ಎರಡು ಮಕ್ಕಳ ತಾಯಿಯನ್ನು ಪ್ರೀತಿಸಿ ಮದುವೆಯಾಗಿರುವ ಶಮಿ ರವರ ದಾಂಪತ್ಯ ಜೀವನ ನಿಜಕ್ಕೂ ಹೇಗಿದೆ ಗೊತ್ತೇ?? ಕ್ರಿಕೆಟ್ ನಲ್ಲಿ ಮಿಂಚುವ ಇವರ ನಿಜ ಜೀವನ ಹೇಗಿದೆ ಗೊತ್ತೇ?

4,175

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಮೊಹಮ್ಮದ್ ಶಮಿ ಅವರ ಸಾಧನೆಯನ್ನು ಖಂಡಿತವಾಗಿ ಪ್ರತಿಯೊಬ್ಬರು ಕೂಡ ಮೆಚ್ಚಲೇಬೇಕು. ಆತ ಬೌಲರ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸಲ್ಲಿಸಿರುವ ಅಂತಹ ಸೇವೆ ನಿಜಕ್ಕೂ ಕೂಡ ಪ್ರಶಂಸಾರ್ಹ. ಆದರೆ ಇಂದಿನ ದಿನಗಳಲ್ಲಿ ಅವರ ವೈಯಕ್ತಿಕ ಜೀವನದಲ್ಲಿ ನಡೆದಿರುವಂತಹ ಘಟನೆಯನ್ನು ನೆನಪಿಸಿಕೊಂಡರೆ ನಿಜಕ್ಕೂ ಕೂಡ ಬೇಸರವಾಗುತ್ತದೆ. ಬನ್ನಿ ಅವರ ಜೀವನದ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಹೌದು ಗೆಳೆಯರೆ 2012 ರಲ್ಲಿ ಮೊಹಮ್ಮದ್ ಶಮಿ ರವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಹಸೀನ ಜಹಾನ್ ಎನ್ನುವವರು ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಚಿಯರ್ ಲೀಡರ್ ಆಗಿದ್ದರು. ಇಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಕೂಡ 2016 ರಲ್ಲಿ ಮದುವೆಯಾಗುತ್ತಾರೆ. ಹಸೀನಾ ರವರ ಅಕ್ಕನ ಮಕ್ಕಳು ಕೂಡ ತಬ್ಬಲಿಯಾಗಿದ್ದರು ಇದೇ ಕಾರಣದಿಂದಾಗಿ ಇವರಿಬ್ಬರನ್ನು ಅಪ್ಪ-ಅಮ್ಮ ಎಂಬುದಾಗಿ ಭಾವಿಸಿದ್ದರು. ಇವರಿಬ್ಬರ ಮದುವೆ ಲವ್ ಮ್ಯಾರೇಜ್ ಆಗಿದ್ದು ನಿಜ ಆದರೆ ಹಲವಾರು ಒಪ್ಪಂದ ಹಾಗೂ ರಾಜಿಗಳ ನಡುವೆ ಮದುವೆಯಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ಆದರೆ ಬರಬರುತ್ತಾ ಇವರಿಬ್ಬರ ನಡುವೆ ಸಾಕಷ್ಟು ವೈಮನಸ್ಸು ಮೂಡಲು ಪ್ರಾರಂಭವಾಗುತ್ತದೆ.

ಹೌದು ಗೆಳೆಯರೇ ಶಮಿ ರವರಿಗೆ ಬೇರೆ ಮಹಿಳೆಯರ ಜೊತೆಗೆ ಬೇಡದ ಸಂಬಂಧ ಇದೆ ಎನ್ನುವುದಾಗಿ ಹಲವಾರು ಸಾಕ್ಷಾಧಾರಗಳನ್ನು ಹಸೀನ ಜಹಾನ್ ಅವರು ತೋರಿಸುವ ಮೂಲಕ ಶಮಿ ಅವರ ಮೇಲೆ ಗಂಭೀರ ಆರೋಪವನ್ನು ಹೊರಿಸುತ್ತಾರೆ. ಇನ್ನು ಇಲ್ಲಿ ತಿಳಿದುಕೊಳ್ಳಬೇಕಾಗಿರುವ ಇನ್ನೊಂದು ವಿಚಾರ ಏನೆಂದರೆ ಹಸಿನ ಜಹಾನ್ ಈಗಾಗಲೇ ಒಂದು ಮದುವೆಯಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದ ಯುವತಿ ಯಾಗಿದ್ದಳು. ಹೀಗಾಗಿ ಎರಡನೇ ಮದುವೆ ಕೂಡ ಸಾಕಷ್ಟು ಸಮಸ್ಯೆಗಳಿಂದ ಇರಬಾರದು ಎಂಬ ಕಾರಣಕ್ಕಾಗಿಯೇ ಪ್ರಯತ್ನಪಟ್ಟಿದ್ದಳು. ಇನ್ನು ಹಸಿನ ಜಹಾನ್ ನೀಡಿರುವ ದೂರಿನ ಪ್ರಕಾರ ಇವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಶಮಿ ಬೇರೆ ಹುಡುಗಿಯ ಜೊತೆಗೆ ಐದು ವರ್ಷಗಳ ಕಾಲ ನಿತ್ಯ ಸಂಪರ್ಕದಲ್ಲಿದ್ದ ರಂತೆ.

ಇಷ್ಟು ಮಾತ್ರವಲ್ಲದೆ 2018 ರಲ್ಲಿ ಹಸೀನಾ ಶಮಿ ಅವರ ಕುರಿತಂತೆ ದೊಡ್ಡಮಟ್ಟದ ಆರೋಪಗಳನ್ನು ಮಾಧ್ಯಮಗಳೆದುರು ಬಹಿರಂಗಪಡಿಸುತ್ತಾರೆ. ಶಮಿ ಹಾಗೂ ಅವರ ಸಹೋದರ ಸೇರಿಕೊಂಡು ಹಲವಾರು ಹುಡುಗಿಯರಿಗೆ ನಕಲಿ ನಂಬರ್ ಗಳ ಮೂಲಕ ಕೆಟ್ಟ ಕೆಟ್ಟ ಮೆಸೇಜ್ ಗಳನ್ನು ಕಳಿಸುತ್ತಿದ್ದ ರಂತೆ. ಇಷ್ಟು ಮಾತ್ರವಲ್ಲದೆ ಲಂಡನ್ ಎಂಬೆಸ್ಸಿ ಜೊತೆಗೆ ಸೇರಿಕೊಂಡು ಭಾರತದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬುದಾಗಿ ಕೂಡ ದೊಡ್ಡ ಮಟ್ಟದ ದೂರನ್ನು ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ಕರಾಚಿಯಲ್ಲಿ ಅನುಷ ಎಂಬ ಕೆಲಸಕ್ಕೆ ಸಂಬಂಧ ಹೊಂದಿದ್ದು ಅಲ್ಲಿ ಒಂದು ರೂಮ್ ಕೂಡ ಖರೀದಿಸಿದ್ದು ಆಗಾಗ ಅವಳ ಜೊತೆಗೆ ಸೇರಲು ಅಲ್ಲಿಗೆ ಹೋಗುತ್ತಾರೆ ಎಂಬುದಾಗಿ ಕೂಡ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯನ್ನುವಂತೆ ಶಮಿ ರವರು ಕೂಡ ನಾನು ಈ ತರಹದ ಯಾವುದೇ ಕೆಲಸಗಳನ್ನು ನಾನು ಮಾಡಿಲ್ಲ ಇದರ ಕುರಿತಂತೆ ಸಂಬಂಧಪಟ್ಟವರು ನನ್ನ ಮೇಲೆ ತನಿಖೆ ನಡೆಸಬಹುದಾಗಿದೆ ನಾನು ನನ್ನ ದೇಶ ತಲೆತಗ್ಗಿಸುವಂತಹ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಮಾಡಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು. ಇಷ್ಟು ಮಾತ್ರವಲ್ಲದೆ ಇನ್ನೂ ಮುಂದುವರೆದು ಮಾತನಾಡುತ್ತ ಶಮಿ ರವರು ನನ್ನ ಕುಟುಂಬದ ವಿರುದ್ಧವಾಗಿ ನನಗೆ ಮಾತನಾಡಲು ಇಷ್ಟವಿಲ್ಲ. ಎಲ್ಲರನ್ನು ಒಗ್ಗೂಡಿಸಬೇಕು ಎನ್ನುವುದು ನನ್ನ ಆಶಯ. ಅವಳಿಗೆ ಕೇವಲ ನನ್ನ ಹಣ ಹಾಗೂ ಕೀರ್ತಿಯ ಲಾಭ ಗಳಷ್ಟೇ ಬೇಕಾಗಿರುವುದು. ನನ್ನ ಪೋಷಕರು ಹುಷಾರಿಲ್ಲದಿದ್ದಾಗ ಅವರನ್ನು ನೋಡಲು ಕೂಡ ಆಕೆ ಬಂದಿರಲಿಲ್ಲ. ಕೇವಲ ಕೆಲವೊಂದು ವಿಚಾರಗಳಿಗಾಗಿ ನನ್ನ ಮನೆಯವರನ್ನೇ ಮನೆಯಿಂದ ಹೊರಗೆ ಇಟ್ಟವಳು ಆಕೆ.

ಹಾಗೇನೆ ನಾನು ಮನಸಾರೆ ಪ್ರೀತಿಸಿ ಮದುವೆಯಾದವರು ನಾನು ಯಾಕೆ ಆಕೆಗೆ ಸಮಸ್ಯೆ ನೀಡುತ್ತೇನೆ ನೀವೇ ಹೇಳಿ. ಯಾವ ಕಾರಣಕ್ಕಾಗಿ ಆಕೆ ಇದನ್ನು ಮಾಡುತ್ತಿದ್ದಳು ಗೊತ್ತಿಲ್ಲ ಆದರೆ ಯಾಕೆ ಮಾತನಾಡುತ್ತಿರುವುದನ್ನು ನೋಡಿದಾಗೆಲ್ಲ ನಮ್ಮ ಚಿಕ್ಕಮಗುವಿನ ನೆನಪು ನನಗೆ ಬರುತ್ತದೆ. ಈ ಪ್ರಕರಣಕ್ಕಾಗಿ ನಾನು ಹತ್ತಾರು ಲಕ್ಷಗಳನ್ನು ಖರ್ಚು ಮಾಡಿದ್ದೇನೆ ಅದನ್ನು ಬೇಕಾದರೆ ನಾನು ಒಂದೇ ಐಪಿಎಲ್ ನಲ್ಲಿ ಆಡುವ ಮೂಲಕ ಗಳಿಸಬಲ್ಲ ಆದರೆ ನಾನು ಕಳೆದುಕೊಂಡಿರುವ ಶಾಂತಿ ನೆಮ್ಮದಿ ನಾನು ಹೇಗೆ ಪಡೆಯಲಿ ಎಂಬುದಾಗಿ ಹತಾಶೆಯ ಮಾತುಗಳನ್ನಾಡುತ್ತಾರೆ.

ಇದೇ ಕಾರಣದಿಂದಾಗಿ 2019 ರಲ್ಲಿ ಶಮಿ ರವರು 15ದಿನಗಳ ಜೈಲುವಾಸವನ್ನು ಕೂಡ ಅನುಭವಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಸೀನಾ ಶಮಿ ಒಬ್ಬ ಕ್ರಿಕೆಟ್ ಸೆಲೆಬ್ರಿಟಿ ಆಗಿರುವ ಕಾರಣದಿಂದಾಗಿ ಅವರಿಗೆ ಸಾಕಷ್ಟು ಬೆಂಬಲ ಕೂಡ ವ್ಯಕ್ತವಾಗುತ್ತಿದೆ ಅವರು ಕೂಡ ದ್ರೋಹಿಗಳು ಎಂಬುದಾಗಿ ಮಾತನಾಡುತ್ತಾರೆ. ನನ್ನ ಬಳಿ ಹಣವಿಲ್ಲ ಬೆಂಬಲವೂ ಇಲ್ಲ ಶಮಿ ರವರ ಕರೆಯುವರು ನನಗೆ ಬೆದರಿಕೆಯನ್ನು ಕೂಡ ನೀಡುತ್ತಿದ್ದಾರೆ ಆದರೂ ಕೂಡ ನನ್ನ ಮಗುವಿಗಾಗಿ ನಾನು ಕೊನೆತನಕ ಹೋರಾಟ ಮಾಡುತ್ತೇನೆ ಎಂಬುದಾಗಿ ಹೇಳುತ್ತಾರೆ.

2020 ರಲ್ಲಿ ಶಮಿ ರವರ ವಿರುದ್ಧ ಇದ್ದ ಫಿಕ್ಸಿಂಗ್ ಪ್ರಕರಣ ಯಾವುದೇ ಸಾಕ್ಷಾಧಾರಗಳು ಇಲ್ಲದೆ ಕ್ಲೀನ್ ಚಿಟ್ ಪಡೆದು ಮತ್ತೆ ಭಾರತೀಯ ತಂಡಕ್ಕೆ ವಾಪಸಾಗುತ್ತಾರೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಕೂಡ ಛಲಬಿಡದ ತ್ರಿವಿಕ್ರಮನಂತೆ ಶಮಿ ರವರು ಮತ್ತೆ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಾರೆ. ಕ್ರಿಕೆಟಿಗನಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು ಕೂಡ ಇಂದಿಗೂ ಅವರ ದಾಂಪತ್ಯ ಜೀವನ ಎನ್ನುವುದು ಅದೇ ಸ್ಥಿತಿಯಲ್ಲಿದೆ. ಎಲ್ಲಾ ಪರಿಸ್ಥಿತಿಗಳಿಂದ ಶಮಿ ಅವರಿಗೆ ಹೊರಬರುವಂತಹ ಶಕ್ತಿ ದೇವರು ನೀಡಲಿ ಎಂಬುದಾಗಿ ಹಾರೈಸೋಣ. ಈ ಪ್ರಕರಣದಲ್ಲಿ ಯಾರದು ತಪ್ಪು ಯಾರದು ಸರಿ ಎನ್ನುವುದಕ್ಕಿಂತ ಹೆಚ್ಚಾಗಿ ಈ ಎಲ್ಲಾ ವಿಚಾರಗಳಿಂದಾಗಿ ಶಮೀರ್ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದಂತೂ ಸುಳ್ಳಲ್ಲ.