ಡ್ಯಾನ್ಸಿಂಗ್ ಚಾಂಪಿಯನ್ ವೇದಿಕೆ ಮೇಲೆ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಮಾಡಿದ ಕೆಲಸ ನೋಡಿ ಕಣ್ಣೀರಿಟ್ಟ ಪ್ರೇಕ್ಷಕರು?? ಅಷ್ಟಕ್ಕೂ ಅದೊಂದು ಕೆಲಸ ಏನು ಗೊತ್ತೇ?

25

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮ ಈಗಾಗಲೇ ಫಿನಾಲೆ ಹಂತವನ್ನು ಪೂರ್ಣಗೊಳಿಸುವ ಮೂಲಕ ಸಮಾಪ್ತಿಗೊಂಡಿದೆ. ಕಲರ್ಸ್ ಕನ್ನಡ ವಾಹಿನಿ ಮೊದಲಿನಿಂದಲೂ ಕೂಡ ಗುಣಮಟ್ಟದ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವುದರಲ್ಲಿ ಸಿದ್ಧಹಸ್ತರು. ಈ ಬಾರಿ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಮೂಲಕ ಡ್ಯಾನ್ಸಿಂಗ್ ಅಭಿಮಾನಿಗಳು ಸೇರಿದಂತೆ ಕಿರುತೆರೆಯ ಅಭಿಮಾನಿಗಳ ಮನವನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇನ್ನು ಈಗಾಗಲೇ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಫಿನಾಲೆ ಮುಗಿದಿದ್ದು ಅನ್ಮೋಲ್ ಆದಿತ್ಯ ಜೋಡಿ ಈ ಕಾರ್ಯಕ್ರಮವನ್ನು ಗೆದ್ದು ಪ್ರಶಸ್ತಿಗೆ ಭಾಜನವಾಗಿದೆ. ನಿಮಗೆಲ್ಲರಿಗೂ ಈಗಾಗಲೇ ಗೊತ್ತಿರುವ ಹಾಗೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಚಿನ್ನದ ಪ್ರತಿಮೆಯನ್ನು ವಿಜೇತರಿಗೆ ಬಹುಮಾನವಾಗಿ ನೀಡಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಆಗಮಿಸಿದ್ದರು. ಮೊದಲಿಗೆ ವೇದಿಕೆಗೆ ಬಂದು ಪ್ರತಿಯೊಬ್ಬ ಸ್ಪರ್ಧಿಗೂ ಕೂಡ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸವನ್ನು ನೋಡಿ ಪ್ರೇಕ್ಷಕರು ಕಣ್ಣೀರು ಹಾಕಿದ್ದಾರೆ.

ಹೌದು ಗೆಳೆಯರೆ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ವೇದಿಕೆಯಲ್ಲಿ ಅಪ್ಪು ಅವರ ಡೈಲಾಗನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೇಳುವ ಮೂಲಕ ಪ್ರೇಕ್ಷಕರು ಭಾವುಕರಾಗಿ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರ ಚಿನ್ನದ ಪುತ್ಥಳಿಯನ್ನು ನೋಡಿ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾಗಿದ್ದಾರೆ. ಒಟ್ಟಾರೆಯಾಗಿ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ರವರ ಟ್ರೋಫಿ ಅನ್ನು ವಿಜೇತರಿಗೆ ನೀಡಿದ್ದು ಅರ್ಥಪೂರ್ಣವಾಗಿದ್ದು ಪ್ರತಿಯೊಬ್ಬ ಕನ್ನಡಿಗರು ಕೂಡ ಇದನ್ನು ಮೆಚ್ಚಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಪ್ಪು ಅವರ ಬಗ್ಗೆ ಮಾತನಾಡುತ್ತಿದ್ದಾಗ ಮೇಘನಾರಾಜ್ ರವರು ಕೂಡ ಭಾವುಕರಾಗಿ ಕಣ್ಣೀರು ಹಾಕಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.