ಕನ್ನಡದ ಪಟಾಕಿ ಪೋರಿ ರಕ್ಕಮ್ಮ ಹಾಡಿಗೆ ಕುಣಿದರೆ ಹೇಗಿರುತ್ತದೆ ಗೊತ್ತೇ?? ಜಾಕ್ವಿಲಿನ್ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿ ಆಶಿಕಾ ರಂಗನಾಥ್.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಸದ್ದು ಮಾಡುತ್ತಿದೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ರವರು ಸೊಂಟ ಬಳುಕಿಸಿ ರುವ ಈ ಹಾಡು ಈಗಾಗಲೇ ಪ್ರತಿಯೊಬ್ಬ ಪಡ್ಡೆಹೈಕಳ ಮನವನ್ನು ಗೆದ್ದಿದೆ ಎಂದು ಹೇಳಬಹುದಾಗಿದೆ.
ಹೌದು ಗೆಳೆಯರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಇದೇ ಜುಲೈ 28ರಂದು ಅದ್ದೂರಿಯಾಗಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರದ ಗಡಂಗ್ ರಕ್ಕಮ್ಮ ಹಾಡು ಈಗಾಗಲೇ ಪಂಚ ಭಾಷೆಗಳಲ್ಲಿ ಬಿಡುಗಡೆ ಯಾಗಿದ್ದು ದೊಡ್ಡಮಟ್ಟದಲ್ಲಿ ಪ್ರತಿಯೊಬ್ಬ ಸಿನಿಮಾ ಪ್ರೇಮಿಯನ್ನು ಕೂಡ ಆಕರ್ಷಿಸುತ್ತಿದೆ. ಇನ್ನು ಈ ಹಾಡಿಗೆ ಹಲವಾರು ಸೆಲೆಬ್ರಿಟಿಗಳು ಕೂಡ ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿರುವ ಆಶಿಕ ರಂಗನಾಥ್ ಅವರು ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಅವರ ಹೊಸ ಹೊಸ ವಿಡಿಯೋ ಹಾಗೂ ಫೋಟೋಗಳನ್ನು ಬಿಡುಗಡೆ ಆಗುವುದನ್ನೇ ಅವರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಷ್ಟರಮಟ್ಟಿಗೆ ಆಶಿಕಾ ರಂಗನಾಥ್ ರವರ ಡ್ಯಾನ್ಸಿಂಗ್ ಹಾಗೂ ಕ್ಯೂಟ್ ವೀಡಿಯೋಗಳಿಗಾಗಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇನ್ನು ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿಗಾಗಿ ಆಶಿಕಾ ರಂಗನಾಥ್ ರವರು ಕೂಡ ಹೆಜ್ಜೆ ಹಾಕಿದ್ದು ಈಗಾಗಲೇ ವಿಡಿಯೋವನ್ನು ಪೋಸ್ಟ್ ಮಾಡಿರುತ್ತಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ರವರ ರಕ್ಕಮ್ಮ ಹಾಡಿನ ವಿಡಿಯೋ ಸಕ್ಕತ್ ವೈರಲ್ ಆಗಿದೆ ಪ್ರತಿಯೊಬ್ಬರು ಕೂಡ ಈ ವಿಡಿಯೋವನ್ನು ಈಗಾಗಲೇ ಶೇರ್ ಮಾಡುತ್ತಿದ್ದಾರೆ. ನೀವು ಕೂಡ ಆಶಿಕ ರಂಗನಾಥ್ ರವರ ಈ ವಿಡಿಯೋವನ್ನು ನೋಡಬಹುದಾಗಿದ್ದು ತಪ್ಪದೇ ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.