ಕೊನೆಗೂ ಜೆಕೆ ರವರಿಗೆ ಕೂಡಿ ಬಂತು ಕಂಕಣ ಭಾಗ್ಯ. ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತೇ?? ಹೇಗಿದೆ ಜೋಡಿ ಗೊತ್ತೇ??

106

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಟ ಜೆಕೆ ಅವರ ಕುರಿತಂತೆ ತಿಳಿದೇ ಇದೆ. ಹೌದು ಗೆಳೆಯರೇ ಜಯರಾಮ್ ಕಾರ್ತಿಕ್ ರವರನ್ನು ಎಲ್ಲರೂ ಪ್ರೀತಿಯಿಂದ ಜೆಕೆ ಎಂಬುದಾಗಿ ಕರೆಯುತ್ತಾರೆ. ಜೆಕೆ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಹಾಗೂ ಮನೋರಂಜನೆ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಇದಕ್ಕೂ ಮುನ್ನ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೆಂಪೇಗೌಡ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಕ್ಷೇತ್ರದ ಸೂಪರ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾರೆ.

ಈ ಧಾರವಾಹಿಯಲ್ಲಿ ನಟಿ ಮಯೂರಿ ರವರು ಕೂಡ ಜೆಕೆ ರವರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡದ ಹಲವಾರು ಸಿನಿಮಾಗಳಲ್ಲಿ ಕೂಡ ಜೆಕೆ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಾತ್ರವಲ್ಲದೆ ಹಿಂದಿ ಧಾರಾವಾಹಿಗಳಲ್ಲಿ ಕೂಡ ನಟಿಸುವ ಮೂಲಕ ಹಿಂದಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಗೆಳೆಯರೇ ಹಿಂದಿ ರಾಮಾಯಣ ಧಾರವಾಹಿಯಲ್ಲಿ ಪ್ರಚಂಡ ರಾವಣ ಪಾತ್ರದಲ್ಲಿ ಜೆಕೆ ಅಬ್ಬರಿಸಿದ್ದಾರೆ. ಪುಷ್ಪ ಐ ಹೇಟ್ ಟಿಯರ್ಸ್ ಎನ್ನುವ ಹಿಂದಿ ಸಿನಿಮಾದಲ್ಲಿ ಕೂಡ ಜೆಕೆ ಇತ್ತೀಚಿಗೆ ನಟಿಸುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ ಎನ್ನಬಹುದಾಗಿದೆ.

ಇನ್ನು ಹಲವಾರು ಸಮಯಗಳಿಂದ ಜೆಕೆ ಯಾವಾಗ ಮದುವೆಯಾಗುತ್ತಾರೆ ಎನ್ನುವುದಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದರು. ಈಗ ಇದಕ್ಕೆ ಕೊನೆಗೂ ಕೂಡ ಉತ್ತರ ಸಿಕ್ಕಂತಾಗಿದೆ. ಹೌದು ಗೆಳೆಯರೆ ಖುದ್ದಾಗಿ ಜೆಕೆ ರವರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹುಡುಗಿಯ ಜೊತೆಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡು ನಿನ್ನನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ ಎನ್ನುವ ಕ್ಯಾಪ್ಟನ್ ಅನ್ನು ಬರೆದುಕೊಂಡಿದ್ದಾರೆ. ಇನ್ನು ಈ ಹುಡುಗಿ ಹೆಸರು ಅಪರ್ಣ ಸಮಂತ ಎನ್ನುವುದಾಗಿ ಇವರು ಹಲವಾರು ಬಾರಿ ಜೆಕೆ ರವರ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಪ್ರೀತಿಯನ್ನು ಜಗಜ್ಜಾಹೀರು ಮಾಡಿರುವ ಜೆಕೆ ಅತಿಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಮದುವೆ ಯಾವಾಗ ಎನ್ನುವುದು ಇನ್ನೂ ಕೂಡ ತಿಳಿದುಬಂದಿಲ್ಲ.