ರಜತ್ ಪಾಟೀದಾರ್ ರವರ ಬಗ್ಗೆ ಷಾಕಿಂಗ್ ವಿಚಾರ ತಿಳಿಸಿದ ರಣಜಿ ನಾಯಕ ಈಶ್ವರ್ ಪಾಂಡೆ. ವಿಷಯ ತಿಳಿದಾಗ ಭೇಷ್ ಅಂದಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸಿನಿಮಾ ಮತ್ತು ಕ್ರಿಕೆಟ್ ಎರಡು ಲೋಕಗಳಿಗೂ ಬಹಳಷ್ಟು ಸಾಮ್ಯತೆ ಇದೆ. ಇಲ್ಲಿ ದಿನ ಬೆಳಗಾಗುವುದರೊಳಗೆ ಹೀರೋ ಆಗಬಹುದು. ಅದೇ ರೀತಿ ಮೊನ್ನೆಯ ದಿನ ಹೀರೋ ಆಗಿದ್ದು ಆರ್ಸಿಬಿಯ ಗಂಡುಗಲಿ ರಜತ್ ಪಾಟೀದಾರ್. ತಮ್ಮ ಅದ್ಭುತ ಆಟದಿಂದ ಗಮನಸೆಳೆದ ಪಾಟೀದಾರ್, ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಶತಕ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಕಾರಣರಾದರು.
ಅದಕ್ಕೂ ಮುಂಚೆ ರಜತ್ ಪಾಟೀದಾರ್ ಐಪಿಎಲ್ ಹರಾಜಿನಲ್ಲಿ ಅನಸೋಲ್ಡ್ ಆಗಿದ್ದರು. ಆರ್ಸಿಬಿ ತಂಡದಲ್ಲಿದ್ದ ಆಟಗಾರ ಗಾಯಾಳುವಾದ ಕಾರಣ, ಅವರನ್ನು ರಿಪ್ಲೇಸ್ ಮಾಡಿದರು. ಮೊದಲೆರೆಡು ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೇ ನಂತರದ ಪಂದ್ಯಗಳಲ್ಲಿ ತಮ್ಮ ವೇಗದ ಆಟದಿಂದ ಮಿಂಚಿದ್ದರು. ನಂತರ ಮೊನ್ನೆ ನಡೆದ ಪಂದ್ಯದಲ್ಲಿ ಶತಕ ಸಿಡಿಸಿ ಆರ್ಸಿಬಿ ತಂಡವನ್ನು ಏಲಿಮಿನೇಟರ್ ಪಂದ್ಯದಿಂದ ಗೆಲ್ಲಿಸಿ ಕ್ವಾಲಿಫೈಯರ್ ಪಂದ್ಯಕ್ಕೆ ಹೋಗುವಂತೆ ಮಾಡಿದರು.

ರಣಜಿಯಲ್ಲಿ ಮಧ್ಯಪ್ರದೇಶ ತಂಡದ ಪರ ಕ್ರಿಕೆಟ್ ಆಡುವ ರಜತ್ ಪಾಟೀದಾರ್ ಬಗ್ಗೆ ಆ ತಂಡದ ನಾಯಕ ಈಶ್ವರ್ ಪಾಂಡೆ ಶಾಕಿಂಗ್ ವಿಚಾರವೊಂದನ್ನು ಬಾಯಿ ಬಿಟ್ಟಿದ್ದಾರೆ. ರಜತ್ ಪಾಟೀದಾರ್ ಒಬ್ಬ ಪ್ಯಾಶನ್ ಇರುವ ಕ್ರಿಕೆಟರ್. ಕ್ರಿಕೆಟ್ ಗಾಗಿ ಅವರು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ, ಮನೆಯವರನ್ನು ಎದುರು ಹಾಕಿಕೊಂಡಿದ್ದಾರೆ. ಅವರ ಕುಟುಂಬದ ವುಡ್ ವರ್ಕ್ ಕಂಪನಿಯಿದೆ. ಅವರ ಕುಟುಂಬದವರು ರಜತ್ ಪಾಟೀದಾರ್ ಗೆ ಆ ವೃತ್ತಿಯಲ್ಲೇ ಮುಂದುವರೆಯಲು ಸಲಹೆ ನೀಡಿದ್ದರು. ಆದರೇ ಕುಟುಂಬದ ಸಲಹೆ ತಿರಸ್ಕರಿಸಿದ ಪಾಟೀದಾರ್ ಕ್ರಿಕೆಟ್ ನ್ನು ತಮ್ಮ ವೃತ್ತಿಯಾಗಿ ತೆಗೆದುಕೊಂಡರು. ಅವರು ಅಂದು ತೆಗೆದುಕೊಂಡ ನಿರ್ಧಾರ ಇಂದು ಫಲಪ್ರದವಾಗಿದೆ. ಅವರ ಈ ಫಾರ್ಮ್ ಮುಂದುವರೆಯಲಿ. ಆದಷ್ಟು ಬೇಗ ಭಾರತ ತಂಡದ ಪರ ಅವರು ಆಡುವಂತಾಗಲಿ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.