ಐಪಿಎಲ್ ನಲ್ಲಿ ಮುಂಬೈ ಹೊರಬೀಳುತ್ತಿದ್ದಂತೆ ರೋಹಿತ್ ಶರ್ಮ ಎಲ್ಲಿಗೆ ಹೋಗಿದ್ದಾರೆ ಗೊತ್ತೇ?? ಅಭಿಮಾನಿಗಳು ಅಂತೂ ಫುಲ್ ಖುಷ್. ಯಾಕೆ ಗೊತ್ತೇ?

12

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗ ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮೆಟ್ ಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ ರವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಕಪ್ತಾನನಾಗಿ ಈ ಬಾರಿಯ ಐಪಿಎಲ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುವ ಮೂಲಕ ಕೊನೆಯ ಸ್ಥಾನದಲ್ಲಿ ಈ ಬಾರಿ ಐಪಿಎಲ್ ಅನ್ನು ಮುಗಿಸಿದ್ದಾರೆ.

ಕೇವಲ ಮುಂಬೈ ಇಂಡಿಯನ್ಸ್ ತಂಡದ ಪರ್ಫಾರ್ಮೆನ್ಸ್ ಮಾತ್ರವಲ್ಲದೆ ವೈಯಕ್ತಿಕವಾಗಿ ರೋಹಿತ್ ಶರ್ಮಾ ಅವರು ಕೂಡ ಅತ್ಯಂತ ಕಳಪೆ ಕ್ರಿಕೆಟ್ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಈ ಬಾರಿ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ರವರು 14 ಪಂದ್ಯಗಳಿಂದ ಗಳಿಸಿರುವುದು ಕೇವಲ 268 ರನ್ನುಗಳು ಮಾತ್ರ. ಇನ್ನು ರೋಹಿತ್ ಶರ್ಮಾ ರವರಿಗೆ ಜೂನ್ ನಿಂದ ಪ್ರಾರಂಭವಾಗುವ ಸೌತ್ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-ಟ್ವೆಂಟಿ ಸರಣಿಗೆ ಕೂಡ ವಿಶ್ರಾಂತಿಯನ್ನು ನೀಡಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ರವರು ನೇರವಾಗಿ ಜೂನ್ 15 ಅಥವಾ 16ರಂದು ಇಂಗ್ಲೆಂಡಿನಲ್ಲಿ ನಡೆಯಲಿರುವ ಏಕಮಾತ್ರ ಟೆಸ್ಟ್ ಪಂದ್ಯಕ್ಕೆ ನಾಯಕನಾಗಿ ಪ್ರಯಾಣವನ್ನು ಆರಂಭಿಸಲಿದ್ದಾರೆ. ಅಲ್ಲಿಯವರೆಗೆ ರೋಹಿತ್ ಶರ್ಮಾ ರವರಿಗೆ ವಿರಾಮ ಸಿಗಲಿದೆ.

ಕೇವಲ ರೋಹಿತ್ ಶರ್ಮಾ ಮಾತ್ರವಲ್ಲದೆ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ರವರಂತಹ ಅನುಭವ ಆಟಗಾರರಿಗೂ ಕೂಡ ಈ ಸರಣಿಯಿಂದ ವಿಶ್ರಾಂತಿ ದೊರಕಿದೆ. ಇನ್ನು ರೋಹಿತ್ ಶರ್ಮಾ ರವರು ಈ ವಿಶ್ರಾಂತಿಯ ಸಂದರ್ಭದಲ್ಲಿ ಸುಂದರವಾದ ಸ್ಥಳಕ್ಕೆ ತಮ್ಮ ಕುಟುಂಬದೊಂದಿಗೆ ತೆರಳಿದ್ದಾರೆ. ಹೌದು ಗೆಳೆಯರೇ ರೋಹಿತ್ ಶರ್ಮಾ ರವರು ತಮ್ಮ ಪತ್ನಿ ರಿತಿಕ ಸಾಜ್ದೆಹ್ ಹಾಗೂ ಮಗಳು ಸಮೈರಾ ಜೊತೆಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೂರುಜನ ಇರುವಂತಹ ಸುಂದರವಾದ ಫೋಟೋಗಳು ಈಗಾಗಲೇ ವೈರಲ್ ಆಗಲು ಪ್ರಾರಂಭಿಸಿವೆ. ಒಟ್ಟಾರೆಯಾಗಿ ಬಹು ಸಮಯಗಳ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ತಮ್ಮ ಕುಟುಂಬದ ಜೊತೆಗೆ ವಿರಾಮದಲ್ಲಿ ಇದ್ದಾರೆ. ನೀವು ಕೂಡ ಈ ಫೋಟೋಗಳನ್ನು ನೋಡಬಹುದಾಗಿದ್ದು ಈ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.