ಕ್ರಿಕೆಟಿಗ ಶಿಖರ್ ಧವನ್ ರವರಿಗೆ ಹಿಗ್ಗಾಮುಗ್ಗಾ ಥಳಿಸಿದ ತಂದೆ. ಕಾರಣವೇನಂತೆ ಗೊತ್ತೇ?? ಮಸ್ತ್ ಮಜಾ ಕೊಡುವ ವಿಡಿಯೋ ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಶಿಖರ್ ಧವನ್ ರವರು ಭಾರತೀಯ ಕ್ರಿಕೆಟ್ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಅದರಲ್ಲೂ ಐಸಿಸಿ ಆಫೀಷಿಯಲ್ ಟೂರ್ನಮೆಂಟ್ ಗಳಲ್ಲಿ ಶಿಖರ್ ಧವನ್ ಅವರವರ ಹಾಗೆ ಬೀಸುವ ಮತ್ತೊಬ್ಬ ಕ್ರಿಕೆಟಿಗ ಈಗ ಭಾರತ ತಂಡದಲ್ಲಿ ಇಲ್ಲ ಎಂದರೆ ತಪ್ಪಾಗಲಾರದು. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಶಿಖರ್ ಧವನ್ ಅವರು ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ. ಹೌದು ಗೆಳೆಯರೇ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಶಿಖರ್ ಧವನ್ ರವರು 14 ಪಂದ್ಯಗಳಿಂದ ಬರೋಬ್ಬರಿ 460 ರನ್ನುಗಳನ್ನು ಬಾರಿಸಿದ್ದಾರೆ. ಪಂಜಾಬ್ ತಂಡಕ್ಕೆ ಕೂಡ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಅವಕಾಶವಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಲೀಗ್ ಹಂತದಲ್ಲಿ ಕಳಪೆ ಪ್ರದರ್ಶನವನ್ನು ನೀಡುವ ಮೂಲಕ ಈ ಅವಕಾಶವನ್ನು ಪಂಜಾಬ್ ಕಿಂಗ್ಸ್ ತಂಡ ಕಳೆದುಕೊಂಡಿತ್ತು ಎನ್ನಬಹುದಾಗಿದೆ. ಆದರೆ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ ಕಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಮೂಲಕ ಈ ಟೂರ್ನಮೆಂಟನ್ನು ಮುಗಿಸಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿ ಇದ್ದಂತಹ ಶಿಖರ್ ಧವನ್ ರವರು ಈ ಬಾರಿ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಕನಸನ್ನು ಕಳೆದುಕೊಂಡಿದ್ದಾರೆ. ಇನ್ನು ಈ ಬಾರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕೂಡ ಆಯ್ಕೆ ಆಗುವಂತಹ ಅವಕಾಶ ಶಿಖರ್ ಧವನ್ ಅವರಿಗೆ ಇತ್ತು. ಯಾಕೆಂದರೆ ಅವರು ಈ ಬಾರಿಯ ಟೂರ್ನಮೆಂಟಿನಲ್ಲಿ 460 ರನ್ನುಗಳನ್ನು ಬಾರಿಸಿದ್ದರೆ ಹೀಗಾಗಿ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೆ ಆಯ್ಕೆ ಆಗುತ್ತಾರೆ ಎಂಬುದಾಗಿ ಅಂದುಕೊಂಡಿದ್ದರು.
ಆದರೆ ಸೌತ್ ಆಫ್ರಿಕಾ ತಂಡದ ವಿರುದ್ಧ 5 ಟಿ ಟ್ವೆಂಟಿ ಪಂದ್ಯಗಳ ಸರಣಿಗೆ ಶಿಖರ್ ಧವನ್ ಅವರು ಆಯ್ಕೆ ಆಗಿಲ್ಲ. ಪಂಜಾಬ್ ಕಿಂಗ್ಸ್ ತಂಡ ಪ್ಲೇಆಫ್ ಗೆ ತೇರ್ಗಡೆಯಾಗಲು ವಿಫಲವಾದ ಬೆನ್ನೆಲ್ಲೆ ಶಿಖರ್ ಧವನ್ ಅವರು ತಮ್ಮ ತಂದೆಯವರಿಂದ ಥಳಿತಕ್ಕೆ ಒಳಗಾಗಿದ್ದಾರೆ. ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇನಪ್ಪಾ ಸ್ಟಾರ್ ಕ್ರಿಕೆಟಿಗ ಹಾಗೂ ಸೆಲೆಬ್ರಿಟಿ ಒಬ್ಬ ತಂದೆಯಿಂದ ಥಳಿತಕ್ಕೆ ಒಳಗಾಗುವುದು ಅಂದರೆ ಏನು ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಇದು ಕೇವಲ ಕಾಮಿಡಿ ವಿಡಿಯೋ ಅಷ್ಟೇ ಹೌದು ಶಿಖರ್ ಧವನ್ ಅವರು ಆಗಾಗ ಇನ್ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ ಇದು ಕೂಡ ಅಂಥದ್ದೇ ಒಂದು ಕಾಮಿಡಿ ವಿಡಿಯೋ ಆಗಿದೆ. ಈ ವಿಡಿಯೋವನ್ನು ನೋಡಿರುವ ಪ್ರೇಕ್ಷಕರು ನೀವಿಬ್ಬರೂ ಬಾಲಿವುಡ್ನಲ್ಲಿ ಸಿನಿಮಾದಲ್ಲಿ ನಟನೆ ಮಾಡುವುದು ಉತ್ತಮ ಎಂಬುದಾಗಿ ಹಾಸ್ಯಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.