ಯಾರು ನಿಮಗೆ ಕಾಲ್ ಮಾಡುತ್ತಿದ್ದಾರೆ ಎಂದು ತಿಳಿಯಲು ಇನ್ನು ಮುಂದೆ ಟ್ರೂ ಕಾಲರ್ ಬೇಡವೇ ಬೇಡ, ಯಾಕೆ ಗೊತ್ತೇ?? ಟ್ರಾಯ್ ಪಕ್ಕ ಮಾಹಿತಿಯೊಂದಿಗೆ ಏನು ಮಾಡಲುಹೊರಟಿದೆ ಗೊತ್ತೇ??

28

ನಮಸ್ಕಾರ ಸ್ನೇಹಿತರೇ ಈಗಾಗಲೇ ಹಲವಾರು ಬಾರಿ ನೀವು ಈ ಸಮಸ್ಯೆಯನ್ನು ಅನುಭವಿಸಿರಬಹುದು. ಹೌದು ಗೆಳೆಯರೆ ನೀವು ಮೊಬೈಲ್ ಫೋನ್ ಅನ್ನು ಬಳಸುತ್ತೀರ ಬೇಕಾದರೆ ಅಪರಿಚಿತ ಸಂಖ್ಯೆಯಿಂದ ನಿಮ್ಮ ನಂಬರ್ಗೆ ಆಗಾಗ ಫೋನ್ ಕರೆಗಳು ಬರುತ್ತಿರುತ್ತವೆ. ಈ ಸಂದರ್ಭದಲ್ಲಿ ನಿಮ್ಮ ಫೋನಿಗೆ ನಿಜವಾಗಿ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಊಹಿಸಲು ಕೂಡ ನಿಮಗೆ ಸಾಧ್ಯವಾಗುವುದಿಲ್ಲ. ಹೌದು ಗೆಳೆಯರು ಯಾಕೆಂದರೆ ಆ ನಂಬರ್ ನಿಮ್ಮ ಮೊಬೈಲ್ ಫೋನ್ ನಲ್ಲಿ ಸೇವ್ ಆಗಿರುವುದಿಲ್ಲ. ಈ ಕಾರಣಕ್ಕಾಗಿಯೇ ಹಲವಾರು ಜನರು ಟ್ರೂಕಾಲರ್ ನಲ್ಲಿ ಈ ಫೋನ್ ನಂಬರ್ ಅನ್ನು ಕಾಪಿ ಪೇಸ್ಟ್ ಮಾಡಿ ಯಾರು ಎಂಬುದಾಗಿ ಹುಡುಕುತ್ತಾರೆ. ಟ್ರೂಕಾಲರ್ ನಲ್ಲಿಯೂ ಕೂಡ ಪ್ರತಿ ಬಾರಿ ಅದು ಯಾರ ನಂಬರ್ ಎನ್ನುವುದಾಗಿ ಸತ್ಯವನ್ನೇ ಹೇಳುವುದಿಲ್ಲ.

ಅದರಲ್ಲಿಯೂ ಕೂಡ ಹಲವಾರು ಲೋಪದೋಷಗಳಿವೆ. ಇನ್ನು ಕೆಲವರಿಗೆ ಟ್ರೂಕಾಲರ್ ಅನ್ನು ಹೇಗೆ ನಿರ್ವಹಿಸುವುದು ಎನ್ನುವ ಕುರಿತಂತೆ ತಿಳಿದಿರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ಕೂಡ ಸರಿಯಾದ ಪರಿಹಾರ ಸಿಗಲಿದೆ ಎಂಬುದಾಗಿ ತಿಳಿದುಬಂದಿದೆ. ಟ್ರೂಕಾಲರ್ ಇಲ್ಲದೆ ಹೇಗೆ ಅಪರಿಚಿತ ನಂಬರ್ ಯಾರದ್ದು ಎನ್ನುವುದನ್ನು ತಿಳಿಯುವುದು ಹೇಗೆ ಎಂಬ ಕುರಿತಂತೆ ನೀವು ಯೋಚಿಸುತ್ತಿರಬಹುದು. ಬನ್ನಿ ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ದೂರಸಂಪರ್ಕ ಇಲಾಖೆ ಹೊಸ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲಿ ಜಾರಿಗೆ ತರಲಿದೆ. ಇದರ ಪ್ರಕಾರ ಅವರು ಕೆವೈಸಿ ದಾಖಲೆ ನೀಡುವ ವೇಳೆ ಯಾವ ಹೆಸರನ್ನು ನೀಡುತ್ತಾರೆಯೋ ಅದೇ ಹೆಸರನ್ನು ನಿಮ್ಮ ಪರದೆ ಮೇಲೆ ಮೂಡುವಂತೆ ಮಾಡುತ್ತದೆ ಎಂಬುದಾಗಿ ತಿಳಿದುಬಂದಿದೆ.

ಟೆಲಿಕಾಂ ಆಪರೇಟರ್ ಗಳಿಗೆ ದಾಖಲೆಯನ್ನು ಒದಗಿಸುವಾಗ ನೀವು ಯಾವ ಹೆಸರನ್ನು ನೀಡಿರುತ್ತೀರೋ ಅದೇ ಹೆಸರು ಬೇರೆಯವರು ನಿಮ್ಮ ಫೋನ್ ಗೆ ಅಪರಿಚಿತ ನಂಬರ್ ನಿಂದ ಕರೆ ಮಾಡಿದಾಗ ಪರದೆ ಮೇಲೆ ಮೂಡಿಬರುತ್ತದೆ ಎನ್ನುವುದಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ವಘೇಲಾ ರವರು ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ. ಹೀಗಾಗಿ ನೀವು ಆ ನಂಬರ್ ಅನ್ನು ಸೇವ್ ಮಾಡಿಕೊಂಡು ಇಲ್ಲದಿದ್ದರೂ ಕೂಡ ಅದು ಯಾರದ್ದು ಎನ್ನುವುದನ್ನು ಕೆವೈಸಿ ನಲ್ಲಿ ಇರುವಂತೆ ಅವರ ಹೆಸರನ್ನು ನಿಮ್ಮ ಮೊಬೈಲ್ ಪರದೆ ಮೇಲೆ ಮೂಡುವಂತೆ ಮಾಡುತ್ತದೆ. ಹಲವಾರು ಸಮಯಗಳಿಂದ ಸಮಸ್ಯೆಯಾಗಿದ್ದ ಸ್ಪ್ಯಾಮ್ ಕರೆಗಳು ಕೂಡ ಈ ವ್ಯವಸ್ಥೆ ಜಾರಿಗೆ ಬಂದ ನಂತರ ನಿವಾರಣೆಯಾಗಲಿದೆ ಎಂಬುದಾಗಿ ಕೂಡ ಇಲಾಖೆ ತಿಳಿಸಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ