ಅಂದು ಕನ್ನಡ ಸರಿಯಾಗಿ ಬರದೇ ಇದ್ದು, ಇಂದು ರಾಜ್ಯದ ಟಾಪ್ ನಿರೂಪಕಿಯಾಗಿರುವ ಅನುಶ್ರೀ ರವರು ನಿಜಕ್ಕೂ ಯಾರು ಗೊತ್ತೇ?? ಟಾಪ್ ಆಗಿದ್ದು ಹೇಗೆ ಗೊತ್ತೇ?

18

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಲೋಕದಲ್ಲಿ ನಿರೂಪಕರ ಸಾಲಿನಲ್ಲಿ ಸ್ಟಾರ್ ಗಿರಿಯನ್ನು ತಂದವರಲ್ಲಿ ಪ್ರಮುಖರು ಅನುಶ್ರೀ ಅವರು ಎಂದು ಹೇಳಬಹುದಾಗಿದೆ. ಮಂಗಳೂರಿನ ರಾಗಿದ್ದರು ಕೂಡ ಪರ್ಫೆಕ್ಟ್ ಕನ್ನಡ ಮಾತನಾಡುವ ಮೂಲಕ ಕಿರುತೆರೆ ಲೋಕದಲ್ಲಿ ಸಂಚಲನವನ್ನೇ ಸೃಷ್ಠಿಸಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಇರಲಿ ಅನುಶ್ರೀ ಅವರು ಇದ್ದಾರೆ ಎಂದರೆ ಖಂಡಿತವಾಗಿ ಅದು ಪ್ರತಿಯೊಬ್ಬ ಪ್ರೇಕ್ಷಕರಿಗೂ ಕೂಡ ಇಷ್ಟ ಆಗುತ್ತದೆ. ಕನ್ನಡ ಕಿರುತೆರೆ ಲೋಕದ ಸೂಪರ್ ಸ್ಟಾರ್ ಎಂದು ಹೇಳಿದರೆ ತಪ್ಪಾಗಲಾರದು.

ನಿರೂಪಣೆಯ ಮೂಲಕ ಅನುಶ್ರೀ ಅವರು ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗದ ಎಷ್ಟೇ ದೊಡ್ಡ ಕಾರ್ಯಕ್ರಮ ಇದ್ದರೂ ಕೂಡ ಅನುಶ್ರೀ ಅವರು ಅಲ್ಲಿ ನಿರೂಪಕಿಯಾಗಿ ಇರಲೇಬೇಕು ಎನ್ನುವುದು ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರ ಕೋರಿಕೆ ಆಗಿರುತ್ತದೆ. ಅಷ್ಟರ ಮಟ್ಟಿಗೆ ನಿರೂಪಣೆ ಚಿತ್ರದಲ್ಲಿ ಅವರು ಛಾಪನ್ನು ಮೂಡಿಸಿದ್ದಾರೆ.

ಇಂದು ಕನ್ನಡ ಚಿತ್ರರಂಗದಲ್ಲಿ ನಟಿ ನಿರೂಪಕಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿರುವ ಅನುಶ್ರೀ ಅವರ ಹಿನ್ನೆಲೆ ಹಾಗೂ ಸಾಧನೆಗಳ ಕುರಿತಂತೆ ನಿಮಗೆ ಗೊತ್ತಿರದ ವಿಚಾರಗಳನ್ನು ಇಂದಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿದ್ದೇವೆ. ಮಂಗಳೂರಿನ ಸುರತ್ಕಲ್ ಎನ್ನುವಲ್ಲಿ ಜನಿಸಿದ ಅನುಶ್ರೀ ಅವರು ತುಳು ಮಾತನಾಡುವ ಕುಟುಂಬದವರು. ಇವರಿಗೆ ಅಭಿಜಿತ್ ಎನ್ನುವ ತಮ್ಮ ಕೂಡ ಇದ್ದಾನೆ. ಚಿಕ್ಕ ವಯಸ್ಸಿನಲ್ಲಿ ತಂದೆ ಬಿಟ್ಟು ಹೋಗಿದ್ದರಿಂದ ತಾಯಿಯೇ ಇವರನ್ನು ಸಾಕಿದ್ದರು. ಬಾಲ್ಯದಿಂದಲೂ ಕೂಡ ಇವರು ಕಷ್ಟವನ್ನು ಅನುಭವಿಸಿಕೊಂಡು ಬಂದವರು. ಓದುತ್ತಿರುವಾಗಲೇ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುವುದು ಹಾಗೂ ಅಕ್ಕ ಪಕ್ಕದ ಮನೆಯಲ್ಲಿ ಕೆಲಸ ಮಾಡುವ ಮೂಲಕ ಕುಟುಂಬ ನಿರ್ವಹಣೆಗೆ ಕೂಡ ಅನುಶ್ರೀ ಅವರು ಅಮ್ಮನಿಗೆ ಸಹಾಯ ಮಾಡುತ್ತಾರೆ.

ಹೈಸ್ಕೂಲ್ ಬರುವಾಗ ಯಾವುದಾದರೂ ಕೆಲಸವನ್ನು ಕುಟುಂಬ ನಿರ್ವಹಣೆಗೆ ಅನುಶ್ರೀ ಅವರು ಮಾಡಲೇಬೇಕಾಗಿರುವ ಪರಿಸ್ಥಿತಿ ಎದುರಾಗುತ್ತದೆ. ಆಗ ಸ್ಥಳೀಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರೊಂದಿಗೆ ಅಪಾಯಿಂಟ್ಮೆಂಟ್ ಕೊಡಿಸುವ ಕೆಲಸವನ್ನು ಪಡೆಯುತ್ತಾರೆ. ಮೊದಲಿನಿಂದಲೂ ಕೂಡ ಹರಳು ಹುರಿದಂತೆ ಮಾತನಾಡುವ ಅನುಶ್ರೀ ಅವರಿಗೆ ಪ್ರತಿಯೊಬ್ಬರು ಕೂಡ ಯಾಕೆ ನೀನು ಟಿವಿ ಕಾರ್ಯಕ್ರಮಗಳಲ್ಲಿ ಮಾತನಾಡಬಾರದು ಎನ್ನುವುದಾಗಿ ಸಲಹೆ ನೀಡುತ್ತಾರೆ.

ಅನುಶ್ರೀ ಅವರು ಕೂಡ ಈ ಕುರಿತಂತೆ ಸಾಕಷ್ಟು ಗಂಭೀರವಾಗಿ ಯೋಚಿಸುತ್ತಾರೆ. ಮೊದಲಿಗೆ ಲೋಕಲ್ ಚಾನೆಲ್ ಆಗಿದ್ದ ನಮ್ಮ ಟಿವಿ ಎನ್ನುವ ಚಾನೆಲ್ ನಡೆಸಿದ ಅಡಿಷನಲ್ಲಿ ಭಾಗವಹಿಸಿ ನಿರೂಪಕರಾಗಿ ಆಯ್ಕೆಯಾಗುತ್ತಾರೆ. ಅವರು 3 ಎಪಿಸೋಡ್ ಗಳ ಅಂತ್ಯಾಕ್ಷರಿ ಇಲ್ವಾ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯನಿರ್ವಹಿಸುವಂತೆ ಅವಕಾಶ ನೀಡುತ್ತಾರೆ ಆಗಲೂ ಕೂಡ ಅವರಿಗೆ ಈ ಕರಿಯರ್ ನಲ್ಲಿ ಅಷ್ಟೊಂದು ಸ್ಕೋಪ್ ಇದೆ ಎಂಬ ಭಾವನೆ ಬಂದಿರಲಿಲ್ಲ.

ಆದರೆ ಇಲ್ಲಿ ಮೊದಲೇ ಯಶಸ್ಸನ್ನು ಸಾಧಿಸಿ ನಂತರ ಬೆಂಗಳೂರಿನ ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡುವಂತಹ ಅವಕಾಶಗಳು ಕಾಣಸಿಗುತ್ತದೆ. ಬೆಂಗಳೂರಿಗೆ ಹೋದರೆ ಚೆನ್ನಾಗಿ ದುಡಿಯಬಹುದು ಹಾಗೂ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎನ್ನುವ ಕನಸಿನೊಂದಿಗೆ ಬೆಂಗಳೂರಿಗೆ ಪ್ರಯಾಣ ಮಾಡಿದ ಅನುಶ್ರೀ ಅವರಿಗೆ ಪ್ರಾರಂಭದಲ್ಲಿಯೇ ಕಷ್ಟದ ಸರಮಾಲೆ ಸಿಕ್ಕಿತು. ಮೊದಲನೇದಾಗಿ ಮಂಗಳೂರು ಕನ್ನಡ ಹಾಗೂ ಬೆಂಗಳೂರು ಕನ್ನಡದ ನಡುವಿನ ದೊಡ್ಡ ಮಟ್ಟದ ವ್ಯತ್ಯಾಸ ಇಲ್ಲಿ ಅವರಿಗೆ ಕೆಲಸದಲ್ಲಿ ಸಾಕಷ್ಟು ಅಡೆತಡೆಗಳನ್ನು ಉಂಟುಮಾಡುತ್ತದೆ.

ವಾಹಿನಿಯವರು ಬರೋಬ್ಬರಿ ಎರಡೂವರೆ ತಿಂಗಳುಗಳ ಕಾಲ ಅನುಶ್ರಿ ಅವರಿಗೆ ಅವಕಾಶವನ್ನು ನೀಡುತ್ತಾರೆ ಆದರೂ ಕೂಡ ಅನುಶ್ರೀ ಅವರಿಗೆ ಇಲ್ಲಿನ ಕನ್ನಡದ ಮಾತನಾಡುವ ಧಾಟಿ ರೂಡಿ ಆಗಿರಲಿಲ್ಲ. ಕೊನೆಗೆ ವಾಹಿನಿಯ ಮಾಲೀಕರಿಗೆ ರಿಕ್ವೆಸ್ಟ್ ಮಾಡಿಕೊಳ್ಳುವ ಅನುಶ್ರಿ ಅವರು ಒಂದೇ ತಿಂಗಳಿನಲ್ಲಿ ಬೆಂಗಳೂರಿನ ಕನ್ನಡವನ್ನು ಕರಗತ ಮಾಡಿಕೊಳ್ಳುತ್ತೇನೆ ಎಂಬುದಾಗಿ ಮಾತು ನೀಡುತ್ತಾರೆ. ಇಷ್ಟೆಲ್ಲ ಕಷ್ಟ ಅವಮಾನಗಳು ಇದ್ದರೂ ಕೂಡ ಅನುಶ್ರೀ ಅವರಿಗೆ ತಮ್ಮ ಕುಟುಂಬದ ಏಳ್ಗತಿಯೇ ಪ್ರಮುಖ ಸ್ಪೂರ್ತಿಯಾಗಿತ್ತು.

ಪ್ರತಿದಿನ ಇದ್ದರೆ ಸಾಕು ಹಲವಾರು ಅಂಗಡಿ-ಮುಂಗಟ್ಟುಗಳ ವ್ಯಾಪಾರಿಗಳೊಂದಿಗೆ ಬೆಂಗಳೂರು ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಮಾಡಿ ಒಂದೇ ತಿಂಗಳಲ್ಲಿ ಬೆಂಗಳೂರು ಕನ್ನಡವನ್ನು ಕಲಿತುಕೊಳ್ಳುತ್ತಾರೆ. ನಂತರ ಅವರಿಗೆ ಮೊದಲು ಸಿಗುವ ಕೆಲಸವೇ ಈ ಟಿವಿ ವಾಹಿನಿಯ ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮದ ನಿರೂಪಕಿಯ ಕೆಲಸ. ಇದರಲ್ಲಿ ಅವರು ಅದ್ವಿತೀಯ ಯಶಸ್ಸನ್ನು ಕಾಣುತ್ತಾರೆ. ಇದಾದ ನಂತರ ಇನ್ನೂ ಹಲವಾರು ಸಣ್ಣಪುಟ್ಟ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ ಆದರೆ ಅವರಿಗೆ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ನಿರೂಪಕಿಯ ಕೆಲಸ.

ಜೀ ಕನ್ನಡ ಕಾರ್ಯಕ್ರಮದ ಬಹುತೇಕ ಎಲ್ಲಾ ಕಾರ್ಯಕ್ರಮಗಳ ನಿರೂಪಕಿಯಾಗಿ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಾರೆ ಇದು ಅವರ ಜೀವನವನ್ನೇ ಬದಲಾಯಿಸಿದ ವಾಹಿನಿ ಎಂದರೆ ತಪ್ಪಾಗಲಾರದು. ಪ್ರತಿಯೊಂದು ಸಿನಿಮಾ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರೇ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಕಾಲಕ್ಕೆ ಪ್ರತಿದಿನ 250 ರುಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದ ಅನುಶ್ರೀ ಅವರ ಇಂದು ಒಂದು ಎಪಿಸೋಡ್ ಗೆ ಎರಡರಿಂದ ಮೂರು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಇದು ಅವರ ಕಷ್ಟದಿಂದ ಗೆದ್ದುಬಂದ ಸಾಧನೆಯ ಹಾದಿ. ಅನುಶ್ರೀ ಅವರು ಇದುವರೆಗೂ ನಿರೂಪಕಿಯಾಗಿ ಹಾಗೂ ನಾಯಕ ನಟಿಯಾಗಿ ಮತ್ತು ಡಬ್ಬಿಂಗ್ ಆರ್ಟಿಸ್ಟ್ ಆಗಿ ಹಲವಾರು ಪ್ರಶಸ್ತಿ ಬಿರುದುಬಾವಲಿಗಳನ್ನು ಕೂಡ ಗೆದ್ದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಕುರಿತಂತೆ ಸಾಕಷ್ಟು ನೆಗೆಟಿವ್ ವಿಚಾರಗಳು ಕೂಡ ಸುದ್ದಿಮಾಧ್ಯಮಗಳಲ್ಲಿ ಕಂಡು ಬಂದಿದ್ದರು ಕೂಡ ಅವರು ಯಾವುದಕ್ಕೂ ಎದೆಗುಂದದೆ ನುಗ್ಗಿ ನಡೆ ಮುಂದೆ ಎನ್ನುವ ಮನೋಭಾವನೆಯ ಮೂಲಕ ಪ್ರತಿಯೊಬ್ಬ ಯುವಪ್ರತಿಭೆಗಳ ಸ್ಪೂರ್ತಿಯಾಗಿ ಕಾಣುತ್ತಾರೆ. ನಿರೂಪಕಿ ಅನುಶ್ರೀ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.