ಐಪಿಎಲ್ ಮುಗಿದ ಮೇಲೆ ಆರಂಭವಾಗಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಬಿಸಿಸಿಐ, ಆಯ್ಕೆಯಾದವರು ಯಾರ್ಯಾರು ಗೊತ್ತೇ?

24

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ನಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿದವರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುತ್ತಾರೆ ಎಂಬುದಾಗಿ ಹೇಳಲಾಗಿತ್ತು. ಕೊನೆಗೂ ಕೂಡ ಐಪಿಎಲ್ ಮುಗಿಯುವ ಮುನ್ನವೇ ಬಿಸಿಸಿಐ ಈಗ ಮುಂದಿನ ಟಿ-ಟ್ವೆಂಟಿ ಸರಣಿಗಳಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಹೌದು ಗೆಳೆಯರೇ ಐಪಿಎಲ್ ಮುಗಿದ ನಂತರ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ-20 ಸರಣಿ ಗೆ ಸಜ್ಜಾಗಬೇಕಾಗಿದೆ. ಇನ್ನು ಇಂದು ಬಿಸಿಸಿಐ ಈ ಸರಣಿಗೆ ತಂಡವನ್ನು ಅಧಿಕೃತವಾಗಿ ಘೋಷಿಸಿದೆ.

ಕೆ ಎಲ್ ರಾಹುಲ್ ರವರು ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ರಿಷಬ್ ಪಂತ್ ರವರು ವಿಕೆಟ್ ಕೀಪರ್ ಹಾಗೂ ಉಪನಾಯಕನಾಗಿ ತಂಡದಲ್ಲಿ ಇರಲಿದ್ದಾರೆ. ಉಳಿದಂತೆ ಋತುರಾಜ ಗಾಯಕ್ವಾಡ್ ಇಶಾನ್ ಕಿಶನ್ ದೀಪಕ್ ಹೂಡ ಶ್ರೇಯಸ್ ಅಯ್ಯರ್ ದಿನೇಶ್ ಕಾರ್ತಿಕ್ ರವರು ಕೂಡ ಮೂರು ವರ್ಷಗಳ ನಂತರ ಮತ್ತೊಮ್ಮೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು ಬದಲಿ ವಿಕೆಟ್ ಕೀಪರ್ ಆಗಿ ಕೊಡ ಕಾಣಿಸಿಕೊಳ್ಳಲಿದ್ದಾರೆ. ಕೊನೆಗೂ ಹಲವಾರು ಸಮಯಗಳ ನಂತರ ಹಾರ್ದಿಕ್ ಪಾಂಡ್ಯ ರವರು ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ವೆಂಕಟೇಶ್ ಅಯ್ಯರ್ ಯಜುವೇಂದ್ರ ಚಹಲ್ ಕುಲದೀಪ್ ಯಾದವ್ ಅಕ್ಷರ್ ಪಟೇಲ್ ರವಿ ಬಿಷ್ನೋಯ್ ಟೀಮ್ ಇಂಡಿಯಾದ ಖಾಯಂ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರು ಕೂಡ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಐಪಿಎಲ್ ನಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿರುವ ಹರ್ಷಲ್ ಪಟೇಲ್ ಆವೇಶ್ ಖಾನ್ ಅರ್ಷ್ ದೀಪ್ ಸಿಂಗ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಬಾರಿ ಐಪಿಎಲ್ ನಲ್ಲಿ ವೇಗದ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ಕಾಶ್ಮೀರ ಮೂಲದ ವೇಗಿ ಉಮ್ರಾನ್ ಮಲಿಕ್ ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಿರಿಯ ಆಟಗಾರರಾಗಿರುವ ರೋಹಿತ್ ಶರ್ಮ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ರವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.