ಸಪ್ತಪದಿ ತುಳಿದ ನಾಗಿಣಿ ಧಾರಾವಾಹಿಯ ನಟ ಶೂಲ್ ಪಾತ್ರದಾರಿ ನಿನಾದ್, ಮದುವೆ ಸಂಭ್ರಮ ಹೇಗಿತ್ತು ಗೊತ್ತೇ?? ಯಾರೆಲ್ಲ ಬಂದಿದ್ರು ಗೊತ್ತೇ?

29

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಹಾಗೂ ಸಿನಿಮಾದ ಸೆಲೆಬ್ರಿಟಿಗಳು ಬ್ಯಾಕ್ ಟು ಬ್ಯಾಕ್ ಮದುವೆಯಾಗುತ್ತಿದ್ದಾರೆ. ಈಗ ಈ ಮದುವೆಯಾಗುವವರ ಪಟ್ಟಿಗೆ ಜೀ ಕನ್ನಡ ವಾಹಿನಿಯ ನಾಗಿಣಿ 2 ಧಾರವಾಹಿಯ ತ್ರಿಶೂಲ್ ಪಾತ್ರಧಾರಿಯಾಗಿರುವ ನಿನಾದ್ ಹರಿತ್ಸ ರವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರು ತಮ್ಮ ನಟನೆಯ ಮೂಲಕ ಕರ್ನಾಟಕದ ಮನೆಮಾತಾಗಿರುವ ನಿನಾದ್ ರವರು ಈಗ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ತಮ್ಮ ಮದುವೆಯ ಹಿನ್ನೆಲೆಯಲ್ಲಿ ಮನೆಯಲ್ಲಿ ಧಾರ್ಮಿಕ ಶಾಸ್ತ್ರಗಳಲ್ಲಿ ಪಾಲ್ಗೊಂಡ ಸಂದರ್ಭಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಮದುವೆಯಾಗುವುದಕ್ಕೂ ಮೂರು ದಿನ ಮುಂಚೆ ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ನಿನಾದ್ ರವರು ಮದುವೆಯಾಗುತ್ತಿರುವುದು ರಮ್ಯ ಎನ್ನುವ ಹುಡುಗಿಯನ್ನು. ಇಬ್ಬರೂ ಕೂಡ ಹಲವಾರು ಸಮಯಗಳ ಕಾಲ ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಇಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ನಿನಾದ್ ಹಂಚಿಕೊಂಡಿದ್ದು ಜೋಡಿ ಸೂಪರ್ ಕ್ಯೂಟ್ ಆಗಿದ್ದಾರೆ ಎಂಬುದಾಗಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮದುವೆಯ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಈ ಹಿಂದೆಯೂ ಕೂಡ ನಿನಾದ್ ರಮ್ಯಾ ರವರ ಜೊತೆಗೆ ಇರುವಂತಹ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಇವರೇ ನನ್ನ ಲೈಫ್ ಪಾರ್ಟ್ನರ್ ಎನ್ನುವುದಾಗಿ ಹೇಳಿಕೊಂಡಿದ್ದರು. ಈಗ ಇಬ್ಬರೂ ಕೂಡ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಮದುವೆ ಫೋಟೋಗಳಲ್ಲಿ ಇಬ್ಬರೂ ಕೂಡ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಅದರಲ್ಲೂ ನಿನಾದ್ ರವರ ಅಭಿಮಾನಿಗಳಿಗೆ ಇದು ಸಂತೋಷದ ಸುದ್ದಿಯಾಗಿದೆ ಎಂದು ಹೇಳಬಹುದಾಗಿದೆ. ಇನ್ನು ನಿನಾದ್ ಅವರ ಕುಟುಂಬಸ್ಥರು ಸೇರಿದಂತೆ ಕಿರುತೆರೆ ಕ್ಷೇತ್ರದ ಸ್ನೇಹಿತರು ಕೂಡ ಈ ಮದುವೆಗೆ ಆಗಮಿಸಿದ್ದಾರೆ ಎಂಬುದಾಗಿ ಕೇಳಿಬಂದಿದೆ. ನಿನಾದ್ ರವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ನೀವು ಅವರಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಶುಭಹಾರೈಸ ಬಹುದಾಗಿದೆ.