ಮೊಹಮ್ಮದ್ ಶಮಿ ಮೇಲೆ ಆರೋಪ ಮಾಡಿದ ಪತ್ನಿ ಹಸೀನಾ ಜಹಾನ್ ರವರಿಗೆ ಶಾಕ್ ನೀಡಿದ ತಂದೆ; ಹಸೀನ ರವರ ಮತ್ತೊಂದು ಮುಖ ತೆರೆದಿಟ್ಟು ಹೇಳಿದ್ದೇನು ಗೊತ್ತೇ??

10

ನಮಸ್ಕಾರ ಸ್ನೇಹಿತರೇ ಕೆಲವು ವರ್ಷಗಳ ಹಿಂದೆ ಭಾರತೀಯ ಕ್ರಿಕೆಟಿಗ ಶಮಿ ರವರ ವಿರುದ್ಧ ಅವರ ಪತ್ನಿ ಆಗಿರುವ ಹಸೀನಾ ಜಹಾನ್ ರವರು ಬೇರೆ ಮಹಿಳೆಯರ ಜೊತೆಗೆ ಸಂಬಂಧವನ್ನು ಹೊಂದಿರುವ ದೂರನ್ನು ದಾಖಲಿಸಿದ್ದರು ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಈಗ ಖುದ್ದಾಗಿ ಹಸಿನ ಜಹಾನ್ ರವರ ತಂದೆಯೇ ಹಸಿನ ಜಹಾನ್ ರವರ ವಿರುದ್ಧ ಈಗ ದೂರನ್ನು ದಾಖಲಿಸಿದ್ದಾರೆ.

ಹೌದು ಗೆಳೆಯರೇ ಈ ಮೂಲಕ ಹಸಿನ ಜಹಾನ್ ರವರ ತಂದೆ ಮೊಹಮ್ಮದ್ ಹುಸೇನ್ ಅವರು ಮಗಳ ನಿಜ ಮುಖವನ್ನು ಈಗ ಬಯಲು ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಕಳೆದ ವರ್ಷ ಹಸಿನ ಜಹಾನ್ ರವರ ಸಹೋದರ ಹಾಗೂ ಮೊಹಮ್ಮದ್ ಹುಸೇನ್ ರವರ ಮಗ ಆಗಿರುವ ತಾರಿಕ್ ಪರ್ವೇಜ್ ರವರು ಮಹಾಮಾರಿಯ ಕಾರಣದಿಂದಾಗಿ ಮರಣವನ್ನು ಹೊಂದಿದರು. ಇನ್ನೂ ಅವರ ಪತ್ನಿ ಕೂಡ ಇದಕ್ಕೂ ಮುನ್ನವೇ ಅವರಿಂದ ಬೇರೆಯಾಗಿ ಅವರ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಮುಸ್ಲಿಂ ಕಾನೂನಿನ ಅನ್ವಯ ಮಗನ ಮರಣದ ನಂತರ ಆತನ ಹೆಸರಿನಲ್ಲಿ ಇರುವ ಎಲ್ಲಾ ಆಸ್ತಿಗಳು ಕೂಡ ಅವರ ತಂದೆ ಹಾಗೂ ತಾಯಿಯ ಪಾಲಾಗುತ್ತದೆ ಎಂಬುದಾಗಿ ಬರೆದಿಟ್ಟಿದೆ. ಆದರೆ ಹಸೀನಾ ಜಹಾನ್ ರವರು ಈಗಾಗಲೇ ತಮ್ಮ ಸಹೋದರನ ಹೆಸರಿನಲ್ಲಿರುವ 2 ಟ್ರಕ್ ಬೈಕ್ ಕಾರು ಹೋಟೆಲ್ ಪೆಟ್ರೋಲ್ ಬಂಕ್ ಹಾಗೂ ಕಲ್ಲಿದ್ದಲಿನ ಗಣಿಯನ್ನು ಕಬ್ಜಾ ಮಾಡಿಕೊಂಡಿದ್ದಾರೆ.

ತಾವು ಕಷ್ಟದಲ್ಲಿದ್ದ ಸಂದರ್ಭದಲ್ಲಿ ತಮ್ಮ ಮಗಳ ಸಹಾಯಕ್ಕಾಗಿ ಕೋರಿದಾಗ ಹಸೀನಾ ಜಹಾನ ರವರು ತಮ್ಮ ತಂದೆ ಹಾಗೂ ತಾಯಿಯನ್ನು ಕೆಟ್ಟ ಮಾತುಗಳಿಂದ ಬಯ್ಯುವುದು ಹಾಗೂ ಹೊ’ಡೆಯುವುದನ್ನು ಮಾಡುತ್ತಿದ್ದರಂತೆ. ಇದೇ ಕಾರಣಕ್ಕಾಗಿ ಈಗ ಸಹೋದರ ಮರಣಹೊಂದಿದಾಗ ಆತನ ಆಸ್ತಿಯನ್ನು ಕಬ್ಜ ಮಾಡಿಕೊಳ್ಳಲು ಬಂದಿದ್ದಾಳೆ ಎನ್ನುವ ಹಿನ್ನೆಲೆಯಲ್ಲಿ ಮಗಳ ಜೊತೆಗಿನ ಸಂಬಂಧವನ್ನು ಹಾಗೂ ಆಕೆಗೆ ಯಾವುದೇ ಆಸ್ತಿ ಸೇರುವುದಿಲ್ಲ ಎಂಬುದಾಗಿ ಹುಸೇನ್ ರವರು ವಾದಿಸಿದ್ದಾರೆ.

ಈಗಾಗಲೇ ಮೊಹಮ್ಮದ್ ಹುಸೇನ್ ರವರು ತಮ್ಮ ಮಗಳ ಈ ಕೃತ್ಯದ ವಿರುದ್ಧ ಕೊಲ್ಕತ್ತಾ ಹೈಕೋರ್ಟ್ ನಲ್ಲಿ ದೂರನ್ನು ದಾಖಲಿಸಿದ್ದಾರೆ. ಇದನ್ನು ಈಗಲೇ ತನಿಖೆಯಲ್ಲಿದ್ದು ಮುಂದಿನ ದಿನಗಳಲ್ಲಿ ತನಿಖೆ ಹಾಗೂ ವಿಚಾರಣೆಯ ನಂತರ ಯಾವ ಫಲಿತಾಂಶ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ