WWW ನಿಂದ ದ ಗ್ರೇಟ್ ಖಲಿ ರವರನ್ನು ಕೈಬಿಟ್ಟಿದ್ದು ಯಾಕೆ ಗೊತ್ತಾ, ಸಾಧನೆ ಮಾಡಿದ್ದ ಖಲಿ ರವರನ್ನು ಹೊರ ಹಾಕಿದ್ದು ಯಾಕೆ ಗೊತ್ತೆ??

29

ನಮಸ್ಕಾರ ಸ್ನೇಹಿತರೇ ಪಂಜಾಬ್ ಮೂಲದ ದಲಿಪ್ ಸಿಂಗ್ ರಾಣ ರವರು 2006 ರಲ್ಲಿ ಡಬ್ಲ್ಯೂಡಬ್ಲ್ಯೂಇ ನಲ್ಲಿ ಸೇರುವ ಮೂಲಕ ಈ ಸಂಸ್ಥೆಯಲ್ಲಿ ಪ್ರತಿನಿಧಿಸಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಇನ್ ಯಾರ ಬಗ್ಗೆಯೂ ಅಲ್ಲ ದ ಗ್ರೇಟ್ ಖಲಿ ರವರ ಕುರಿತಂತೆ. ಈ ಮೂಲಕ ಅವರು 2006 ರಿಂದ 2014 ರವರೆಗೂ ಡಬ್ಲ್ಯೂಡಬ್ಲ್ಯೂಇ ನಲ್ಲಿ ಭಾಗವಹಿಸುವ ಮೂಲಕ ಈ ಸಂಸ್ಥೆಯ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ‌.

ಆದರೆ ದ ಗ್ರೇಟ್ ಖಲಿ ರವರ ಕಾಂಟ್ಯಾಕ್ಟ್ ಇದ್ದಿದ್ದು ಕೇವಲ 2014 ರ ವರೆಗೆ ಮಾತ್ರ ಅಂದರೆ ಒಟ್ಟು ಎಂಟು ವರ್ಷಗಳ ಕಾಲ ಡಬ್ಲ್ಯೂಡಬ್ಲ್ಯೂಇ ನಲ್ಲಿ ಇವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿ ಹೆಸರನ್ನು ಸಂಪಾದಿಸಿದ್ದಾರೆ. ಅವರ ಕುರಿತಂತೆ ಇನ್ನಷ್ಟು ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿನಿಂದಲೂ ಕೂಡ ಡಬ್ಲ್ಯೂಡಬ್ಲ್ಯೂಇ ಗೆ ಭಾರತದಲ್ಲಿ ಸೇರಿದಂತೆ ವಿಶ್ವಾದ್ಯಂತ ದೊಡ್ಡಮಟ್ಟದ ಪ್ರೇಕ್ಷಕರಿದ್ದಾರೆ.

ಈ ವ್ರೆಸ್ಲಿಂಗ್ ಕಾರ್ಯಕ್ರಮಕ್ಕೆ 2006 ರ ಏಪ್ರಿಲ್ ತಿಂಗಳಿನಲ್ಲಿ ದಿಲೀಪ್ ಸಿಂಗ್ ರಾಣಾ ದ ಗ್ರೇಟ್ ಖಲಿ ಎನ್ನುವ ಸ್ಟೇಜ್ ಹೆಸರಿನ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಈತ ಯಾರೆಂಬುದು ಆ ಕಾರ್ಯಕ್ರಮದ ವರೆಗೂ ಸೇರಿದಂತೆ ಭಾರತೀಯರಿಗೂ ಕೂಡ ಗೊತ್ತಿರಲಿಲ್ಲ. 7.1 ಅಡಿಗಿಂತಲೂ ಎತ್ತರದ ಹಾಗೂ 150 ಕೆಜಿ ಗಿಂತಲೂ ಹೆಚ್ಚು ತೂಕ ಇರುವ ಕಲಿಯುಗದ ಭೀಮ ಅಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಈತನ ಕುರಿತಂತೆ ಮಾತನಾಡುವ ಹಾಗೆ ಮಾಡುತ್ತಾರೆ. ಇನ್ನು ಇವರು ಮೊದಲಿನಿಂದಲೂ ಕೂಡ ಕಷ್ಟದ ಜೀವನದಿಂದಲೇ ಮೇಲೆ ಬಂದವರು. ಇದಕ್ಕೂ ಮೊದಲು ಅವರು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಿರುತ್ತಾರೆ.

ನಂತರ ಇವರು ವ್ರೆಸ್ಲಿಂಗ್ ಕುರಿತಂತೆ ಸಾಕಷ್ಟು ಆಸಕ್ತಿಯನ್ನು ಬೆಳೆಸಿಕೊಂಡು ಇದರಲ್ಲಿ ಕೂಡ ಪರಿಣಿತರಾಗಿ ನಂತರ ಡಬ್ಲ್ಯೂಡಬ್ಲ್ಯೂಇ ನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಡಬ್ಲ್ಯೂಡಬ್ಲ್ಯೂಈ ಗೆ ಬರುವ ಮುನ್ನವೇ ದಿ ಲಾಂಗೆಸ್ಟ್ ಯಾರ್ಡ್ ಎನ್ನುವ ಹಾಲಿವುಡ್ ಸಿನಿಮಾದಲ್ಲಿ ನಟಿಸಿ ಬಂದಿದ್ದರು. ಇದನ್ನು ನೋಡಿದ ಡಬ್ಲ್ಯೂಡಬ್ಲ್ಯು ಇ ನ ಪ್ರೆಸಿಡೆಂಟ್ ಆಗಿರುವ ಮೆಕ್ ಮ್ಯಾನ್ ರವರೆ ಖುದ್ದಾಗಿ ಖಲಿ ಅವರಿಗೆ ಕರೆ ಮಾಡಿ ಡಬ್ಲ್ಯೂಡಬ್ಲ್ಯೂ ಇ ಗೆ ಬರುವಂತೆ ಹೇಳುತ್ತಾರೆ.

ಡಬ್ಲ್ಯೂಡಬ್ಲ್ಯೂಇ ನಲ್ಲಿ ದ ಗ್ರೇಟ್ ಖಲಿ ಅವರು ಮೊದಲು ಕಾಣಿಸಿಕೊಂಡಿದ್ದು ಮಾರ್ಕ್ ಹೆನ್ರಿ ಹಾಗೂ ಅಂಡರ್ಟೇಕರ್ ನಡುವಿನ ಪಂದ್ಯದಲ್ಲಿ ಅವರು ಅನಾಮತ್ತಾಗಿ ಆಗಮಿಸಿ ಅಂಡರ್ ಟೇಕರ್ ಅವರನ್ನು ಉರುಳಿಸುತ್ತಾರೆ. ಇದಾದ ನಂತರ ಬರೋಬ್ಬರಿ ಎಂಟು ವರ್ಷಗಳ ಕಾಲ ಹಲವಾರು ಖ್ಯಾತ ಸ್ಟಾರ್ ವ್ರೆಸ್ಲರ್ ಗಳನ್ನು ಎದುರಿಸಿ ಕೆಲವೊಂದು ಪಂದ್ಯಗಳಲ್ಲಿ ಸೋತು ಕೆಲವೊಂದು ಪಂದ್ಯಗಳಲ್ಲಿ ಗೆದ್ದು ಸಾಕಷ್ಟು ಹೆಸರನ್ನು ಸಂಪಾದಿಸುತ್ತಾರೆ.

ಇನ್ನು ಕೊನೆಕೊನೆಯಲ್ಲಿ ಇವರನ್ನು ಸಂಸ್ಥೆ ಜೋಕರ್ ರೀತಿ ಮಾಡಿಕೊಂಡಿರುವುದಾಗಿ ಕೂಡ ಆಪಾದನೆ ಇದೆ. ಇನ್ನು ಇಷ್ಟು ಮಾತ್ರವಲ್ಲದೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದು ಸ್ಕ್ರಿಪ್ಟೆಡ್ ಕಾರ್ಯಕ್ರಮವಾಗಿದೆ. ಇಲ್ಲಿ ಹೊ’ಡೆದಾಡಿ ಕೊಳ್ಳುವುದು ನಿಜವೇ ಆಗಿದ್ದರೂ ಕೂಡ ಇದರ ಫಲಿತಾಂಶ ಮಾತ್ರ ಮೊದಲ ನಿರ್ಧಾರಿತವಾಗಿರುತ್ತದೆ. 2014 ರ ನವೆಂಬರ್ ತಿಂಗಳಿನಲ್ಲಿ ದ ಗ್ರೇಟ್ ಖಲಿ ರವರ ಕಾಂಟ್ಯಾಕ್ಟ್ ಮುಗಿಯುತ್ತದೆ ನಂತರ ಕೆಲವು ವರ್ಷಗಳ ನಂತರ ಮತ್ತೊಮ್ಮೆ ಕಂಬ್ಯಾಕ್ ಮಾಡಲು ಯತ್ನಿಸಿದರು ಕೂಡ ಖಲಿ ರವರಿಗೆ ಅದು ಸಾಧ್ಯವಾಗಲಿಲ್ಲ. ಡಬ್ಲ್ಯೂಡಬ್ಲ್ಯೂ ಇ ಕೊನೆಯ ಸಂದರ್ಭದಲ್ಲಿ ಅವರ ಜೊತೆಗೆ ಚೆನ್ನಾಗಿ ನಡೆದುಕೊಂಡಿಲ್ಲ ಎಂಬುದು ಕೂಡ ಕೆಲವರು ಹೇಳುತ್ತಾರೆ.

ಖಲಿಯವರು ಡಬ್ಲ್ಯೂಡಬ್ಲ್ಯೂಇ ನಿಂದ ಹೊರ ಬೀಳಲು ಕೆಲವು ಪ್ರಮುಖವಾದ ಕಾರಣಗಳು ಕೂಡ ಇವೆ. ಮೊದಲನೇದಾಗಿ ಇಲ್ಲಿರುವಂತಹ ಬಹುತೇಕರು ಸಾಕಷ್ಟು ಚುರುಕು ಪಟು ಗಳಾಗಿದ್ದರು. ಆದರೆ ಇವರ ಬಳಿ ಅಷ್ಟೊಂದು ಚುರುಕುತನ ಹಾಗೂ ವ್ರೆಸ್ಲಿಂಗ್ ಜ್ಞಾನ ಇರಲಿಲ್ಲ. ಹೀಗಾಗಿ ಇವರನ್ನು ಎಲ್ಲರೂ ಸುಲಭವಾಗಿ ಸೋಲಿಸುತ್ತಿದ್ದರು. ಎರಡನೆಯದಾಗಿ ಈ ಸಂಸ್ಥೆ ಲಾಭಕ್ಕಾಗಿ ಕೆಲಸ ಮಾಡುವುದು. ಮೊದಮೊದಲಿಗೆ ಖಲಿ ರವರು ಸಾಕಷ್ಟು ದೊಡ್ಡಮಟ್ಟದಲ್ಲಿ ಜನಪ್ರಿಯರಾಗಿದ್ದರು ಹೀಗಾಗಿ ಅವರ ಮೇಲೆ ಹಾಕಿರುವ ದುಡ್ಡು ಅದಕ್ಕೂ ದುಪ್ಪಟ್ಟಾಗಿ ಲಾಭ ರೂಪದಲ್ಲಿ ಬರುತ್ತಿತ್ತು. ಕ್ರಮೇಣವಾಗಿ ಖಲಿ ಅವರು ಸೋಲುತ್ತಾ ಬರುತ್ತಿದ್ದಂತೆ ಅವರಿಗೆ ಹಾಕಿದ್ದ ದುಡ್ಡಿಗಿಂತ ಕಡಿಮೆ ಹಣವೇ ಬರುತ್ತಿತ್ತು ಎಂಬುದನ್ನು ಕೂಡ ಇಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲದಕ್ಕಿಂತ ಪ್ರಮುಖವಾಗಿ ಇಲ್ಲಿ ಕೇವಲ ವ್ರೆಸ್ಲಿಂಗ್ ಮಾತ್ರವಲ್ಲದೆ ಪ್ರತಿಯೊಬ್ಬ ಪ್ರೇಕ್ಷಕರನ್ನು ಮನರಂಜಿಸುವ ಕಲೆಯನ್ನು ಕೂಡ ಕರಗತ ಮಾಡಿಕೊಳ್ಳಬೇಕಾಗಿರುತ್ತದೆ. ಅದಕ್ಕಿಂತ ಮುಖ್ಯವಾಗಿ ಖಲಿ ಹಲವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ ಹೀಗಾಗಿ ಅವರು ಪ್ರೇಕ್ಷಕರನ್ನು ಅದರಲ್ಲೂ ಅಮೆರಿಕನ್ನರನ್ನು ಹಿಡಿದಿಟ್ಟುಕೊಳ್ಳಲು ವಿಫಲರಾಗುತ್ತಾರೆ. ಇದಾದ ನಂತರ ಭಾರತಕ್ಕೆ ಬಂದ ಮೇಲೆ ಇವರು ಬಿಗ್ಬಾಸ್ ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕೂಡ ಒಂದಾದಮೇಲೊಂದರಂತೆ ಕಾಣಿಸಿಕೊಳ್ಳುತ್ತಾರೆ.

ಇನ್ನು ಸದ್ಯಕ್ಕೆ ಸಿಡಬ್ಲ್ಯುಇ ಎನ್ನುವ ಡಬ್ಲ್ಯೂಡಬ್ಲ್ಯೂ ಮಾದರಿಯ ಸಂಸ್ಥೆಯನ್ನು ಕೂಡ ಈಗಾಗಲೇ ಹುಟ್ಟುಹಾಕಿದ್ದು ಹಲವಾರು ಕುಸ್ತಿಪಟುಗಳನ್ನು ಇಲ್ಲಿ ತಯಾರು ಮಾಡುತ್ತಿದ್ದಾರೆ. ದೇಶದಾದ್ಯಂತ ಹಲವಾರು ಕುಸ್ತಿ ಸಂಸ್ಥೆಗಳಲ್ಲಿರುವ ಪಟುಗಳನ್ನು ಕೂಡ ಈ ಕುರಿತಂತೆ ಹುರಿದುಂಬಿಸುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಮತ್ತೊಮ್ಮೆ ಅವರು ಡಬ್ಲ್ಯೂಡಬ್ಲ್ಯೂಇ ನಲ್ಲಿ ಕಂಬ್ಯಾಕ್ ಮಾಡಲಿ ಎನ್ನುವ ಆಸೆ ಇಂದಿಗೂ ಕೂಡ ಅಗಮ್ಯವಾಗಿದೆ. ಇವರ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.