ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹೊಸ ಹೈಡ್ರಾಮಾ ಆರಂಭ ಮಾಡಿದ ಮದುವೆ ಹೆಣ್ಣು. ಮದುವೆಯಲ್ಲಿ ಬಾರಿ ಗಲಾಟೆ. ಅಷ್ಟಕ್ಕೂ ನಡೆದದ್ದು ಏನು ಗೊತ್ತೇ??

15

ನಮಸ್ಕಾರ ಸ್ನೇಹಿತರೇ ಪ್ರೇಮಿಗಳು ಧೈರ್ಯ ತೋರಿಸಿ ಮದುವೆ ಸಂದರ್ಭದಲ್ಲಿ ಕಿರಿಕ್ ಮಾಡುವುದನ್ನು ನಾವು ಮೊದಲು ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದು ಆದರೆ ಇದು ನಿಜ ಜೀವನದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಇಂದಿನ ವಿಚಾರ ನಾವು ಹೇಳಲು ಹೊರಟಿರುವುದು ಬೇರೆ ಯಾವುದೇ ದೇಶ ಅಥವಾ ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮದೇ ಮೈಸೂರಿನಲ್ಲಿ ನಡೆದಿರುವ ಘಟನೆಯನ್ನು ಹೇಳುತ್ತಿದ್ದೇವೆ. ಹೌದು ಗೆಳೆಯರೇ ಮೈಸೂರಿನಲ್ಲಿ ನಡೆದಿರುವಂತಹ ಈ ಘಟನೆ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇತ್ತೀಚೆಗಷ್ಟೆ ನಡೆದಿರುವ ಘಟನೆ ಇದಾಗಿದೆ. ಹೌದು ಗೆಳೆಯರೇ ಸುಣ್ಣದಕೇರಿಯ ಯುವತಿ ಜೊತೆಗೆ ಎಚ್ ಡಿ ಕೋಟೆಯ ಹುಡುಗನ ಮದುವೆ ನಡೆಯಬೇಕಾಗಿತ್ತು.

ಈ ಮೊದಲೇ ಈ ಹುಡುಗಿ ಬೇರೆ ಹುಡುಗನ ಜೊತೆಗೆ ಪ್ರೀತಿಸುತ್ತಿದ್ದಾಳೆ ಎಂಬುದು ಗೊತ್ತಿದ್ದರೂ ಕೂಡ ಪೋಷಕರು ಒತ್ತಾಯ ಮಾಡಿ ಈ ಮದುವೆಗೆ ಆಕೆಯನ್ನು ಒಪ್ಪಿಸಿದ್ದರು. ಆಕಡೆ ಮದುವೆ ಆಗುವ ಹುಡುಗನಿಗೂ ಕೂಡ ಈ ಹುಡುಗಿಯನ್ನು ಪ್ರೀತಿಸುವ ಹುಡುಗ ಮೆಸೇಜ್ ಮಾಡಿ ನಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂಬ ವಿಚಾರವನ್ನು ತಿಳಿಸಿದ್ದರು ಕೂಡ ಮದುವೆ ಗಂಡು ಯಾವುದೇ ವಿಚಾರವನ್ನು ತಲೆಕೆಡಿಸಿಕೊಳ್ಳದೆ ಮದುವೆಗೆ ಸಿದ್ಧನಾಗಿ ಬಂದು ಕಲ್ಯಾಣಮಂಟಪದಲ್ಲಿ ಕುಳಿತುಕೊಂಡಿದ್ದ. ಎಲ್ಲ ಮದುವೆ ವಿಧಿ ವಿಧಾನಗಳು ಸಾಂಗವಾಗಿ ನೆರವೇರುತ್ತಿದೆ ಸಂದರ್ಭದಲ್ಲಿ ಹುಡುಗಿ ಕುಸಿದುಬಿದ್ದು ಬಿಡುತ್ತಾಳೆ. ಅದಾಗಲೇ ಎರಡು ಕಡೆಯಿಂದ ಸಹಸ್ರ ಸಂಖ್ಯೆಯಲ್ಲಿ ಮದುವೆಗೆ ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಏನಾಯ್ತು ಎಂಬುದಾಗಿ ಕೇಳಿದಾಗ ಹುಡುಗಿಯ ಲವ್ ಕಹಾನಿ ವಿಚಾರ ತಿಳಿದು ಬರುತ್ತದೆ.

ಕೂಡಲೇ ಗರಂ ಆದ ಗಂಡಿನ ಕಡೆಯವರು ಹುಡುಗಿಗೆ ಹಾಕಿರುವ ಚಿನ್ನ ಹಾಗೂ ಮದುವೆ ಖರ್ಚಾಗಿರುವ ಐದು ಲಕ್ಷ ಹಣ ನೀಡುವಂತೆ ಹೆಣ್ಣಿನ ಮನೆಯವರ ಬಳಿ ಬೇಡಿಕೆ ಇಡುತ್ತಾರೆ. ಎರಡು ಕಡೆಯವರನ್ನು ಪೊಲೀಸರು ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನಡೆದಂತಹ ರಾಜಿ ಸಂಧಾನದಿಂದ ಹೆಣ್ಣಿನ ಕಡೆಯವರಿಂದ ಹುಡುಗಿಗೆ ಹಾಕಿದ್ದ ಚಿನ್ನ ಹಾಗೂ ಮದುವೆಗೆ ಖರ್ಚಾಗಿದೆ ಹಣವನ್ನು ನೀಡಲಾಗುತ್ತದೆ. ಇತ್ತ ಹುಡುಗಿಯ ಮನೆಯವರು ಕೂಡ ಮದುಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ನಿಜಕ್ಕೂ ಕೂಡ ಸಡನ್ನಾಗಿ ಮದುವೆ ಮನೆಯಲ್ಲಿ ಹೀಗೆ ನಡೆದರೆ ಪೋಷಕರು ಯಾವ ರೀತಿಯಲ್ಲಿ ಈ ಪರಿಸ್ಥಿತಿ ಎದುರಿಸುತ್ತಾರೆ ಎಂಬ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.