ಅಮ್ಮನ ಜೊತೆ ಮಸ್ತ್ ಆಟ ಆಡುತ್ತಿರುವ ಕರುನಾಡಿನ ಕಿರಿಯ ದೊರೆ. ಹೇಗಿದೆ ಗೊತ್ತೇ ವಿಡಿಯೋ?? ಅಭಿಮಾನಿಗಳು ಅಂತೂ ಫುಲ್ ಖುಷ್.

32

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರುವ ಸ್ಟಾರ್ ಕಿಡ್ ಎಂದರೆ ಅದು ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ ಎಂದು ಹೇಳಿದರೆ ನಿಜಕ್ಕೂ ತಪ್ಪಾಗಲಾರದು. ಪ್ರತಿಯೊಬ್ಬರ ನೆಚ್ಚಿನ ಮಗು ವಾಗಿದ್ದಾನೆ ಜೂನಿಯರ್ ಚಿರು ಸರ್ಜಾ. ಹೌದು ಗೆಳೆಯರೆ ರಾಯನ್ ರಾಜ್ ತಾಯಿಯ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವ ಫೋಟೋ ಹಾಗೂ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗುತ್ತಲೇ ಇರುತ್ತದೆ.

ಜೂನಿಯರ್ ಚಿರು ಸರ್ಜಾ ರವರೊಂದಿಗೆ ಮೇಘನಾ ರಾಜ್ ಅವರನ್ನು ನೋಡಿದಾಗಲೆಲ್ಲಾ ಅಭಿಮಾನಿಗಳು ಖುಷಿಯಾಗುತ್ತಾರೆ. ಅದು ಚಿಕ್ಕವಯಸ್ಸಿನಲ್ಲಿಯೇ ಮೇಘನಾ ರಾಜ್ ರವರು ಚಿರು ಸರ್ಜಾ ರವರಿಂದ ದೂರ ಆದನಂತರ ಪ್ರತಿಯೊಬ್ಬರು ಕೂಡ ಮೇಘನಾ ಜೀವನದಲ್ಲಿ ಸಂತೋಷವಾಗಿರಲಿ ಎಂಬುದಾಗಿ ಎಲ್ಲರೂ ಹಾರೈಸುತ್ತಿದ್ದರು. ಆದರೆ ಗಂಡನನ್ನು ಕಳೆದುಕೊಂಡಿದ್ದಾಳೆ ಮೇಘನಾ ರವರಿಗೆ ಯಾವ ವಿಚಾರ ದಲ್ಲಿಯೂ ಕೂಡ ಸಂತೋಷ ಕಾಣುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಅವರ ಜೀವನಕ್ಕೆ ಸಂತೋಷದ ಚಿಲುಮೆಯಾಗಿ ಬಂದಿದ್ದೆ ಜೂನಿಯರ್ ಚಿರು ಸರ್ಜಾ.

ತಮ್ಮ ಮಗನಿಗಾಗಿ ಆದರೂ ಸಂತೋಷವಾಗಿರಬೇಕು ಮತ್ತೆ ಸಿನಿಮಾಗಳಿಗೆ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಮತ್ತೆ ಈಗ ಮೇಘನಾ ರವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನೀನು ಇತ್ತೀಚಿಗೆ ಮೇಘನರಾಜ್ ತಮ್ಮ ಮಗ ಜೂನಿಯರ್ ಚಿರು ಸರ್ಜಾ ರವರೊಂದಿಗೆ ಆಟವಾಡುತ್ತಿರುವ ಸಂತೋಷದ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿವೆ. ನಿಜಕ್ಕೂ ಕೂಡ ಈ ರೀತಿಯ ವಿಡಿಯೋಗಳು ಕನ್ನಡಿಗರಲ್ಲಿ ಸಾಕಷ್ಟು ಸಮಾಧಾನದ ಮನೋಭಾವವನ್ನು ಉಂಟುಮಾಡುತ್ತಿವೆ. ನೀವು ಕೂಡ ಜೂನಿಯರ್ ಚಿರು ಸರ್ಜಾ ಹಾಗೂ ಮೇಘನಾರಾಜ್ ರವರು ಸಂತೋಷದಿಂದ ಆಟವಾಡುತ್ತಿರುವ ಕ್ಯೂಟ್ ವಿಡಿಯೋಗಳನ್ನು ನೋಡಬಹುದಾಗಿದೆ. ವಿಡಿಯೋ ನೋಡಿದ ನಂತರ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯಬೇಡಿ.