ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಏನೋ ಆಯಿತು, ಆದರೆ ಪ್ಲೇ ಆಫ್ ಬೆನ್ನಲ್ಲೇ ಆರ್ಸಿಬಿ ಗೆ ಸಾಲು ಸಾಲು ಸಮಸ್ಯೆ. ಈ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವೇ??
ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಆಧಾರದಮೇಲೆ ಎಲಿಮಿನೇಟರ್ ಹಂತಕ್ಕೆ ತೇರ್ಗಡೆ ಆಗುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ಆದರೆ ಇಲ್ಲಿ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿ ಚಿಂತಿಸಬೇಕಾದಂತಹ ವಿಚಾರ ಇದೆ. ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಿ ದೆ ಎಂದಮಾತ್ರಕ್ಕೆ ಆರ್ಸಿಬಿ ಗೆಲ್ಲುವ ಫೇವರಿಟ್ ಆಗಿದೆ ಎಂದು ಅರ್ಥವಲ್ಲ. ನಾವು ಹೀಗೆ ಹೇಳಲು ಹಲವಾರು ಕಾರಣಗಳಿವೆ.
ಮೊದಲಿಗೆ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಿದ್ದು ಯಾವ ಸಂದಿಗ್ಧ ಪರಿಸ್ಥಿತಿಯಲ್ಲಿ ಎನ್ನುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನೊಂದು ಪ್ರಮುಖ ವಿಚಾರವನ್ನು ನಾವು ಇಲ್ಲಿ ಗಮನಿಸಬೇಕಾಗಿರುವುದು ಏನು ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯಾರ್ಧದ ಏಳು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಮೂರು ಪಂದ್ಯಗಳನ್ನು ಮಾತ್ರ. ಹೀಗಾಗಿ ಮುಂದಿನ ಪಂದ್ಯ ಇರೋದು ಬಲಿಷ್ಠ ಲಕ್ನೋ ತಂಡದ ವಿರುದ್ಧ. ಲಕ್ನೋ ತಂಡ ಕೂಡ ಟಾಪ್ ಎರಡು ತಂಡಗಳಲ್ಲಿ ಒಂದಾಗುವ ಸಾಧ್ಯತೆ ಇತ್ತು ಆದರೆ ಕೊನೆಯ ಕೆಲವು ಪಂದ್ಯಗಳಲ್ಲಿ ಲಕ್ನೋ ಮಾಡಿಕೊಂಡ ಎಡವಟ್ಟಿನಿಂದಾಗಿ ಮೂರನೇ ಸ್ಥಾನದಲ್ಲಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಮೊದಲಿಗೆ ಗಮನಿಸುವುದಾದರೆ ಮೊದಲ ಎರಡು ತಂಡ ಗಳಾಗಿರುವ ಗುಜರಾತ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಸೋತರೂ ಕೂಡ ಎರಡನೇ ಪಂದ್ಯವನ್ನಾಡುವ ಅವಕಾಶ ಇದೆ. ಆ ಪಂದ್ಯವನ್ನು ಗೆದ್ದು ಫೈನಲ್ ಹಂತಕ್ಕೆ ತಲುಪಬಹುದಾಗಿದೆ. ಆದರೆ 3 ಹಾಗೂ 4ನೇ ಸ್ಥಾನಗಳಲ್ಲಿರುವ ಲಕ್ನೋ ಹಾಗೂ ಆರ್ಸಿಬಿ ತಂಡಗಳಿಗೆ ಆ ಅವಕಾಶ ಇಲ್ಲ. ಅವುಗಳಿಗೆ ಈ ಸಂದರ್ಭದಲ್ಲಿ ಸಾಕಷ್ಟು ಹೋರಾಟವನ್ನು ನೀಡಲೇ ಬೇಕಾಗುತ್ತದೆ. ಅದರಲ್ಲೂ ಪ್ರಮುಖವಾಗಿ ನಾವು ಮಾತನಾಡುತ್ತಿರುವುದು ಆರ್ಸಿಬಿ ತಂಡದ ಕುರಿತಂತೆ.

ಹೌದು ಗೆಳೆಯರೆ ಮೇ 25ರಂದು ಲಕ್ನೋ ವಿರುದ್ಧ ಆರ್ಸಿಬಿ ತಂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡ ಸಾಕಷ್ಟು ವಿಭಾಗಗಳಲ್ಲಿ ಅನಿರೀಕ್ಷಿತ ಕಳಪೆ ಪ್ರದರ್ಶನವನ್ನು ಕಾಣಬಹುದಾದಂತಹ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಆರ್ಸಿಬಿ ತಂಡದವರು ಲಕ್ನೋ ವಿರುದ್ಧ ಎಲಿಮಿನೇಟರ್ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಸೋತರೆ ನೇರವಾಗಿ ಹೊರಹೋಗುತ್ತಾರೆ.
ಒಂದು ವೇಳೆ ಲಕ್ನೋ ವಿರುದ್ಧ ಗೆದ್ದರೂ ಕೂಡ ಒಂದು ಹಾಗೂ ಎರಡನೇ ಸ್ಥಾನದಲ್ಲಿ ಇರುವ ತಂಡಗಳ ನಡುವೆ ಸೋತ ತಂಡದ ವಿರುದ್ಧ ಮತ್ತೊಮ್ಮೆ ಆರ್ಸಿಬಿ ತಂಡ ಕ್ವಾಲಿಫೈಯರ್ 2 ರಲ್ಲಿ ಆಡಬೇಕಾಗುತ್ತದೆ. ಇದರಲ್ಲಿ ಗೆದ್ದರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016 ರ ನಂತರ ಮತ್ತೊಮ್ಮೆ ಆರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಫೈನಲಿಗೆ ತಲುಪಲಿದೆ. ಹೀಗಾಗಿ ಆರ್ಸಿಬಿ ತಂಡ ಸಾಕಷ್ಟು ಅಗ್ನಿ ಪರೀಕ್ಷೆಗಳನ್ನು ಈ ಸಂದರ್ಭದಲ್ಲಿ ಎದುರಿಸಲಿದೆ.

ಕೊನೆಯ ಲೀಗ್ ಪಂದ್ಯದಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ರವರು 73 ರನ್ನುಗಳನ್ನು ಬಾರಿಸುವ ಮೂಲಕ ಫಾರ್ಮಿಗೆ ಮರಳಿದ್ದರು ನಿಜ ಆದರೆ ಕಳಪೆ ಫಾರ್ಮ್ ನಲ್ಲಿ ಇದ್ದ ಸಿರಾಜ್ ರವರ ಬದಲಿಗೆ ಸಿದ್ಧಾರ್ಥ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು ಆದರೆ ಅವರು ಕೂಡ ತಮ್ಮ ಕಳಪೆ ಬೌಲಿಂಗ್ ಅನ್ನು ಪ್ರದರ್ಶಿಸಿದ್ದಾರೆ. ಈ ನಡುವೆ ಇನ್ನು ಕೇವಲ ಎರಡೇ ದಿನಗಳಲ್ಲಿ ಎಲಿಮಿನೇಟರ್ ಆಡಲು ಸಿದ್ಧವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವ ರೀತಿಯಲ್ಲಿ ಈ ಎಲ್ಲಾ ಅಡೆತಡೆಗಳನ್ನು ಎದುರಿಸಿ ಗೆಲ್ಲುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಆರ್ಸಿಬಿ ತಂಡದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.