ಇತಿಹಾಸದಲ್ಲಿಯೇ ಒಂದು ವರ್ಷಕ್ಕೆ ಹಗ್ಗದ ರಿಚಾರ್ಜ್: ಕೇವಲ 141 ರುಪಾಯಿಗೆ ಒಂದು ವರ್ಷದ ವ್ಯಾಲಿಡಿಟಿ. ಏನು ಸಿಗುತ್ತದೆ ಗೊತ್ತೆ??

44

ನಮಸ್ಕಾರ ಸ್ನೇಹಿತರೇ ನಿಮಗೆ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಸಂಸ್ಥೆಗಳು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಗ್ರಾಹಕರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಕಾಂಪಿಟೇಶನ್ ನಲ್ಲಿ ಕಂಡುಬರುವ ಟೆಲಿಕಾಂ ಸಂಸ್ಥೆಗಳು ಎಂದರೆ ಜಿಯೋ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳು ಎಂದು ಹೇಳಬಹುದಾಗಿದೆ.

ಆದರೆ ನಿಮಗೆ ಗೊತ್ತಾ ಗೆಳೆಯರೇ ಈ ಎಲ್ಲಾ ಸಂಸ್ಥೆಗಳ ತಿಂಗಳ ಮಿನಿಮಮ್ ವ್ಯಾಲಿಡಿಟಿ ರಿಚಾರ್ಜ್ 200 ರೂಪಾಯಿಗಿಂತ ಕಡಿಮೆ ಸಿಗುವುದು ನಿಮಗೆ ಖಂಡಿತವಾಗಿ ಅನುಮಾನ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಹೇಳಹೊರಟಿರುವ ರಿಚಾರ್ಜ್ ಪ್ಲಾನ್ ಅಲ್ಲಿ ಸಿಗುವಂತಹ ಲಾಭಗಳನ್ನು ಕೇಳಿದರೆ ಹಾಗೂ ಆ ಸಂಸ್ಥೆ ಯಾವುದು ಎಂಬುದಾಗಿ ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಗೆಳೆಯರೇ ಎಂಟಿಎನ್ಎಲ್ ಸಂಸ್ಥೆಯ ರೀಚಾರ್ಜ್ ಪ್ಲಾನ್ 141 ರೂಪಾಯಿಯಲ್ಲಿ 365 ದಿನಗಳ ಅಂದರೆ ಒಂದು ವರ್ಷದ ಸಂಪೂರ್ಣ ವ್ಯಾಲಿಡಿಟಿ ಸಿಗುತ್ತದೆ. ಇದು ಸರ್ಕಾರಿ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ಸೇರಿದಂತೆ ಈಗಾಗಲೇ ನಾವು ಮೇಲೆ ತಿಳಿಸಿರುವ ಯಾವುದೇ ಖಾಸಗಿ ಟೆಲಿಕಾಂ ಸಂಸ್ಥೆಯಲ್ಲಿ ಕೂಡ ಇಷ್ಟೊಂದು ಒಳ್ಳೆಯ ಹಾಗೂ ಕಡಿಮೆ ಬೆಲೆಯ ವ್ಯಾಲಿಡಿಟಿ ರಿಚಾರ್ಜ್ ಸಿಗುವುದಿಲ್ಲ. ಇನ್ನು ಈ ರಿಚಾರ್ಜ್ ಸೌಲಭ್ಯದಲ್ಲಿ ಏನೆಲ್ಲ ಪಡೆದುಕೊಳ್ಳುತ್ತೀರಿ ಎಂಬುದಾಗಿ ನೋಡೋಣ ಬನ್ನಿ.

ಮೊದಲನೇದಾಗಿ ದಿನಕ್ಕೆ 1gb ನಂತೆ 90 ದಿನಗಳವರೆಗೆ ಇಂಟರ್ನೆಟ್ ಸೌಲಭ್ಯ ಸಿಗಲಿದೆ. ಕರೆಯು ಕೂಡ 90 ದಿನಗಳವರೆಗೆ ಉಚಿತವಾಗಿ ಸಿಗಲಿದ್ದು ಬೇರೆ ನೆಟ್ವರ್ಕ್ ಗಳಿಗೆ ಕೇವಲ 200 ನಿಮಿಷ ಮಾತ್ರ ಸಿಗುತ್ತದೆ. 90 ದಿನಗಳ ನಂತರ ನೀವು ಪ್ರತಿ ಕರೆಗೆ 0.02 ಪೈಸೆಗಳನ್ನು ವ್ಯಯಿಸಬೇಕಾಗುತ್ತದೆ. ಇದೇ 149 ರೂಪಾಯಿಯ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಸಂಸ್ಥೆಯಲ್ಲಿ ನೋಡುವುದಾದರೆ ಕೇವಲ ಇಪ್ಪತ್ತು ದಿನಗಳ ಕಾಲ ಪ್ರತಿದಿನ 1gb ನಂತೆ ಉಚಿತ ಕರೆಗಳನ್ನು ಮಾತ್ರ ಪಡೆಯಬಹುದಾಗಿದೆ. ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳಲ್ಲಿ ಕೂಡ ಇದೇ ರೀತಿ ರಿಚಾರ್ಜ್ ಪ್ಲಾನ್ ಇದ್ದರೂ ಕೂಡ ಅದು ಕೇವಲ 21 ರಿಂದ 25 ದಿನಗಳವರೆಗೆ ವ್ಯಾಲಿಡಿಟಿ ಯನ್ನು ಮಾತ್ರ ಹೊಂದಿರುತ್ತದೆ. ಒಂದು ವರ್ಷದವರೆಗೆ ವ್ಯಾಲಿಡಿಟಿ ಯನ್ನು ನೀಡುವುದು ಕೇವಲ ಎಂಟಿಎನ್ಎಲ್ ಕಂಪನಿ ಮಾತ್ರ ಎಂದು ಹೇಳಬಹುದು.