಧನಶ್ರೀ ಅವರೊಡನೆ ಪತಿ ಚಾಹಲ್ ಸಹ ಸ್ಟೆಪ್ ಹಾಕುತ್ತಾರೆ. ಈ ವರ್ಷ ಐಪಿಎಲ್ ಪಂದ್ಯ ನಡೆಯುವಾಗ, ಧನಶ್ರೀ ಅವರು ಆರ್.ಆರ್ ತಂಡದ ಜೊತೆ ಟ್ರಾವೆಲ್ ಮಾಡಿದ್ದು, ಗಂಡನಿಗೆ ಮತ್ತು ಇಡೀ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದರು.

ಫಿನಾಲೆ ಪಂದ್ಯ ಮುಗಿದ ಬಳಿಕ, ಡ್ರೆಸ್ಸಿಂಗ್ ರೂಮ್ ನಲ್ಲಿ ಸೆಲೆಬ್ರೇಷನ್ ನಡೆಯುವಾಗ, ಧನಶ್ರೀ ಅವರು ಡ್ಯಾನ್ಸ್ ಮಾಡಲು ಶುರು ಮಾಡಿದ್ದು, ಅವರ ಜೊತೆಗೆ ಪತಿ ಚಾಹಲ್ ಸಹ ಸ್ಟೆಪ್ ಹಾಕಿದ್ದಾರೆ. ಆದರೆ ಧನಶ್ರೀ ಎನರ್ಜಿಗೆ ಮ್ಯಾಚ್ ಮಾಡಲು ಸಾಧ್ಯವಾಗದೆ, ಚಾಹಲ್ ಅವರು ಡ್ಯಾನ್ಸ್ ಇಂದ ಹಿಂದಕ್ಕೆ ಸರಿಯುತ್ತಾರೆ. ಆಗ ಜೋಸ್ ಬಟ್ಲರ್ ಅವರು ಬಂದು ಧನಶ್ರೀ ಅವರ ಜೊತೆ ಡ್ಯಾನ್ಸ್ ಮಾಡಲು ಶುರು ಮಾಡುತ್ತಾರೆ. ತಮ್ಮಿಂದ ಆದಷ್ಟು ಡ್ಯಾನ್ಸ್ ಮಾಡುತ್ತಾರೆ ಬಟ್ಲರ್. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಜೋಸ್ ಬಟ್ಲರ್ ಅವರು ಮತ್ತು ಚಾಹಲ್ ಅವರ ಪತ್ನಿ ಡ್ಯಾನ್ಸ್ ಮಾಡುತ್ತಿರುವುದನ್ನು ನೆಟ್ಟಿಗರು ಎಂಜಾಯ್ ಮಾಡಿದ್ದಾರೆ. ನೀವು ಸಹ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ..