ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿ ಎಂಬುದನ್ನು ನೋಡದೆ ಮಸಣದಲ್ಲಿ ಬಿಟ್ಟು ಬಂದ ಮಗ, ಹೆಂಡತಿ ಜೊತೆ ಸೇರಿ ಹೀಗೆ ಮಾಡಿದ ನಂತರ ಏನಾಯ್ತು ಗೊತ್ತೇ?

62

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಪಂಚ ಎನ್ನುವುದು ಎಷ್ಟೊಂದು ಸ್ವಾರ್ಥಿ ಆಗಿದೆ ಎಂದರೆ ಖಂಡಿತವಾಗಿ ಇಲ್ಲಿ ಸಂಬಂಧಗಳಿಗೆ ಯಾವುದೇ ಬೆಲೆನೇ ಇಲ್ವಾ ಎನ್ನುವಷ್ಟರ ಮಟ್ಟಿಗೆ ಅನುಮಾನಗಳು ಮೂಡಲು ಆರಂಭವಾಗಿದೆ. ನಿಜಕ್ಕೂ ಕೂಡ ಕೆಲವೊಂದು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಿದಾಗ ನೋಡಿದಾಗ ಮನಸ್ಸಿಗೆ ದುಃಖವಾಗುವುದಂತೂ ಖಚಿತ. ಇಂದು ನಾವು ಹೇಳುತ್ತಿರುವ ಘಟನೆ ಕೂಡ ನಡೆದಿರುವುದು ನಮ್ಮ ಬೆಂಗಳೂರಿನಲ್ಲಿ. ತಮ್ಮ ತಾಯಿಯನ್ನು ಮಸಣದಲ್ಲಿ ಬಿಟ್ಟುಹೋಗಿದ್ದಾರೆ ಮಗ ಹಾಗೂ ಮಗಳು. ನಂತರ ನಡೆದಿದ್ದು ಏನು ಎಂಬುದು ತಿಳಿಯೋಣ ಬನ್ನಿ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ 15 ದಿನಗಳ ಹಿಂದೆ ತಮ್ಮ ವೃದ್ದ ತಾಯಿಯನ್ನು ಬಿಟ್ಟು ಹೋಗಿದ್ದಾರೆ. ಮಳೆ ಗಾಳಿ ಚಳಿಯೆನ್ನದೆ ಆ ವೃದ್ಧ ಮುದುಕಿ ಅವೆಲ್ಲದಕ್ಕೂ ಎದುರಾಗಿ ಅಲ್ಲೇ ಇದ್ದರು. ನಂತರ ಸ್ಥಳೀಯರು ಅವರನ್ನು ಕರೆದುಕೊಂಡು ಬಂದು ಟಾರ್ಪಲ್ ಹಾಕಿ ಮನೆ ರೀತಿ ಮಾಡಿ ಆಶ್ರಯ ಸಿಗುವಂತೆ ಮಾಡಿದ್ದಾರೆ. ಅಜ್ಜಿ ಹಲವಾರು ದಿನಗಳಿಂದ ಊಟ ಇಲ್ಲದೆ ಕೃಶವಾಗಿದ್ದಾರೆ. ಈಗಾಗಲೇ ಅವರಿಗೆ ಮಹಾಮಾರಿಯ ಟೆಸ್ಟನ್ನು ಕೂಡ ಮಾಡಲಾಗಿದೆ.

ಇಂತಹ ಹೀನ ಪರಿಸ್ಥಿತಿಯಿಂದ ಮಹಾತಾಯಿಯನ್ನು ರಕ್ಷಿಸಿದ ಯೋಗೀಶ್ ಟ್ರಸ್ಟ್ನ ಯೋಗೀಶ್ ರವರು ಅವರನ್ನು ತಮ್ಮ ಟ್ರಸ್ಟಿನಲ್ಲಿ ಕರೆತಂದು ಊಟ ತಿಂಡಿ ನೀಡಿ ವೈದ್ಯಕೀಯ ಚಿಕಿತ್ಸೆಯನ್ನು ಕೂಡ ನೀಡಿ ರಕ್ಷಿಸಿದ್ದಾರೆ. ನಂತರ ಅವರಿಂದ ಕೇಳಿ ತಿಳಿದ ನಂತರ ಅವರಿಗೆ ಒಬ್ಬ ಮಗ ಹಾಗೂ ಸಾಕುಮಗಳು ಕೂಡ ಇದ್ದಾರೆ ಎಂಬುದು ತಿಳಿದುಬಂದಿದೆ. ಇಬ್ಬರು ಮಕ್ಕಳು ಇದ್ದರೂ ಕೂಡ ಅವರು ಬೀದಿಗೆ ಬಿದ್ದಿರುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರವಾಗಿದೆ.

ಆ ಮಗನನ್ನು ಬಿಡಿ ಈ ಕಡೆ ಅನಾಥವಾಗಿ ರಸ್ತೆ ಮೇಲೆ ಬಿದ್ದಿದ್ದು ಅಂತಹ ಹೆಣ್ಣುಮಗುವನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದ್ದರು ಈ ತಾಯಿ. ಆದರೆ ಆ ಹೆಣ್ಣು ಕೂಡ ತಾಯಿಯೆಂಬ ಕನಿಕರ ಇಲ್ಲದೆ ವೃದ್ದೆಯನ್ನು ಮಸಣದಲ್ಲಿ ಬಿಟ್ಟು ಬಂದಿದ್ದರು.

ಈ ಕುರಿತಂತೆ ಆ ವೃದ್ಧತಾಯಿ ಹೇಳಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜಕ್ಕೂ ಕೂಡ ಒಂದು ಕಾಲದಲ್ಲಿ ತಾಯಿಯೆಂದರೆ ದೇವರು ತಾಯಿಯೆಂದರೆ ಮೊದಲ ಗುರು ಎನ್ನುವುದಾಗಿ ಸಂಬೋಧಿಸಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ತಾಯಿಯನ್ನು ಕನಿಕರ ಇಲ್ಲದೆ ಮಸಣದಲ್ಲಿ ಹಾಗೂ ಬೀದಿಬದಿಯಲ್ಲಿ ಅನಾಥರಂತೆ ಬಿಟ್ಟು ಬರುತ್ತಿದ್ದಾರೆ. ನಿಜಕ್ಕೂ ಕೂಡ ಇಂತಹ ಮನುಷ್ಯರೂಪದ ರಾಕ್ಷಸರು ಯಾಕೆ ಬದುಕಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.

ಒಂದು ಕಾಲದಲ್ಲಿ ನಿಮಗೆ ನೆನಪಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ರಾಜಕುಮಾರ ಚಿತ್ರವನ್ನು ನೋಡಿ ಅನಾಥಾಶ್ರಮದಲ್ಲಿ ತಮ್ಮ ತಂದೆ-ತಾಯಿಯನ್ನು ತಮ್ಮ ತಮ್ಮ ಮನೆಗೆ ಕರೆತಂದಿದ್ದರು. ಇಷ್ಟೆಲ್ಲ ನಡೆದರೂ ಕೂಡ ಇಂತಹ ಮಕ್ಕಳು ಇನ್ನೂ ಕೂಡ ನಮ್ಮ ಸಮಾಜದಲ್ಲಿ ಬದುಕಿದ್ದಾರೆ ಎಂದರೆ ಖಂಡಿತವಾಗಿಯೂ ಈ ಸೌಭಾಗ್ಯಕ್ಕಾಗಿ ಯಾಕೆ ಮಕ್ಕಳನ್ನು ಹೇಳಬೇಕು ಎನ್ನುವ ಯೋಚನೆಗಳು ಕೂಡ ಮೂಡಿಬರುತ್ತದೆ. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ಶೇರ್ ಮಾಡಿಕೊಳ್ಳಿ.