ಬಿಗ್ ನ್ಯೂಸ್: ಮುಂದಿನ ಐಪಿಎಲ್ ನಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾದ ಬಿಸಿಸಿಐ, ಬೇಡವೇ ಬೇಡ ಎಂದ ಫ್ಯಾನ್ಸ್. ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಈ ಬಾರಿಯ ಐಪಿಎಲ್ ನ ಲೀಗ್ ಪಂದ್ಯಗಳು ಕೊನೆ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ನಂತರ ಈ ಬಾರಿಯ ಐಪಿಎಲ್ ನ ಪ್ಲೇಆಫ್ ಹಂತಗಳು ಹಾಗೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಪ್ರಾರಂಭವಾಗಲಿವೆ. ಇನ್ನು ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲವೂ ಕೂಡ ಹೆಚ್ಚಾಗಿದ್ದು ಬಹುತೇಕ ಎಲ್ಲಾ ಚಾಂಪಿಯನ್ ತಂಡಗಳು ಕೂಡ ರೇಸ್ ನಿಂದ ಹೊರಬಿದ್ದಿದ್ದಾರೆ. ಈ ಮೂಲಕ ಈ ಬಾರಿ ಹೊಸ ಚಾಂಪಿಯನ್ ಅನ್ನು ನಾವು ನೋಡಬಹುದಾಗಿದೆ ಎಂಬ ಭರವಸೆ ಮೂಡಿದೆ.
ಇನ್ನು ಈ ಬಾರಿಯ ಐಪಿಎಲ್ ಮುಗಿದ ನಂತರ ಮುಂದಿನ ತಿಂಗಳು ಅಂದರೆ ಜೂನ್ 12ರಂದು ಬಿಸಿಸಿಐ ಮುಂದಿನ ಐದು ವರ್ಷಗಳ ಪ್ರಸಾರ ಹಕ್ಕುಗಳಿಗಾಗಿ ಹರಾಜನ್ನು ಏರ್ಪಡಿಸಲಿದೆ. ಈ ಹರಾಜಿನಲ್ಲಿ ಅತ್ಯಂತ ದೊಡ್ಡ ಮೊತ್ತವನ್ನು ಬಿಡ್ ಮಾಡುವ ಸಂಸ್ಥೆ ಮುಂದಿನ ಐದು ವರ್ಷಗಳ ಐಪಿಎಲ್ ಅನ್ನು ಪ್ರಸಾರ ಮಾಡುವ ಹಕ್ಕನ್ನು ಪಡೆಯಲಿದೆ. ಇನ್ನು ಈ ಹರಾಜಿನಲ್ಲಿ ರೇಸಿಗೆ ತಿಳಿದಿರುವ ಸಂಸ್ಥೆಗಳು ಯಾವುವೆಂದರೆ ಸ್ಟಾರ್ ಇಂಡಿಯಾ ವಯಾಕಾಮ್ 18 ಅಮೆಜಾನ್ ಜೀ ಸಂಸ್ಥೆ ಡ್ರೀಮ್ 11 ಇಷ್ಟು ಮಾತ್ರವಲ್ಲದೆ ಈ ಬಾರಿ ಬೇರೆ ದೇಶದ ವಾಹಿನಿ ಸಂಸ್ಥೆಗಳು ಕೂಡ ರೇಸಿನಲ್ಲಿ ಇಳಿದಿವೆ. ದಕ್ಷಿಣ ಆಫ್ರಿಕಾ ಮೂಲದ ಸೂಪರ್ ಸ್ಪೋರ್ಟ್ಸ್ ಚಾನೆಲ್ ಗ್ರೂಪ್ ಹಾಗೂ ಯುಕೆಯ ಸ್ಕೈ ಸ್ಪೋರ್ಟ್ಸ್ ಪ್ರಸಾರ ಕಂಪನಿಗಳು ಕೂಡ ಈ ಸಾಲಿನಲ್ಲಿವೆ. ಇನ್ನು ಮುಂದಿನ ಐಪಿಎಲ್ ನಿಂದ ಮ್ಯಾಚಿನ ಟೈಮ್ ಅನ್ನು ಕೂಡ ಬದಲಾಯಿಸಲಾಗಿದೆ.

ಈಗಾಗಲೇ ಬಿಸಿಸಿಐ ಹೇಳಿರುವ ಪ್ರಕಾರ ಮುಂದಿನ ಸೀಸನ್ ನಿಂದ ದಿನದಲ್ಲಿ ಎರಡು ಪಂದ್ಯಗಳನ್ನು ಅತ್ಯಂತ ಕಡಿಮೆಯಾಗಿ ಆಡಿಸುವ ಕುರಿತಂತೆ ಚಿಂತೆ ಮಾಡಲಾಗಿದೆ. ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಮಧ್ಯಾಹ್ನದ ಪಂದ್ಯಗಳನ್ನು 3.30 ಹಾಗೂ ರಾತ್ರಿಯ ಪಂದ್ಯಗಳನ್ನು 7.30 ಗೆ ಆಡಿಸಲಾಗುತ್ತಿತ್ತು. ಇನ್ನು ಪ್ರಸಾರ ಹಕ್ಕು ಹರಾಜಿನ ಮುನ್ನ ವಾಗಿ ಸಂಸ್ಥೆಗಳಿಗೆ ಬಿಸಿಸಿಐ ತಿಳಿಸಿರುವಂತೆ ಮುಂದಿನ ಐಪಿಎಲ್ ನಿಂದ ಮಧ್ಯಾಹ್ನದ ಪಂದ್ಯಗಳು 4ಗಂಟೆಗೆ ಹಾಗೂ ರಾತ್ರಿಯ ಪಂದ್ಯಗಳು 8ಗಂಟೆಗೆ ಆರಂಭವಾಗಲಿವೆ. ಈ ಹಿಂದಿನ ಆರಂಭಿಕ ಐಪಿಎಲ್ನಲ್ಲಿ ಕೂಡ ಈ ಸಮಯದಲ್ಲಿ ಪಂದ್ಯಾಟಗಳನ್ನು ಆಡಿಸಲಾಗುತ್ತಿತ್ತು. ಆದರೆ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಪ್ರಸಾರವನ್ನು ಆರಂಭಿಸುವ ಸಲುವಾಗಿ ಈಗ ಇರುವಂತಹ ಸಮಯದ ಬೇಡಿಕೆ ಇಟ್ಟ ಕಾರಣದಿಂದಾಗಿ ಸಮಯವನ್ನು ಬದಲಾಯಿಸಲಾಗಿತ್ತು ಈಗ ಮತ್ತೆ ಮುಂದಿನ ಐಪಿಎಲ್ನಲ್ಲಿ ಅದೇ ಹಳೆಯ ಸಮಯ ಮರುಕಳಿಸಲಿದೆ.