ಎರಡು ವರ್ಷಗಳ ಕಾಲ ಪ್ರೀತಿ ಮಾಡಿ, ಮನೆಯವರನ್ನು ಒಪ್ಪಿಸಿ ಮದುವೆಗೆ ಮುಗುರ್ತ ಫಿಕ್ಸ್ ಆಗಿದ್ದ ಸಮಯದಲ್ಲಿ ಈ ಜೋಡಿಯ ಬಾಳಲ್ಲಿ ವಿಧಿ ಆಟ ಏನಾಗಿದೆ ಗೊತ್ತೇ??

80

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೆ ನಡೆದಿರುವಂತಹ ಒಂದು ಘಟನೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ಅವರಿಬ್ಬರು ಪರಸ್ಪರ ಪ್ರೀತಿಸಿ ಮನೆಯವರನ್ನು ಕೂಡ ಒಪ್ಪಿಸಿ ಮದುವೆ ಆಗುವ ತಯಾರಿಯಲ್ಲಿದ್ದರು. ಆದರೆ ಅವರಿಬ್ಬರ ಹಣೆಬರಹದಲ್ಲಿ ವಿಧಿ ಬೇರೆನೇ ಬರೆದಿತ್ತು. ಹೌದು ಗೆಳೆಯರೇ ಈ ಘಟನೆ ಈಗ ಪ್ರತಿಯೊಬ್ಬರ ಕಣ್ಣಿನಲ್ಲಿ ನೀರು ಹರಿಯುವಂತೆ ಮಾಡಿದೆ. ಈ ಘಟನೆಯಲ್ಲಿ ನಡೆದಿದ್ದಾದರೂ ಏನು ಎಂಬುದರ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಅವರಿಬ್ಬರು ಜೀವನದಲ್ಲಿ ಎಷ್ಟು ಅದೃಷ್ಟ ಮಾಡಿದ್ದರು ಎಂದರೆ ಇಬ್ಬರೂ ಕೂಡ ಪ್ರೀತಿ ಅನ್ನುವ ಸುಮಧುರ ಬಾಂಧವರಲ್ಲಿ ಇಬ್ಬರು ಕೂಡ ಬಿದ್ದಿದ್ದರು. ಇವರಿಬ್ಬರ ಪ್ರೀತಿಗೆ ಮನೆಯವರು ಕೂಡ ಸಂಪೂರ್ಣ ಹೃದಯಪೂರ್ವಕವಾಗಿ ನಾವು ನಿಮ್ಮ ಮದುವೆ ಮಾಡಿಸುತ್ತೇವೆ ಎಂಬುದಾಗಿ ಸಂತೋಷದಿಂದಲೇ ಒಪ್ಪಿಕೊಂಡಿದ್ದರು. ಮದುವೆ ದಿನಾಂಕವು ಕೂಡ ಅದಾಗಲೇ ನಿಗದಿಯಾಗಿತ್ತು. ಇನ್ನೇನು ಪ್ರೀತಿಸಿದ ಇವರಿಬ್ಬರು ಮದುವೆಯಾಗಿ ದಾಂಪತ್ಯ ಜೀವನವನ್ನು ಸುಖಸಂತೋಷದಿಂದ ಬಾಳುತ್ತಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು ಆದರೆ ಅಲ್ಲಿ ನಡೆದಿರುವುದು ಬೇರೆ. ಅವರಿಬ್ಬರು ಒಂದಾಗಿ ಬಾಳುವುದು ವಿಧಿಗೆ ಇಷ್ಟ ಇರಲಿಲ್ಲ.

ತುಮಕೂರು ಜಿಲ್ಲೆಯ 23ವರ್ಷದ ಧನುಷ್ ಹಾಗೂ 22 ವರ್ಷದ ಸುಷ್ಮಾ ಎಂಬಿಬ್ಬರು ಪ್ರೀತಿಸುತ್ತಿದ್ದ ಜೋಡಿಗಳು. ಧನುಷ್ ಬೆಂಗಳೂರಿನಲ್ಲಿ ಮಳಿಗೆ ಅಂಗಡಿಯನ್ನು ಮಾಡಿಕೊಂಡು ವ್ಯಾಪಾರದ ವಹಿವಾಟನ್ನು ನಡೆಸುತ್ತಿದ್ದ. ಇನ್ನು ಸುಷ್ಮಾ ವಿದ್ಯಾಭ್ಯಾಸ ಮಾಡುತ್ತಿದ್ದು ಎಂಕಾಂ ಓದುತ್ತಿದ್ದಳು. ಇವರಿಬ್ಬರು ಪ್ರೀತಿ ಮಾಡುತ್ತಿರುವ ವಿಚಾರ ಮನೆಯವರಿಗೆ ಗೊತ್ತಾಗುತ್ತಿದ್ದಂತೆಯೇ ಇಬ್ಬರಿಗೂ ಕೂಡ ಸಂತೋಷದಿಂದ ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು.

ಆದರೆ ಇವರಿಬ್ಬರ ಸಂತೋಷದ ಜೀವನಕ್ಕೆ ವಿಧಿ ವಿಲನ್ ಆಗಿ ಪರಿಣಮಿಸಿತು. ಹೌದು ಗೆಳೆಯರೇ ಧನುಷ್ ಮೇ ಹನ್ನೊಂದಕ್ಕೆ ಊರಿನ ಹಬ್ಬಕ್ಕೆಂದು ಬೆಂಗಳೂರಿನಿಂದ ತುಮಕೂರಿಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ನೆಲಮಂಗಲದಲ್ಲಿ ನಡೆದಂತಹ ವಾಹನ ಅಪಘಾ’ತ ದಲ್ಲಿ ಸ್ಥಳದಲ್ಲಿಯೇ ಮರಣವನ್ನು ಹೊಂದುತ್ತಾರೆ. ಇದು ಸುಷ್ಮಾ ರವರಿಗೆ ಅರಗಿಸಿಕೊಳ್ಳಲಾಗದಂಥ ದುಃಖವನ್ನು ನೀಡುತ್ತದೆ. ಹೀಗಿದ್ದರೂ ಕೂಡ ಧನುಷ್ ಅವರ ಕೊನೆಯ ಸಂಸ್ಕಾರದಲ್ಲಿ ಅವರು ದುಃಖದಿಂದಲೇ ಭಾಗಿಯಾಗುತ್ತಾರೆ. ಇನ್ನು ಮುಂದೆ ನಾನು ಪ್ರೀತಿಸಿದ ಧನುಷ್ ನನ್ನು ಕಾಣಲು ಸಾಧ್ಯವಿಲ್ಲ ಮದುವೆಯಾಗಲು ಸಾಧ್ಯವಿಲ್ಲ ಎಂದು ಅರಿತ ಸುಷ್ಮಾ ಮೇ 14ರಂದು ವಿ’ಷವನ್ನು ಸೇವಿಸುತ್ತಾರೆ.

ಈ ಸಂದರ್ಭದಲ್ಲಿ ಅವರ ಪೋಷಕರು ತುಂಬಾ ಆಸ್ಪತ್ರೆಗಳಿಗೆ ಆಕೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿ ಉಳಿಸಲು ಯತ್ನಿಸಿದರು ಕೂಡ ಅದಾಗಲೇ ಸುಷ್ಮಾ ಧನುಷ್ ನನ್ನು ಸ್ವರ್ಗದಲ್ಲಿ ಸೇರಲು ಸಂಪೂರ್ಣವಾಗಿ ಸಿದ್ದಳಾಗಿದ್ದಳು. ಹೌದು ಗೆಳೆಯರೇ ಅದೇ ದಿನ ರಾತ್ರಿ 8 ಗಂಟೆಯ ಸಂದರ್ಭದಲ್ಲಿ ಸುಷ್ಮಾ ಕೊನೆಯ ಉಸಿರನ್ನು ಚೆಲ್ಲುತ್ತಾಳೆ. ಇಬ್ಬರನ್ನು ಕೂಡ ಅಕ್ಕಪಕ್ಕದಲ್ಲಿಯೇ ಮಣ್ಣು ಮಾಡಬೇಕು ಎನ್ನುವ ಸುಷ್ಮಾ ಆಸೆಯನ್ನು ಕೂಡ ಈಡೇರಿಸಲಾಗಿದೆ. ನಿಜಕ್ಕೂ ಮರಣದಲ್ಲಿ ಕೂಡ ಒಂದಾದ ಈ ಜೋಡಿಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

ಪ್ರೀತಿ ಎನ್ನುವುದು ಪವಿತ್ರವಾದ ಸಂಬಂಧ ಎನ್ನುತ್ತಾರೆ ಆದರೆ ಮಗಳನ್ನು ಕಳೆದುಕೊಂಡಿರುವ ದುಃಖ ಆ ಪೋಷಕರಿಗೆ ಹೇಗೆ ತಾನೆ ಭರಿಸಲು ಸಾಧ್ಯ ಹೇಳಿ. ಸುಷ್ಮಾ ಪ್ರಾಣವನ್ನು ಕಳೆದು ಕೊಳ್ಳುವ ಮೊದಲು ತನ್ನ ಹೆತ್ತವರ ಕುರಿತಂತೆ ಚಿಂತಿಸ ಬೇಕಾಗಿತ್ತು ಎನ್ನುವುದಾಗಿ ಕೂಡ ಕೆಲವರು ಹೇಳುತ್ತಿದ್ದಾರೆ. ಸುಷ್ಮಾ ತೆಗೆದುಕೊಂಡ ಈ ನಿರ್ಧಾರದ ಕುರಿತಂತೆ ಕೂಡ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.