ಒಟ್ಟಿಗೆ ನಟನೆ ಪ್ರೀತಿಸಿ ಮದುವೆಯಾಗಿರುವ ಕಿರುತೆರೆಯ ಜೋಡಿಗಳು ಯಾರ್ಯಾರು ಗೊತ್ತೇ?? ಟಿವಿ ಅಲ್ಲಿ ನಿಮ್ಮ ಮುಂದೆ ಕಾಣಿಸಿಕೊಂಡು ಮದುವೆಯಾಗಿರುವವರು ಯಾರ್ಯಾರು ಗೊತ್ತೇ?

69

ನಮಸ್ಕಾರ ಸ್ನೇಹಿತರೇ ಪ್ರೀತಿ ಹಾಗೂ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯಲೇ ಬೇಕಾಗಿರುವಂತಹ ಒಂದು ಪ್ರಮುಖ ವಿಚಾರ. ಆದರೆ ಇದು ಸೆಲೆಬ್ರಿಟಿಗಳ ಜೀವನದಲ್ಲಿ ನಡೆದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಸಿನಿಮಾ ಮಂದಿ ಪರಸ್ಪರ ಪ್ರೀತಿಸಿ ಮದುವೆಯಾಗುವುದನ್ನು ನೀವು ನೋಡಿರುತ್ತೀರಿ. ಈ ಕಾರ್ಯಕ್ರಮ ಕೇವಲ ಸಿನಿಮಾಗಳಿಗೆ ಮಾತ್ರ ಹೊರತಾಗದೆ ಧಾರವಾಹಿ ಕ್ಷೇತ್ರದಲ್ಲಿ ಕೂಡ ಅಳವಡಿಕೆಯಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ಧಾರವಾಹಿಯಲ್ಲಿ ಪ್ರೀತಿಸಿ ಮದುವೆಯಾಗಿರುವ ಜೋಡಿಗಳ ಕುರಿತಂತೆ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾರೆಲ್ಲ ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಯಶ್ ಹಾಗೂ ರಾಧಿಕಾ ಪಂಡಿತ್; ಹೌದು ಗೆಳೆಯರೆ ಖಂಡಿತವಾಗಿ ಇವರಿಬ್ಬರ ಹೆಸರು ಇಳಿಸಿ ನಲ್ಲಿ ಮೊದಲಿಗೆ ಬರುತ್ತದೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇವರಿಬ್ಬರು ಮೊದಲು ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ ಎನ್ನುವ ಧಾರವಾಹಿಯಲ್ಲಿ ಜೊತೆಯಾಗಿ ಮೊದಲಿಗೆ ನಟಿಸಿದ್ದರು. ಅಷ್ಟು ಮಾತ್ರವಲ್ಲದೆ ಜೊತೆಯಾಗಿ ಮೊದಲ ಸಿನಿಮಾದಲ್ಲಿ ಕೂಡ ಹೊಟ್ಟೆಗೆ ನಟಿಸುತ್ತಾರೆ. ಮೊಗ್ಗಿನ ಮನಸು ಸಿನಿಮಾದ ಮೂಲಕ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿದ ನಂತರ ಇವರು ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿಯೇ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇದು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿರುವ ಈ ಜೋಡಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಂದೆ-ತಾಯಿ ಆಗಿದ್ದಾರೆ.

ಪ್ರಶಾಂತ್ ಹಾಗೂ ರೂಪ; ಪ್ರಶಾಂತ್ ಹಾಗೂ ರೂಪ ಕೂಡ ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಸಿಲ್ಲಿ ಲಲ್ಲಿ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಇವರಿಬ್ಬರೂ ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ರಾಜ-ರಾಣಿ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು.

ದೀಪಿಕಾ ಹಾಗೂ ಆಕಾಶ್; ಕುಲವಧು ಧಾರವಾಹಿಯ ಮೂಲಕ ಪ್ರಸಿದ್ಧರಾಗಿರುವ ಇವರಿಬ್ಬರು ಈಗ ನಿಜ ಜೀವನದಲ್ಲಿ ಕೂಡ ಪ್ರೀತಿಸಿ ಪರಸ್ಪರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗುವ ಮೂಲಕ ದಂಪತಿಗಳಾಗಿದ್ದಾರೆ. ಐಶ್ವರ್ಯ ಸಾಲಿಮಠ್ ಹಾಗೂ ವಿನಯ್; ಮಹಾಸತಿ ಧಾರವಾಹಿ ಮೂಲಕ ಕಿರುತೆರೆ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಐಶ್ವರ್ಯ ಸಾಲಿಮಠ್ ಹಾಗೂ ವಿನಯ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಜೊತೆಯಾಗಿ ಸಂಸಾರ ನಡೆಸುತ್ತಿದ್ದಾರೆ.

ಚಂದನ್ ಗೌಡ ಹಾಗೂ ಕವಿತಾ ಗೌಡ; ಈ ಜೋಡಿ ಕುರಿತಂತೆ ಹೇಳೋದೇ ಬೇಡ ಬಿಡಿ ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಯಶಸ್ವಿ ಧಾರವಾಹಿಗಳಲ್ಲಿ ಒಂದಾಗಿರುವ ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದವರು. ಮದುವೆ ಆಗುವವರೆಗೂ ಕೂಡ ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರಿಲಿಲ್ಲ. ಇವರಿಬ್ಬರು ಕೇವಲ ಸ್ನೇಹಿತರು ಮಾತ್ರ ಎಂಬ ಭಾವನೆ ಎಲ್ಲರಲ್ಲಿತ್ತು. ಇತ್ತೀಚಿಗಷ್ಟೆ ಲಾಕ್ಡೌನ್ ಸಂದರ್ಭದಲ್ಲಿ ಇವರಿಬ್ಬರು ಸರಳವಾಗಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲಾವಣ್ಯ ಹಾಗೂ ಶಶಿ; ಸಂಘರ್ಷ ಹಾಗೂ ದಾಸ ಪುರಂದರ ಧಾರವಾಹಿಯಲ್ಲಿ ಕಾಣಿಸಿಕೊಂಡಿರುವ ನಟಿ ಲಾವಣ್ಯ ಅವರು ತಮ್ಮೊಂದಿಗೆ ನಟಿಸಿರುವ ಶಶಿ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಘು ಹಾಗೂ ಅಮೃತ; ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿ ಖ್ಯಾತಿಯ ರಘು ಹಾಗೂ ಅಮೃತ ರವರು ಇದೇ ಧಾರವಾಹಿ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಮೂಡುತ್ತದೆ. ಈಗಾಗಲೇ ಇವರಿಬ್ಬರು ಮದುವೆಯಾಗಿ ಒಂದು ಮಗುವಿಗೆ ಜನ್ಮವನ್ನು ಕೂಡ ನೀಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ; ಹೌದು ಗೆಳೆಯರೇ ಇವರಿಬ್ಬರು ಧಾರಾವಾಹಿಯಲ್ಲಿ ನಟಿಸಲು ಇರಬಹುದು ಆದರೆ ಬಿಗ್ ಬಾಸ್ ಸೀಸನ್ 5ರ ಮೂಲಕ ಇವರಿಬ್ಬರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಉಂಟಾಗಿ ಕೆಲವು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದಾರೆ.

ಇಶಿತ ಹಾಗೂ ಮುರುಗ; ಇಶಿತ ರವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. ಆದರೆ ಅವರ ಪತಿ ಮುರುಗ ಯಾವುದೇ ಧಾರವಾಹಿಗಳಲ್ಲಿ ನಟಿಸಿದ ಇರಬಹುದು ಆದರೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಇಶಿತ ರವರಿಗೆ ಮುರುಗ ರವರೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದರು. ಹೀಗಾಗಿ ಇದೇ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಉಂಟಾಗಿ ಮದುವೆಯಾಗಿದ್ದಾರೆ.

ರಮೇಶ್ ಪಂಡಿತ್ ಹಾಗೂ ಸುನೇತ್ರಾ; ಹಲವಾರು ದಾರವಾಹಿಗಳು ಹಾಗೂ ಸಿನಿಮಾದಲ್ಲಿ ಕೂಡ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು ಇವರು ಕೂಡ ಈ ಕ್ಷೇತ್ರದಲ್ಲಿ ಪ್ರೀತಿಸಿ ಮದುವೆಯಾದವರು. ಶ್ವೇತಾ ಪ್ರಸಾದ್ ಹಾಗೂ ಆರ್ ಜೆ ಪ್ರದೀಪ್; ರಾಧಾ ರಮಣ ಧಾರವಾಹಿಯ ಮೂಲಕ ಪ್ರತಿಯೊಬ್ಬರ ಮನವನ್ನು ಗೆದ್ದಿರುವ ನಟಿ ಶ್ವೇತಾ ಪ್ರಸಾದ್ ರವರು ರೇಡಿಯೋ ಜಾಕಿ ಪ್ರದೀಪ್ ರವರನ್ನು ಮದುವೆಯಾಗಿದ್ದಾರೆ. ಈ ಇಷ್ಟು ಜೋಡಿಗಳಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾವುದು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.