ಆರ್ಸಿಬಿ ಕೊನೆಗೂ ಬುದ್ದಿ ಕಲಿತದ್ದು ಹೇಗೆ ಗೊತ್ತೇ?? ಮಹತ್ವದ ಗುಜರಾತ್ ಪಂದ್ಯದಲ್ಲಿ ಸಿರಾಜ್ ಕೈಬಿಟ್ಟು ಸಿದ್ದಾರ್ಥ್ ರವರ ಆಯ್ಕೆ ಮಾಡಿದ್ದು ಯಾಕೆ ಗೊತ್ತೇ??

58

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದಿರುವಂತಹ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕೂಡ ಅಭಿಮಾನಿಗಳು ಕಾಯುತ್ತಿದ್ದ ಫಲಿತಾಂಶವನ್ನೇ ನೀಡಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಆರ್ಸಿಬಿ ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತಿ ಟೈಟನ್ಸ್ ತಂಡದ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ. ನಿನ್ನೆ ನಡೆದಿರುವಂತಹ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ನೀಡಿದಂತಹ ಗುರಿಯನ್ನು ಸುಲಭವಾಗಿ ಬೆನ್ನತ್ತಿ ಗೆಲ್ಲಲು ಯಶಸ್ವಿಯಾಗಿದೆ.

ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಲಿ ಎಂಬುದಾಗಿ ಪ್ರಾರ್ಥಿಸುತ್ತಿದೆ ಎನ್ನಬಹುದಾಗಿದೆ. ಹೌದು ಗೆಳೆಯರೆ ಮುಂಬೈ ತಂಡದ ವಿರುದ್ಧ ಡೆಲ್ಲಿ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ರೇಸ್ ನಿಂದ ಹೊರಬೀಳಲಿದೆ. ಹೀಗಾಗಿ ಆರ್ಸಿಬಿ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಡೆಲ್ಲಿ ವಿರುದ್ಧ ಮುಂಬೈ ಗೆಲ್ಲುವುದು ಅನಿವಾರ್ಯವಾಗಿದೆ. ಇನ್ನು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ಬಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಈ ಬದಲಾವಣೆಯನ್ನು ವುದು ಹಲವಾರು ಪಂದ್ಯಗಳ ಮುಂಚೆಯೇ ನಡೆಯಬೇಕಾಗಿತ್ತು ಆದರೂ ಕೂಡ ಕೊನೆಗೆ ನಡೆದಿದೆ.

ಹೌದು ಗೆಳೆಯರೇ ಮೊಹಮ್ಮದ್ ಸಿರಾಜ್ ರವರ ಬದಲಿಗೆ ಸಿದ್ಧಾರ್ಥ್ ಕೌಲ್ ರವರು ಕಣಕ್ಕಿಳಿದಿದ್ದರು. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಐಪಿಎಲ್ ನಲ್ಲಿ ಮೊಹಮ್ಮದ್ ಸಿರಾಜ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಇದಕ್ಕೆ ಕಾರಣ ಕೂಡ ನೀಡಿರುವ ಡುಪ್ಲೆಸಿಸ್ ರವರು ಮೊಹಮ್ಮದ್ ಸಿರಾಜ್ ರವರ ಬದಲಿಗೆ ಸಿದ್ದಾರ್ಥ್ ಕೌಲ್ ರವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಪವರ್ ಪ್ಲೇ ಓವರ್ ನಲ್ಲಿ ಸಂಪೂರ್ಣ ನಿಯಂತ್ರಣ ವನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ ಎಂಬುದಾಗಿದೆ ಡುಪ್ಲೆಸಿಸ್ ರವರು ಹೇಳಿದ್ದಾರೆ. ಆದರೆ ನಿನ್ನೆಯ ಪಂದ್ಯದಲ್ಲಿ ಸಿರಾಜ್ ರವರ ಬದಲಿಗೆ ಸಿದ್ದಾರ್ಥ್ ಕೌಲ್ ರವರನ್ನು ತಂಡದಲ್ಲಿ ಸೇರಿಸಿಕೊಂಡಿರುವುದು ಹೆಚ್ಚಿನ ಪರಿಣಾಮವನ್ನೇನೂ ಬೀರಿಲ್ಲ ಎಂಬುದಾಗಿ ಹೇಳಬಹುದಾಗಿದೆ. ಸಿದ್ಧಾರ್ಥ ಕೂಡ ನಿನ್ನೆ ದುಬಾರಿಯಾಗಿ ಕಂಡು ಬಂದಿದ್ದರು.