ಹೊಸ ವಿವೋ y75 ಫೋನ್ ಬಿಡುಗಡೆ, 44 ಮೆಗಾ ಪಿಕ್ಸೆಲ್ ಸೇರಿದಂತೆ ಉತ್ತಮ ಫೀಚರ್ಸ್ ಇರುವ ಫೋನ್ ಬೆಲೆ ಎಷ್ಟು ಕಡಿಮೆಗೆ ಸಿಗುತ್ತಿದೆ ಗೊತ್ತೇ??

45

ನಮಸ್ಕಾರ ಸ್ನೇಹಿತರೇ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಗಳಿಗಾಗಿ ವಿವೋ ಸಂಸ್ಥೆ ಸಾಕಷ್ಟು ಪ್ರಸಿದ್ಧವಾಗಿದೆ ಎಂಬುದು ನಮಗೆಲ್ಲ ತಿಳಿದಿದೆ. ಈಗ ಇದೇ ವಿವೋ ಸಂಸ್ಥೆ ವಿವೋ ವೈ 75 ಎಂಬ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಸೆಲ್ಫಿ ಕ್ಯಾಮೆರಾ 44 ಮೆಗಾಪಿಕ್ಸೆಲ್ ಹಾಗೂ ಹಿಂಬದಿಯ ಕ್ಯಾಮೆರಾ 50 ಪಿಕ್ಸೆಲ್ ಕ್ಲಾರಿಟಿ ಯನ್ನು ಹೊಂದಿದೆ. ಫೋಟೋ ತೆಗೆಯುವವರಿಗೆ ಈ ಫೋನ್ ಪರ್ಫೆಕ್ಟ್ ಆಗಿದೆ. ಹಲವಾರು ಟಾಪ್ ಎಂಡ್ ದುಬಾರಿ ಫೋನ್ ಗಳಿಗೆ ವಿವೋ ಸಂಸ್ಥೆ ಈ ಫೋನನ್ನು ಪೈಪೋಟಿಯಾಗಿ ಬಿಟ್ಟಿದೆ ಎಂದು ಹೇಳಬಹುದಾಗಿದೆ.

ಇನ್ನು ಇದು ಮೂನ್ಲೈಟ್ ಶ್ಯಾಡೋ ಹಾಗೂ ಡ್ಯಾನ್ಸಿಂಗ್ ವೇವ್ಸ್ ಎನ್ನುವ ಎರಡು ಕಲರ್ ಗಳಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ 6.44 ಇಂಚಿನ ಫುಲ್ ಹೆಚ್ ಡಿ ಡಿಸ್ಪ್ಲೇ ಇರುತ್ತದೆ. ಇದರಲ್ಲಿ 8gb RAM ಹಾಗೂ 128gb ಒಳ ಸ್ಟೋರೇಜ್ ಕೂಡ ಇರುತ್ತದೆ. ಇದರ ಬ್ಯಾಟರಿ 4050 ಎಂಎಎಚ್ ಆಗಿದೆ. ಹೀಗಾಗಿ ದೀರ್ಘಕಾಲದ ಬ್ಯಾಟರಿ ಬಾಳಿಕೆ ಕೂಡ ಇದೆ. ಇದರೊಂದಿಗೆ ಸಿಗುವ ಚಾರ್ಜರ್ ನಲ್ಲಿ 44 ವ್ಯಾಟ್ ವೇಗದಲ್ಲಿ ಚಾರ್ಜ್ ಆಗುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಬೆಂಬಲವೂ ಕೂಡ ಇದರಲ್ಲಿ ಇರುತ್ತದೆ. ಇದರಲ್ಲಿ 4 ಜಿ ಚಿಪ್ ಸೆಟ್ ಲಭ್ಯವಿರುತ್ತದೆ.

Octa-core ಮೀಡಿಯಾ ಟೆಕ್ ಹೇಲಿಯೋ g96 ಪ್ರೋಸೆಸರ್ ಅಳವಡಿಕೆಯಾಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಉತ್ತಮ ಸೇವೆಯನ್ನು ಈ ಫೋನ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಫೋನ್ ಬೆಲೆ ನಿಮಗೆ ಎಷ್ಟು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೆ ಭಾರತದಲ್ಲಿ ವಿವೋ ವೈ 75ರ ಬೆಲೆ 20999 ರೂಪಾಯಿ ಆಗಿದೆ. ಇದೇ ವರ್ಷದ ಆರಂಭದಲ್ಲಿ x80 ಹಾಗೂ x80pro ಸರಣಿಯ ಫೋನ್ ಗಳನ್ನು ಬಿಡುಗಡೆ ಮಾಡಿದ ನಂತರ ವಿವೊ ಸಂಸ್ಥೆ ಮಧ್ಯಮ ಬೆಲೆ ಯಲ್ಲಿರುವ ಈ ಫೋನನ್ನು ಈಗ ಬಿಡುಗಡೆ ಮಾಡಿದೆ. ಫ್ಲಿಪ್ಕಾರ್ಟ್ ಹಾಗೂ ವಿವೋ ಆನ್ಲೈನ್ ಸ್ಟೋರ್ ಸೇರಿದಂತೆ ನಿಮ್ಮ ಹತ್ತಿರ ಇರುವ ಮೊಬೈಲ್ ಅಂಗಡಿಗಳಲ್ಲಿ ಕೂಡ ನೀವು ಈ ಫೋನನ್ನು ಖರೀದಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಫೋನ್ ಈಗ ಲಭ್ಯವಿದೆ.